ದಾವಣಗೆರೆ: ಮುಂದಿನ ರಾಜಕಾರಣದ ತಿರುವು ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯಿಂದಲೇ ಆರಂಭವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
Advertisement
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪೂರ್ಣ ಪ್ರಮಾಣದ ಬಹುಮತ ಸರ್ಕಾರ ತರವಲ್ಲಿ ಈ ಸಭೆ ತಿರುವು ಕೊಡುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಸರ್ಕಾರಕ್ಕೆ ಬಹುಮತ ಬಂದಿಲ್ಲ. ಜನರು ಆಡಳಿತ ಮಾಡಿ ಅಂತಾರೇ ಆದರೆ ಬಹುಮತ ಕೊಡುವುದಿಲ್ಲ. ಹೀಗಾಗಿ ಈ ಸಭೆ ರಾಜಕೀಯ ತಿರುವು ಪಡೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲೂ ಗುಜರಾತ್ ಮಾದರಿ ಸಂಪುಟ ರಚನೆಯಾದರೆ ಒಳ್ಳೆಯದು: ವಿಜಯೇಂದ್ರ
Advertisement
Advertisement
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್ ಏರಿಕೆಗೂ ರಾಜಕಾರಣಕ್ಕೂ ಸಂಬಂಧ ಇಲ್ಲ. ಅಸೆಂಬ್ಲಿ ಸೇರಿದಂತೆ ಮೂರು ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದೇವೆ. ಯಾವ ಪಕ್ಷಕ್ಕೆ ಮತ ಹಾಕಬೇಕು, ಯಾರ ನೇತೃತ್ವದ ನಾಯಕತ್ವಕ್ಕೆ ಮತ ಹಾಕಬೇಕು ಎಂಬುದು ಜನರಿಗೂ ಗೊತ್ತು ಎಂದು ಹೇಳಿದರು. ಇದನ್ನೂ ಓದಿ: ಯೋಗಿ ತಂದೆಯನ್ನು ಟೀಕಿಸಿದ್ದ ಎಸ್‍ಪಿ ನಾಯಕರ ವಿರುದ್ಧ ಎಫ್‍ಐಆರ್
Advertisement