ಬೆಂಗಳೂರು: ಈಶ್ವರಪ್ಪ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣದಲ್ಲಿ ಮಾಡೆಲ್ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಮಾಡೆಲ್ ಜೊತೆಗಿನ ಸಂಬಂಧದ ವೀಡಿಯೋಗಳಿಗಾಗಿ ಕಿಡ್ನ್ಯಾಪ್ ಯತ್ನ ನಡೆದಿತ್ತು ಅನ್ನೋ ಮಾತುಗಳು ಕೇಳಿಬಂದಿದ್ದವು. ಆ ನಂತರ ಕಣ್ಮರೆಯಾಗಿದ್ದ ಮಾಡೆಲ್ ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ.
ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣದಲ್ಲಿ ಬಿಎಸ್‍ವೈ ಪಿಎ ಸಂತೋಷ ಮೊಬೈಲ್ ನೀಡಿರಲಿಲ್ಲ. ತನಿಖೆಗೆ ಮೊಬೈಲ್ ನೀಡದೆ ಸಂತೋಷ್ ವಿಚಾರಣೆಗೆ ಸ್ಪಂದಿಸ್ತಿಲ್ಲ. ಹೀಗಾಗಿ ಸಂತೋಷನಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನ ರದ್ದುಪಡಿಸಬೇಕು ಅಂತಾ ಪೊಲೀಸರು ಕೋರ್ಟ್ ಮೆಟ್ಟಿಲು ಹತ್ತಿದ್ದು, ವಿಚಾರಣೆಗೆ ಬರಬೇಕಿದೆ ಎಂದು ಹೇಳಿದ್ದರು.
Advertisement
Advertisement
ಕಿಡ್ನ್ಯಾಪ್ ಯತ್ನದ ನಂತರ ಮಾಡೆಲ್ ಹೆಸರೂ ಕೂಡ ಕೇಳಿ ಬಂದಿತ್ತು. ನನ್ನ ಹೆಸರನ್ನು ಪ್ರಕರಣದಲ್ಲಿ ಎಳೆದು ತಂದವರನ್ನ ನಾನು ಸುಮ್ಮನೇ ಬಿಡೋದಿಲ್ಲ. ಕಂಪ್ಲೆಂಟ್ ಕೊಡ್ತೀನಿ, ಅದು ಮಾಡ್ತೀನಿ, ಇದು ಮಾಡ್ತೀನಿ ಅಂದೋರು ವಾರದ ಹಿಂದೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
Advertisement
Advertisement
ವಿನಯ್ ಮತ್ತು ಸಂತೋಷ್ ನಡುವೆ ನಿಮ್ಮ ಸಂಬಂಧ ಎಂತಹದ್ದು? ಅಲ್ಲದೇ ಮೂವರ ನಡುವೆ ಹಲವಾರು ಮೆಸೇಜ್ ಗಳು ಹೋಗಿವೆ. ಕಿಡ್ನ್ಯಾಪ್ ಪ್ರಕರಣದಲ್ಲಿ ತನಿಖೆಗೆ ನಿಮ್ಮ ಮೊಬೈಲ್ ಅವಶ್ಯಕತೆಯಿದೆ. ಹೀಗಾಗಿ ನಿಮ್ಮ ಮೊಬೈಲ್ ನೀಡಬೇಕು ಅಂತಾ ಮಾಡೆಲ್ ಗೆ ನೋಟೀಸ್ ನೀಡಲಾಗಿತ್ತು. ಇದೀಗ ಮಲ್ಲೇಶ್ವರಂ ಎಸಿಪಿ ಬಡಿಗೇರ್ ಮುಂದೆ ಹಾಜರಾಗಿ ಮಾಡೆಲ್ ತಮ್ಮ ಮೊಬೈಲ್ ನೀಡಿದ್ದಾರೆ.
ವಿನಯ್ ಜೊತೆಯಲ್ಲಿದ್ದಾಗ ಮಾಡೆಲ್ ಮೊಬೈಲ್ ಗೆ ಸಂತೋಷ ಮೆಸೇಜ್ ಮಾಡಿದ್ದಾನೆ. ಅದನ್ನ ವಿನಯ್ ಗೆ ತೋರಿಸಿದ ಮಾಡೆಲ್, ನೆಕ್ಸ್ಟ್ ರಿಯಾಕ್ಷಗಳನ್ನೆಲ್ಲಾ ವಿನಯ್ ಹೇಳಿದ ಹಾಗೆ ಮೆಸೇಜ್ ಮಾಡಿದ್ದಾರೆ. ಈ ಎಲ್ಲಾ ಸ್ಕ್ರೀನ್ ಶಾಟ್ ಗಳನ್ನು ವಿನಯ್ ಗೆ ಕೊಟ್ಟಿದ್ದು, ಅದನ್ನ ಪಡೆದುಕೊಳ್ಳಲು ಸಂತೋಷ ಕಿಡ್ನ್ಯಾಪ್ ಗೆ ಯತ್ನಿಸಿದ್ದ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಇನ್ನು ವಿನಯ್ ಗೂ ಕೂಡ ಮೊಬೈಲ್ ನೀಡುವಂತೆ ನೋಟೀಸ್ ಕೊಡಲಾಗಿದೆ. ಮೊಬೈಲ್ ಗಳನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳಿಸಿ ಸತ್ಯಾಂಶ ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸ್ತಿದ್ದಾರೆ.
https://www.youtube.com/watch?v=kMLCLgKOZUY