ಶಿವಮೊಗ್ಗ: ಸಿದ್ದರಾಮಯ್ಯ ಒಬ್ಬ ದಡ್ಡ ವಡ್ಡ. ಅವರಿಗೆ ತಲೆ ಇದ್ದಿದ್ದರೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರಿಗೆ ದಡ್ಡ ಎಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾರೂ ಇಲ್ಲಿ ಹಿಂದಿ ಭಾಷೆ ಬಲವಂತವಾಗಿ ಹೇರಿಕೆ ಮಾಡುವ ಕೆಲಸ ಮಾಡುತ್ತಿಲ್ಲ. ಹಿಂದಿ ಭಾಷೆ ವಿಷಯವಾಗಿ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ಡೈವರ್ಟ್ ಮಾಡಲಾಗಿದ್ದು, ಇದರಲ್ಲಿ ರಾಜಕೀಯ ಕುತಂತ್ರ ಅಡಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ:ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ, ಯಾಕೆ ದ್ವೇಷಿಸ್ತಾರೋ ಗೊತ್ತಿಲ್ಲ: ಈಶ್ವರಪ್ಪ
Advertisement
ರಾಷ್ಟ್ರವನ್ನು ಒಗ್ಗೂಡಿಸುವ ಸಲುವಾಗಿ ಹಿಂದಿ ಭಾಷೆ ಜಾರಿಗೆ ಚಿಂತನೆ ನಡೆಸಲಾಗಿದೆ ಅಷ್ಟೇ. ನಮ್ಮ ಮಾತೃ ಭಾಷೆ ಕನ್ನಡ ಅದರ ನಂತರ ಹಿಂದಿ ಬರುತ್ತದೆ. ಆದರೆ ಸಿದ್ದರಾಮಯ್ಯ ಇಲ್ಲ ಸಲ್ಲದ ಹೇಳಿಕೆ ನೀಡುವ ಮೂಲಕ ಅಮಿತ್ ಶಾ ಅವರನ್ನು ದಡ್ಡ ಎಂದಿದ್ದಾರೆ. ಈ ಕೂಡಲೇ ಅವರ ಹೇಳಿಕೆ ಹಿಂಪಡೆಯುವ ಮೂಲಕ ಕ್ಷಮೆ ಕೋರಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
Advertisement
ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದಾಗಲೇ ಬಿಜೆಪಿ 25 ಸಂಸದರನ್ನು ಪಡೆದಿದೆ. ಹೀಗಿರುವಾಗ ಮೈತ್ರಿ ಇದ್ದರೆಷ್ಟು? ಹೋದರೆಷ್ಟು? ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಎರಡು ಪಕ್ಷಗಳು ನಿರ್ನಾಮವಾಗಿವೆ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ವಿಪಕ್ಷ ನಾಯಕನ ಸ್ಥಾನ ಸಹ ಕೈತಪ್ಪಿ ಹೋಗಲಿದೆ ಎಂಬ ಕಾರಣದಿಂದ ಸಿದ್ದರಾಮಯ್ಯ ವಿಲವಿಲ ಎಂದು ಒದ್ದಾಡುತ್ತಿದ್ದಾರೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ಇದುವರೆವಿಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಆಗಿಲ್ಲ. ಮೊದಲು ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಗಮನ ಹರಿಸಲಿ ಎಂದು ಸಿದ್ದರಾಮಯ್ಯರಿಗೆ ಸಚಿವ ಈಶ್ವರಪ್ಪ ಟಾಂಗ್ ನೀಡಿದರು.