ದೇವಸ್ಥಾನಗಳಿಗೆ ಸ್ವತಂತ್ರ ಕೊಟ್ಟರೆ ಇವರಿಗೇಕೆ ಉರಿ – ಡಿಕೆಶಿ ವಿರುದ್ಧ ಈಶ್ವರಪ್ಪ ವಾಗ್ದಾಳಿ

Public TV
2 Min Read
Eshwarappa

ಶಿವಮೊಗ್ಗ: ದೇವಸ್ಥಾನಗಳಿಗೆ ಸ್ವತಂತ್ರ ಕೊಟ್ಟರೆ ಇವರಿಗೆ ಏಕೆ ಉರಿ. ಇಲ್ಲಿಯವರೆಗೆ ಚರ್ಚ್‍ಗಳಿಗೆ, ಮಸೀದಿಗಳಿಗೆ ಸ್ವಾತಂತ್ರ್ಯ ಇದೆ. ದೇವಸ್ಥಾನಗಳಿಗೆ ಸ್ವಾತಂತ್ರ್ಯ ಕೊಟ್ಟ ತಕ್ಷಣ ಡಿ.ಕೆ. ಶಿವಕುಮಾರ್ ಏಕೆ ಬೇಸರ ಮಾಡಿಕೊಂಡರು ನನಗೆ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಮುಜರಾಯಿ ದೇವಸ್ಥಾನಗಳನ್ನು ಸರ್ಕಾರ ಮುಕ್ತಗೊಳಿಸುವ ವಿಚಾರವಾಗಿ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಅವರು ದೇವಸ್ಥಾನಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಡುತ್ತಾರೆ ಅಂತ ಹೇಳುವ ಮೊದಲು ಡಿಕೆಶಿ ಅವರು ಜಿಲ್ಲಾಧಿಕಾರಿ ಅವರಿಗೆ ಅರ್ಜಿ ಹಾಕಿಕೊಂಡು ಮುಸಲ್ಮಾನರು ಅಥವಾ ಕ್ರಿಶ್ಚಿಯನ್ ಆಗಿ ಮತಾಂತರವಾದರೆ ರಗಳೆ ಇಲ್ಲ. ದೇವಸ್ಥಾನಗಳಿಗೆ ಸ್ವತಂತ್ರ ಕೊಟ್ಟರೆ ಇವರಿಗೆ ಏಕೆ ಉರಿ. ಇಲ್ಲಿಯವರೆಗೆ ಚರ್ಚ್‍ಗಳಿಗೆ, ಮಸೀದಿಗಳಿಗೆ ಸ್ವಾತಂತ್ರ್ಯ ಇದೆ. ದೇವಸ್ಥಾನಗಳಿಗೆ ಸ್ವಾತಂತ್ರ್ಯ ಕೊಟ್ಟ ತಕ್ಷಣ ಡಿಕೆಶಿಗೆ ಏಕೆ ಬೇಸರ ಮಾಡಿಕೊಂಡರು ನನಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು

DKS 2

ಗೋಹತ್ಯೆ ನಿಷೇಧ, ಮತಾಂತರ ವಿಷಯ ಬಂದಾಗ ಈ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಡಿಕೆಶಿ ಅವರು ಕೇವಲ ಮುಸಲ್ಮಾನರನ್ನು, ಕ್ರಿಶ್ಚಿಯನ್ನರನ್ನು ತೃಪ್ತಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳಿಗೆ ತೊಂದರೆ ಆದರೂ ಪರವಾಗಿಲ್ಲ ಅಂತ ಯೋಚನೆ ಮಾಡುತ್ತಿದ್ದಾರೆ. ಗೋ ಹತ್ಯೆ ಮಾಡುವ ವ್ಯಕ್ತಿಗಳ ಬಗ್ಗೆ ಕ್ರಮ ಕೈಗೊಳ್ಳಿ ಅಂದರೂ ಕೈಗೊಳ್ಳಲಿಲ್ಲ. ಗೋಹತ್ಯೆ ನಿಲ್ಲಿಸುವವರನ್ನು ಜೈಲಿಗೆ ಕಳುಹಿಸಿದರು. ಡಿಕೆಶಿ ಅವರು ಇಲ್ಲಿಯೂ ರಾಜಕಾರಣ ತಂದರೆ ನಾನು ಏನು ಮಾಡುವುದಕ್ಕೆ ಆಗುವುದಿಲ್ಲ. ಡಿಕೆಶಿ ಅವರಿಗೆ ದೇವಸ್ಥಾನ ಅಭಿವೃದ್ಧಿ ಆಗುವುದು ಬೇಕಿಲ್ಲ. ಗೋಹತ್ಯೆ ಮಾಡಿದರೆ, ನಮ್ಮ ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಅವರಿಗೆ ನೋವು ಇಲ್ಲ. ಹೀಗಾಗಿ ಡಿಕೆಶಿ ಮುಸಲ್ಮಾನ್ ಇಲ್ಲವೇ ಕ್ರಿಶ್ಚಿಯನ್ ಆಗುವುದು ಒಳ್ಳೆಯದು ಎಂದಿದ್ದಾರೆ.

TEMPLE 2

ದೇವಸ್ಥಾನಕ್ಕೆ ಕೈ ಹಾಕಿದರೆ ಸರ್ಕಾರ ಭಸ್ಮ ಆಗುತ್ತದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ ಭಸ್ಮ ಆಗಿದೆಯಾ, ಬಿಜೆಪಿ ಭಸ್ಮ ಆಗಿದೆಯಾ? ಗೋಹತ್ಯೆ ಮಾಡಿದ್ದಕೋಸ್ಕರ ಕಾಂಗ್ರೆಸ್ ಭಸ್ಮ ಆಗಿದೆ. ಮತಾಂತರ ನಿಷೇಧ ಕಾಯ್ದೆ ವಿರೋಧ ಮಾಡುತ್ತಿದ್ದಾರೆ. ಅದಕ್ಕೂ ಭಸ್ಮ ಆಗುತ್ತಿದೆ. ದೇಶ ಭಕ್ತರು, ಧರ್ಮ ಭಕ್ತರು ಬಿಜೆಪಿಯಲ್ಲಿ ಇರುತ್ತಾರೆ. ರಾಷ್ಟ್ರ ಭಕ್ತಿ, ಧರ್ಮ ಭಕ್ತಿಯನ್ನು ನಮಗೆ ಆರ್‌ಎಸ್‌ಎಸ್‌ ಹೇಳಿಕೊಟ್ಟಿದೆ. ನಾವೆಲ್ಲರೂ ಆರ್‌ಎಸ್‌ಎಸ್‌ ಬೆಂಬಲಿಗರೇ ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: PM ಕಿಸಾನ್ ಯೋಜನೆ 10ನೇ ಕಂತಿನಡಿ ಕರ್ನಾಟಕಕ್ಕೆ 685 ಕೋಟಿ ರೂ.ಗೂ ಹೆಚ್ಚಿನ ಹಣ ಬಿಡುಗಡೆ

KS Eshwarappa 1

ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಅಂದ ಮೇಲೆ ಕಾಂಗ್ರೆಸ್‍ನವರು ಬದುಕಿರಬೇಕಲ್ಲ. ನಮಗೆ ವಿರೋಧ ಪಕ್ಷವೇ ಇಲ್ಲ ಅಂತಿದ್ರೆ ಕಥೆ ಏನು ಡೆಮಾಕ್ರಸಿಯಲ್ಲಿ ವಿರೋಧ ಪಕ್ಷ ಇರಬೇಕು. ಹಾಗಾಗಿ ಕಾಂಗ್ರೆಸ್ ಸ್ವಲ್ಪ ಸ್ಥಾನ ತೆಗೆದುಕೊಳ್ಳುವುದಕ್ಕೆ ಜನ ಬಿಟ್ಟಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ಎಲ್ಲಿ ನಾವು ಎಡವಿದ್ದೇನೆ ಎಂದು ಗಮನಿಸಿ, ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *