ಶಿವಮೊಗ್ಗ: ಸಿಬಿಐ ತನಿಖೆಗೆ ವಹಿಸಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರ ಪ್ರಕರಣವನ್ನು ಸಚಿವ ಸಂಪುಟ ಹಿಂಪಡೆಯುವ ನಿರ್ಧಾರ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕಳ್ಳ ಯಾವತ್ತಿದ್ದರೂ ಕಳ್ಳನೇ. ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ. ಡಿಕೆಶಿ ಸಲುವಾಗಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಅಂಟಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಕಿಡಿ ಕಾರಿದ್ದಾರೆ.
ಮಹತ್ವದ ಬೆಳವಣಿಗೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ (CBI Investigation) ವಹಿಸಿದ್ದ ನಿರ್ಧಾರವನ್ನು ಹಿಂಪಡೆಯಲು ಗುರುವಾರ (ನ.23) ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಈಶ್ವರಪ್ಪ ಮಾತನಾಡಿದ್ದಾರೆ. ಇದನ್ನೂ ಓದಿ: ಸೂರ್ಯ ಬೆಂಕಿ ಆಟ- ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು
Advertisement
Advertisement
ಡಿಕೆಶಿ ವಿರುದ್ಧದ ಸಿಬಿಐ (CBI Case) ಕೇಸನ್ನು ಸಚಿವ ಸಂಪುಟ ವಾಪಸ್ ತಗೊಂಡಿರೋದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕಳ್ಳ ಯಾವತ್ತಿದ್ದರೂ ಕಳ್ಳನೇ, 135 ಸೀಟ್ ಬಂದಿದೆ ಅಂತ ಮಾಡಬಾರದ್ದನ್ನೆಲ್ಲಾ ಮಾಡ್ತಿದ್ದಾರೆ. 23 ಕೋಟಿ ಇದ್ದ ವರಮಾನ 163 ಕೋಟಿಗೆ ಹೆಚ್ಚಳವಾಗಿದೆ. ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದಾಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದ್ದರು. ಡಿಕೆಶಿ ನ್ಯಾಯಾಲಯಕ್ಕೆ ಹೋದರೂ ಅಲ್ಲಿ ತಿರಸ್ಕಾರವಾಯ್ತು. ಇದು ಇಡೀ ದೇಶಕ್ಕೆ ಗೊತ್ತು. ಸಿಬಿಐ ತನಿಖೆ ಅಂತಿಮ ಹಂತಕ್ಕೆ ಬಂದಿರುವಾಗ ಈ ರೀತಿ ಮಾಡೋದು ಸರಿಯಲ್ಲ. ಕೇಡಿ ಸಿದ್ದು ಸಚಿವ ಸಂಪುಟ ಕಳ್ಳರ ಗುಂಪಾಗಿದೆ, ಕೇಡಿ ಸಿದ್ದು ಅವರ ದರೋಡೆಕೋರರ ತಂಡ ದುರುಪಯೋಗ ಮಾಡಿಕೊಂಡಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
Advertisement
Advertisement
ಸಚಿವ ಕೆ.ಜೆ ಜಾರ್ಜ್ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು ನಂತರ ಸಚಿವ ಸಂಪುಟಕ್ಕೆ ಸೇರಿದರು. ನನ್ನ ಮೇಲೆ ಆಪಾದನೆ ಬಂತು ನಾನು ರಾಜೀನಾಮೆ ಕೊಟ್ಟೆ. ಸುಪ್ರೀಂ ಕೋರ್ಟ್ ತಜ್ಞರು ಹೇಳ್ತಿದ್ದಾರೆ ಸಿಬಿಐಗೆ ತನಿಖೆಗೆ ವಹಿಸಲು ಅನುಮತಿ ಇದೆ, ಆದ್ರೆ ಹಿಂಪಡೆಯಲು ಅನುಮತಿ ಬೇಕಿಲ್ಲ. ಸಿದ್ದರಾಮಯ್ಯ ಅವರಿಗೆ ಈ ವಿಷಯ ಗೊತ್ತಿಲ್ವಾ. ಡಿಕೆಶಿ ಕೇಸನ್ನ ವಾಪಸ್ ಪಡೆಯಬೇಕು ಅಂತಾ ಸಚಿವ ಸಂಪುಟ ಸಭೆಗೆ ಹೋಗಿಲ್ಲ. ಇದು ದೇಶದಲ್ಲೇ ದೊಡ್ಡ ಅಪರಾಧ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: T20 ಕದನಕ್ಕೆ ವಿಶ್ವಕಪ್ ದಾಖಲೆ ಉಡೀಸ್ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ
ಸಚಿವ ಸಂಪುಟ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮೊದಲ ವ್ಯಕ್ತಿ ಡಿಕೆಶಿ, ನಮಗೂ ಮುಂದೆ ಇಂತಹ ಸ್ಥಿತಿ ಬರಬಹುದು ಅಂತ ಅವರ ಕೇಂದ್ರದ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಒಪ್ಪಿಕೊಂಡಿರಬಹುದು. ಸಿದ್ದರಾಮಯ್ಯ ಅವರಿಗೆ ಖುರ್ಚಿ ಮುಖ್ಯವೇ ಹೊರತು ನ್ಯಾಯವಲ್ಲ. ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ನಾಯಕರಿಗೆ ಇದು ಗೊತ್ತಿಲ್ಲವೇ? ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಗೂಂಡಾಗಳಿಗೆ ರಕ್ಷಣೆ ಕೊಡುವ ಸರ್ಕಾರವಾಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಯಲ್ಲಿ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ. ಸಚಿವ ಸಂಪುಟಕ್ಕೆ ಬೆಲೆ ಇಲ್ಲ ಅಂತಾ ಇವರು ತೀರ್ಮಾನ ಮಾಡಿದ್ರು. ಸಂವಿಧಾನಕ್ಕೆ ಬೆಲೆ ಇದೆ ಅಲ್ಲಿ ಸರಿಯಾದ ತೀರ್ಪು ಬರುತ್ತದೆ, ಸಿಬಿಐ ತನಿಖೆಯಿಂದ ಡಿಕೆಶಿ ಕೇಸನ್ನು ಹಿಂಪಡೆಯುವ ನಿರ್ಧಾರವನ್ನು ಕೈಬಿಡಬೇಕು. ಸಿಬಿಐ ತಪ್ಪಿತಸ್ಥನಲ್ಲ ಅಂದ್ರೆ ಡಿಕೆಶಿ ಡಿಸಿಎಂ ಅಲ್ಲ ಸಿಎಂ ಬೇಕಾದರೂ ಆಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೆಗಾ ರಿಯಾಲಿಟಿ ಚೆಕ್‍ಗೆ ಭರ್ಜರಿ ಇಂಪ್ಯಾಕ್ಟ್- PUBLiC TVಗೆ ಸಾರ್ವಜನಿಕರು ಧನ್ಯವಾದ
ಇದೇ ವೇಳೆ ಜಾತಿಗಣತಿ ವರದಿ ಜಾರಿ ವಿಚಾರ ಕುರಿತು ಮಾತನಾಡಿ, 9 ವರ್ಷಗಳ ಹಿಂದೆ ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆ ಮಾಡ್ತೀನಿ ಅಂದ್ರು ಮಾಡಲಿಲ್ಲ. ಆಗ ಮಾಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಮೂಲ ಪ್ರತಿ ಕಳೆದಿದೆ ಅಂತಾ ಸಿಎಂ ಹೇಳ್ತಾರೆ, ಮೂಲ ಪ್ರತಿ ಕಳೆದಿಲ್ಲ ಅಂತಾ ಪರಮೇಶ್ವರ್ ಹೇಳ್ತಾರೆ. ಆಗ ಜಾತಿಜನಗಣತಿ ವರದಿ ಬಿಡುಗಡೆ ಮಾಡಿದ್ದರೇ ಜಾತಿ ಜಾತಿ ನಡುವೆ ಸಂಘರ್ಷ ಆಗ್ತಿರಲಿಲ್ಲ. ಜಾತಿ ಜನಗಣತಿಯ ಸಂಘರ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ ಎಂದು ದೂರಿದ್ದಾರೆ.
ಸಿದ್ದರಾಮಯ್ಯ ಹಿಂದುಳಿದವರಿಗೆ ದಲಿತರಿಗೆ ದ್ರೋಹ ಮಾಡ್ತಿದ್ದಾರೆ. ಡಿಕೆಶಿ ಅರ್ಧ ಆಯಸ್ಸು ಕೋರ್ಟಿಗೆ ಅಲೆಯುತ್ತಿದ್ದಾರೆ. ಸಚಿವ ಸಂಪುಟದ ಪಾವಿತ್ರ‍್ಯತೆ ಹಾಳು ಮಾಡ್ತಿದ್ದಾರೆ. ತನಿಖೆ ಮುಂದುವರಿದರೆ ನೂರಕ್ಕೆ ನೂರರಷ್ಟು ಡಿಕೆಶಿ ವಿರುದ್ದವಾಗಿ ತೀರ್ಪು ಬರಲಿದೆ. ಡಿಕೆಶಿ ಜೈಲಿಗೆ ಹೋಗ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ. ಡಿಕೆಶಿ ಸಲುವಾಗಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಅಂಟಿಸಿಕೊಂಡಿದ್ದಾರೆ ಎಂದು ಕೆಂಡಕಾರಿದ್ದಾರೆ.