ಕಲಬುರಗಿ: ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮ್ಮಿಶ್ರ ಸರ್ಕಾರ ಜೀವಂತ ಇದೆಯೋ ಇಲ್ಲವೋ ಎಂಬುದನ್ನು ತೋರಿಸಲಿ ಎಂದು ದೋಸ್ತಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಹಿಂದುಳಿದವರು, ದಲಿತರನ್ನು ಅಭಿವೃದ್ಧಿ ಮಾಡುತ್ತಿರುವುದು ಬಿಜೆಪಿಯವರು. ಆದ್ರೆ ಎಲ್ಲೋ ಒಂದು ಕಡೆ ನಾವು ಸಂಘಟನೆಯನ್ನ ಮರೆತ್ವಿ, ಸ್ವಲ್ಪ ಅತಿಯಾದ ಆತ್ಮವಿಶ್ವಾಸ ಇದ್ದಿದ್ದಕ್ಕೆ ಈ ಬಾರಿ ನಮಗೆ ಉಪಚುನಾವಣೆಯಲ್ಲಿ ಹಿನ್ನೆಡೆ ಆಗಿದೆ. ಕಾಂಗ್ರೆಸ್ ಉಪಚುನಾವಣೆಯಲ್ಲಿ ಗೆದಿದ್ದು ಕೇವಲ 1 ಸೀಟು. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ 104 ಗೆದ್ದ ಸೀಟಿನಿಂದ 78ಕ್ಕೆ ಇಳಿದಿದೆ. ಅಧಿಕಾರ ಕಳೆದುಕೊಂಡ್ರು ನಂದೆ ಸರ್ಕಾರ ಮುಂದೆ ನಾನೇ ಮುಖ್ಯಮಂತ್ರಿ ಎಂಬ ರೀತಿ ಸಿದ್ದರಾಮಯ್ಯ ಇದ್ದಾರೆ. ಚಾಮುಂಡಿಯಲ್ಲಿ ಸೋತು ಅಧಿಕಾರ ಕಳಕೊಂಡ್ರು ಕಾಂಗ್ರೆಸ್‍ಗೆ ಬುದ್ಧಿ ಬಂದಿಲ್ಲ. ಟಿಪ್ಪು ಜಯಂತಿ ಜಾರಿ ತಂದ ಮೂಲಪುರುಷ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡ್ರು, ಹೀಗಾಗಿ ಇಂದು ಹೆಚ್.ಡಿ.ಕುಮಾರಸ್ವಾಮಿ, ಕೆ.ಜೆ.ಜಾರ್ಜ್, ಸಾ.ರಾ.ಮಹೇಶ್ ಸೇರಿದಂತೆ ಹಲವರು ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಗೆದ್ದಿದೆ ಅವರಿಗೆ ಅಭಿನಂದನೆ ಸಲ್ಲಿಸ್ತಿನಿ, ಗೆದ್ದೆ ಎಂದು ಮೈಮರೆತು ಜನರನ್ನ ಮರಿಬೇಡಿ ಎಂದು ಟಾಂಗ್ ಕೊಟ್ಟಿದ್ದಾರೆ.
Advertisement
Advertisement
ದೋಸ್ತಿ ಸರ್ಕಾರ ಬರಗಾಲ ಕಾಮಗಾರಿಗೆ ಎಷ್ಟು ಹಣ ಬಿಡುಗಡೆ ಮಾಡಿದೆ? ಕಳಸಾ ಬಂಡೂರಿ ವಿವಾದ ವಿಚಾರವಾಗಿ ಸಮ್ಮಿಶ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿ. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ರಾಜ್ಯಸರ್ಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಏನು ಅಂತ ಮೂರು ತಿಂಗಳು ಕಾದು ನೋಡಿ ನಿಮಗೆ ತಿಳಿಯುತ್ತೆ. ಬಿಜೆಪಿ ಸೋಲು ಗೆಲುವು ಯಾವ ವ್ಯಕ್ತಿ ಮೇಲೆಯೂ ನಿಂತಿಲ್ಲ, ಕಾರ್ಯಕರ್ತರ ಪರಿಶ್ರಮ ಹಾಗೂ ನಾಯಕರ ಸಲಹೆ ಮೇಲೆ ನಿರ್ಧಾರವಾಗುತ್ತೆ. ಮುಂದಿನ ಲೋಕಸಭಾ ಚುನಾವಣೆಗೆ ಅಮಿತ್ ಷಾ ಅವರ ಮಾರ್ಗದರ್ಶನ ಇದೆ, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡ್ತೀವಿ. ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋತಿದೆ ಆದ್ರೆ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 24 ಸೀಟನ್ನಾದ್ರು ಗೆಲ್ತೀವಿ ಎಂದು ತಿಳಿಸಿದ್ದಾರೆ.
Advertisement
ಜನಾರ್ದನ ರೆಡ್ಡಿ ಅವರ ವಿಚಾರವಾಗಿ ಪತ್ರಕರ್ತರು ಪ್ರಶ್ನಿಸಿದಾಗ, ಅವರ ಬಗ್ಗೆ ನನಗೆ ಗೊತ್ತಿಲ್ಲ. ಯಾವ ವ್ಯಕ್ತಿಗಳ ಮೇಲೆಯೂ ಬಿಜೆಪಿ ನಿಂತಿಲ್ಲ. ಈಗ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷದಲ್ಲಿ ಇಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯೆಸಿದ್ದಾರೆ.
Advertisement
ನಾನು ಹಿಂದೂ ವಿಚಾರಕರ್ತನೇ ಹೊರತು ಹಿಂದೂ ನಾಯಕ ಅಲ್ಲ. ಜಾತಿ, ಕೋಮು ಗಲಭೆಗಳಿಗೆ ಬೆಂಬಲ ಕೊಡ್ತಿರೋದು ಕಾಂಗ್ರೆಸ್ ನಾಯಕರು ಬಿಜೆಪಿ ಅಲ್ಲ. ಮಣ್ಣಿನ ಮಗ ನಾನು ಎಂದು ದೇವೇಗೌಡ್ರು ಹೇಳ್ತಾರೆ, ಅಹಿಂದ ನಾಯಕ ನಾನು ಅಂತಾ ಸಿದ್ದರಾಮಯ್ಯ ಸ್ವಯಂಘೋಷಣೆ ಮಾಡಕೊಂಡು ಓಡಾಡುತ್ತಾರೆ. ಹಾಗಾದ್ರೆ ನಾವೇನು ಕಲ್ಲಿನ ಮಕ್ಕಳಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಒಂದು ಕಾಲದಲ್ಲಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ಗುರು ಶಿಷ್ಯರು. ಆಮೇಲೆ ವೈರಿಗಳಾದರು ಈಗ ಮತ್ತೆ ಇಬ್ಬರು ಒಟ್ಟಾಗಿದ್ದಾರೆ ಎಂದು ಈಶ್ವರಪ್ಪ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews