ರಾಯಚೂರು: ಕೆ.ಎಸ್.ಈಶ್ವರಪ್ಪನವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನ ಸದಸ್ಯತ್ವವನ್ನೇ ಪಡೆದಿಲ್ಲ, ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಅಂತ ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ.ವಿರುಪಾಕ್ಷಪ್ಪ ಹೇಳಿದ್ದಾರೆ.
Advertisement
ರಾಯಚೂರಿನ ಹೊರವಲಯದ ಹರ್ಷಿತಾ ಗಾರ್ಡನ್‍ನಲ್ಲಿ ನಡೆಯುತ್ತಿರುವ ಬ್ರಿಗೇಡ್ ಅಭ್ಯಾಸ ವರ್ಗದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಏನ್ ಹೇಳಿದೆಯೋ ಗೊತ್ತಿಲ್ಲ. ಈಶ್ವರಪ್ಪನವರು ಕಾರ್ಯಕ್ರಮಕ್ಕೆ ಬರುವುದಿಲ್ಲ. ಬ್ರಿಗೇಡ್ ಯಾವುದೇ ಪಕ್ಷ, ವ್ಯಕ್ತಿಗೆ ಸಂಬಂಧಿಸಿದ್ದಲ್ಲ ಎಂದರು.
Advertisement
Advertisement
ಇನ್ನೂ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಮೀಸಲಾತಿ ವಿರೋಧಿ. ಈಗ ಜನರಲ್ಲಿ ಗೊಂದಲ ಮೂಡಿಸಲು ಶೇಕಡಾ 70 ರಷ್ಟು ಮೀಸಲಾತಿಗಾಗಿ ಹೋರಾಟ ನಡೆಸುತ್ತೇನೆ ಅಂತಿದ್ದಾರೆ ಅಂತ ಆರೋಪಿಸಿದರು.
Advertisement
ಇನ್ನೂ ಇದೇ ವೇಳೆ ಮಾತಾಡಿದ ಬ್ರಿಗೇಡ್ ರಾಜ್ಯ ಗೌರವಾಧ್ಯಕ್ಷ ಮುಕುಡಪ್ಪ ಯಡಿಯೂರಪ್ಪನವರು ಅಹಿಂದ ವರ್ಗವನ್ನ ಕಡೆಗಣಿಸಬಾರದು ಅಂತ ಹೇಳಿದರು. ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮಿ ಮಾತನಾಡಿ, ಸಂಗೊಳ್ಳಿರಾಯಣ್ಣ ಬ್ರಿಗೇಡ್ ಪಕ್ಷಾತೀತ ಸಂಘಟನೆ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದರು.
ಕೆ.ಎಸ್.ಈಶ್ವರಪ್ಪ ಗೈರು ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಎಲ್ಲಿ ನೋಡಿದ್ರೂ ಈಶ್ವರಪ್ಪ ಭಾವಚಿತ್ರಗಳು ರಾರಾಜಿಸುತ್ತಿದ್ದರೂ ಕೂಡ ಪ್ರತಿಯೊಬ್ಬ ಮುಖಂಡರು ಇದು ಪಕ್ಷಾತೀತ ಕಾರ್ಯಕ್ರಮ ಅಂತ ಹೇಳುತ್ತಿದ್ದರು.