– ಈಶ್ವರಪ್ಪ ಅಸಮಾಧಾನದ ಹಿಂದಿದ್ಯಾ ಹಿಂದೂ ಮುಖಂಡರ ಕೈವಾಡ?
ಶಿವಮೊಗ್ಗ: ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ (KS Eshwarappa) ಬಿಜೆಪಿ (BJP) ವಿರುದ್ಧ ಬಂಡಾಯ ಸಾರಿದ್ದಾರೆ. ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮೋದಿ ಅವರ ಪರಮಭಕ್ತ ಈಶ್ವರಪ್ಪ ಇದೀಗ ಮೋದಿ ಅವರ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಕಾರ್ಯಕ್ರಮಕ್ಕೆ ಬರಲ್ಲ ಅಂದುಕೊಂಡಿದ್ದ ಕುಮಾರ್ ಬಂಗಾರಪ್ಪ (Kumar Bangarappa) ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಈಶ್ವರಪ್ಪ ಅವರ ಅಸಮಾಧಾನದ ಹಿಂದೆ ಹಿಂದೂ ಮುಖಂಡರ ಕಾಣದ ಕೈ ಇದೆ ಎಂಬ ಮಾತು ಕೇಳಿ ಬರುತ್ತಿದೆ.
Advertisement
ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹಿಂದೂ ಫೈರ್ ಬ್ರ‍್ಯಾಂಡ್ ಎಂದು ಗುರುತಿಸಿಕೊಂಡವರು. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಪರಮಭಕ್ತ. ಆದರೆ ಹಾವೇರಿ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯ ಎದ್ದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಮೋದಿ ಅವರ ಪರಮಭಕ್ತ ಆಗಿರುವ ಈಶ್ವರಪ್ಪ ಅವರು ಸ್ವತಃ ಮೋದಿ ಅವರೇ ತನ್ನೂರಿಗೆ ಭೇಟಿ ನೀಡಿದರೂ ವೇದಿಕೆ ಹಂಚಿಕೊಳ್ಳದೇ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಶತಾಯಗತಾಯ ಈಶ್ವರಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ಕೇಂದ್ರ ನಾಯಕರು, ರಾಜ್ಯ ನಾಯಕರು ಮಾಡಿದ ಸಂಧಾನ ಸಭೆ ವಿಫಲವಾಗಿದೆ. ಮೋದಿ ಶಿವಮೊಗ್ಗಕ್ಕೆ (Shivamogga) ಆಗಮಿಸಿದ್ದರೂ ಈಶ್ವರಪ್ಪ ಅವರು ಮಠಗಳಿಗೆ ಭೇಟಿ ನೀಡಿ ಚುನಾವಣೆಗೆ ಸ್ವಾಮೀಜಿಗಳ ಬೆಂಬಲ ಕೋರಿದ್ದಾರೆ. ಈಶ್ವರಪ್ಪ ಅವರು ಎಲ್ಲಾ ಅಸಮಾಧಾನ ಮರೆತು ಮೋದಿ ಕಾರ್ಯಕ್ರಮಕ್ಕೆ ಬರುತ್ತಾರೆ ಅಂದುಕೊಂಡಿದ್ದರು. ಆದರೆ ನಾಯಕರ ನಿರೀಕ್ಷೆ ಹುಸಿಯಾಗಿದೆ. ಇದನ್ನೂ ಓದಿ: ಶಕ್ತಿ ಹೇಳಿಕೆಗೆ ಮೋದಿ ವಾಗ್ದಾಳಿ ಬೆನ್ನಲ್ಲೇ ರಾಹುಲ್ ಗಾಂಧಿ ಸ್ಪಷ್ಟನೆ
Advertisement
Advertisement
ಇನ್ನೂ ಸೊರಬ ಕ್ಷೇತ್ರದ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಸೋಲಿನ ಬಳಿಕ ಸಾರ್ವಜನಿಕವಾಗಿ ಕುಮಾರ್ ಬಂಗಾರಪ್ಪ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇಂದು ಮೋದಿ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್‌ಗೆ ಹೈಕೋರ್ಟ್ ತುರ್ತು ನೋಟಿಸ್
Advertisement
ಈಶ್ವರಪ್ಪ ಅವರ ಅಸಮಾಧಾನದ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬ ಮಾತು ಕೇಳಿ ಬರುತ್ತಿದೆ. ಈಶ್ವರಪ್ಪ ಇಷ್ಟೊಂದು ಹಠ ಹಿಡಿದು ಕೂತಿರುವ ಹಿಂದೆ, ಯಾರ ಮನವೊಲಿಕೆಗೂ ಬಗ್ಗದಿರುವ ಹಿಂದೆ, ಅಷ್ಟೇ ಯಾಕೆ ಸ್ವತಃ ತಮ್ಮೂರಿಗೆ ಪ್ರಧಾನಮಂತ್ರಿ ಅವರು ಭೇಟಿ ನೀಡುತ್ತಿದ್ದ ವೇಳೆಯಲ್ಲಿ ಈಶ್ವರಪ್ಪ ಎಲ್ಲಾ ಅಸಮಾಧಾನ ಬದಿಗೊತ್ತಿ ಭಾಗವಹಿಸುತ್ತಿದ್ದರು. ಆದರೆ ಮೋದಿಯ ಪರಮ ಭಕ್ತ ಆಗಿರುವ ಈಶ್ವರಪ್ಪ ತನ್ನೂರಿಗೆ ಮೋದಿಯೇ ಬಂದರೂ ತಮ್ಮ ಅಸಮಾಧಾನ ಶಮನ ಆಗಿಲ್ಲ ಅಂದರೆ ಇದರ ಹಿಂದೆ ಯಾರೋ ಇದ್ದಾರೆ. ಈಶ್ವರಪ್ಪ ಅವರು ಹೀಗಾಗಿಯೇ ಹಠ ಹಿಡಿದು ಕುಳಿತಿದ್ದಾರೆ. ಆದರೆ ಆ ಕಾಣದ ಕೈ ಆದರೂ ಯಾವುದು ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ. ಇದನ್ನೂ ಓದಿ: ಬಿಹಾರದಲ್ಲಿ ಎನ್‌ಡಿಎ ಸೀಟು ಹಂಚಿಕೆ ಫೈನಲ್ – ಬಿಜೆಪಿ 17, ಜೆಡಿಯು 16 ಕ್ಷೇತ್ರಗಳಲ್ಲಿ ಸ್ಪರ್ಧೆ ಖಚಿತ
ಒಟ್ಟಾರೆ ಈಶ್ವರಪ್ಪ ಅವರು ರೆಬೆಲ್ ಆಗಿರುವುದು ಬಿಜೆಪಿಗೆ ತಲೆ ನೋವು ತಂದಿರುವುದು ಅಷ್ಟೇ ಅಲ್ಲದೇ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಇದನ್ನೂ ಓದಿ: ಕಳೆದ 50-60 ವರ್ಷಗಳಲ್ಲಿ ಇದೇ ಮೊದಲು – ತವರಿನಲ್ಲೇ ಬರಿದಾಗುತ್ತಿದೆ ಕಾವೇರಿಯ ಒಡಲು!