ಬೀದರ್: ರೈತರ ಜಮೀನುಗಳಿಗೆ ಬಳಸುವ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ನೀಡದ ಜೆಸ್ಕಾಂ ಅಧಿಕಾರಿಗೆ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwara Khandre) ತರಾಟೆಗೆ ತೆಗೆದುಕೊಂಡಿದ್ದಾರೆ.
ಬೀದರ್‌ನಲ್ಲಿ (Bidar) ನಡೆದ ಕೆಡಿಪಿ ಸಭೆಯಲ್ಲಿ ಜೆಸ್ಕಾಂ (GESCOM) ಅಧಿಕಾರಿಯೊಬ್ಬರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾವು 300ಕ್ಕೂ ಅಧಿಕ ಸೋಲಾರ್ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಆದರೂ ಕೂಡ ರಾತ್ರಿ ವೇಳೆ ರೈತರಿಗೆ ವಿದ್ಯುತ್ ನೀಡಿದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ‘ಜೀಬ್ರಾ’ಗೆ ‘ಭೀಮ’ ಬೆಂಬಲ- ಡಾಲಿ, ಸತ್ಯದೇವ್ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್
ಇದೇ ವೇಳೆ ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದ ಅವರು, 2.5 ಲಕ್ಷ ಮತಗಳಿಂದ ಗೆದ್ದ ಜನಪ್ರತಿನಿಧಿಗಳಿಗೆ ಅವಮಾನ ಮಾಡುತ್ತಿದ್ದಿರಿ ಎಂದು ಶರಣ ಸಲಗರ್, ಶೈಲೇಂದ್ರ ಬೇಲ್ದಾಳೆ ವಿರುದ್ಧ ಅಸಮಧಾನ ಹೊರಹಾಕಿದರು.
ಸಚಿವ ರಹೀಂಖಾನ್, ಶಾಸಕರಾದ ಶರಣು ಸಲಗರ್, ಶೈಲೇಂದ್ರ ಬೆಲ್ದಾಳೆ, ಡಿಸಿ ಶಿಲ್ಪಾ ಶರ್ಮಾ, ಎಸ್ಪಿ ಪ್ರದೀಪ್ ಗುಂಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.ಇದನ್ನೂ ಓದಿ: ತಮಿಳುನಾಡು | 68 ಮಂದಿ ಬಲಿ ಪಡೆದ ಮದ್ಯ ದುರಂತ – ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ