ಬೀದರ್: ಪೊಲೀಸ್ ಠಾಣೆಗಳು ಬಿಜೆಪಿ ಸರ್ಕಾರದ ಸೆಟ್ಲ್ಮೇಂಟ್ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ ಎಂದು ಬೀದರ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಸೇಡಂ ಶಾಸಕ ರಾಜಕುಮಾರ್ ತೇಲ್ಕೂರು ಮಹಿಳೆ ಮೇಲೆ ದೌರ್ಜನ್ಯ ಮಾಡಿರುವ ಆರೋಪ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಂಡ್ರೆ, ಇಂದು ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲಾ ಎಂಬುದು ಮೊತ್ತೊಂದು ಸಲ ಸಾಬೀತಾಗುತ್ತಿದ್ದು, ಸೇಡಂ ಶಾಸಕರ ದೌರ್ಜನ್ಯದ ಬಗ್ಗೆ ಮಹಿಳೆ ಸಿಎಂಗೆ ಟ್ವಿಟ್ಟರ್ ಮುಖಾಂತರ ತಿಳಿಸಿದ್ದಾರೆ. ನಾಗರಿಕ ಸಮಾಜದಲ್ಲಿ ಮಹಿಳೆಗೆ ರಕ್ಷಣೆ ನೀಡಿ ಆರೋಪ ಮಾಡಿದವರ ಮೇಲೆ ಕೇಸ್ ಹಾಕಿ ತನಿಖೆ ಮಾಡಬೇಕಿತ್ತು. ಆದರೆ ದೌರ್ಜನ್ಯಗೊಳಗಾದ ಮಹಿಳೆಗೆ ಶಾಸಕರು ದೂರು ಕೊಟ್ಟಿದ್ದಾರೆ ಎಂದು ಹೇಳಿ ಠಾಣೆಯಲ್ಲಿ ಕೂಡಿ ಹಾಕಿ ಆರೋಪಿಗೆ ರಕ್ಷಣೆ ಕೊಡುವಂತ್ತದ್ದು, ಆತಂಕಕಾರಿ ವಿಷಯವಾಗಿದೆ ಎಂದು ಗರಂ ಆಗಿದ್ದಾರೆ.
Advertisement
Advertisement
ಬಿಜೆಪಿಯ ಪಾಪವನ್ನು ಮುಚ್ಚಲು ಪೊಲೀಸರು ಬೆಂಗಾವಲಾಗಿ ನಿಂತ್ತಿದ್ದು, ಬಿಜೆಪಿ ನಾಯಕರು ಏನೇ ತಪ್ಪು ಮಾಡಿದರು ಬಿ ರಿಪೋರ್ಟ್ ಹಿಡಿದುಕೊಂಡು ಪೊಲೀಸರು ನಿಂತಿದ್ದಾರೆ. ಈ ಮೂಲಕ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸಿಎಂ ಇದನ್ನು ಗಂಭೀರವಾಗಿ ಪರಿಗಣಿಸಿ, ಮಹಿಳೆಗೆ ರಕ್ಷಣೆ ಕೊಟ್ಟು, ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸರ್ಕಾರಕ್ಕೆ ಆಗ್ರಹ ಮಾಡಿದರು. ಇದನ್ನೂ ಓದಿ: ದಾವಣಗೆರೆಗೆ ಹಿಜಬ್ ವಿವಾದ ಎಂಟ್ರಿ – ಕೇಸರಿ ಶಾಲಿನೊಂದಿಗೆ ವಿದ್ಯಾರ್ಥಿಗಳು ಹಾಜರ್