ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀನಿವಾಸ ಅಗ್ರಹಾರದಲ್ಲಿ ಗೃಹಿಣಿಯೊಬ್ಬರು ಅವಿವಾಹಿತ ಮಹಿಳೆಯೊಂದಿಗೆ ನಾಪತ್ತೆಯಾಗಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪ್ರಿಯದರ್ಶಿನಿ(22) ಮತ್ತು ಮಾಹಾದೇವಿ(21) ಕಾಣೆಯಾದ ಮಹಿಳೆಯರು. ಪ್ರಿಯದರ್ಶಿನಿ ಅವರಿಗೆ ಮದುವೆಯಾಗಿದ್ದು, ಒಂದು ಮಗುವನ್ನು ಸಹ ಹೊಂದಿದ್ದಾರೆ. ಆಗಸ್ಟ್ 22ರಿಂದ ಇಬ್ಬರೂ ಮಹಿಳೆಯರೂ ಅನುಮಾನಸ್ಪದವಾಗಿ ನಾಪತ್ತೆಯಾಗಿದ್ದಾರೆ.
ಮಾಹಾದೇವಿ ಅವರು ಕೆಲವು ದಿನಗಳಿಂದ ಪ್ರಿಯದರ್ಶಿನಿ ಮನೆಗೆ ಬಂದು ಹೋಗುತ್ತಿದ್ದರು. ಅಗಸ್ಟ್ 22ರಂದು ಮಾಹಾದೇವಿ ಬಟ್ಟೆ ತರುವುದಾಗಿ ಹೇಳಿ ಪ್ರಿಯದರ್ಶಿನಿಯರನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಅಂದು ಬಟ್ಟೆ ತರಲು ಹೋದವರು ಮರಳಿ ಮನೆಗೆ ಬಂದಿಲ್ಲ. ಈ ಬಗ್ಗೆ ಅನುಮಾನಗೊಂಡ ಪ್ರಿಯದರ್ಶಿನಿ ತಾಯಿ ಮಹಾದೇವಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಪತ್ನಿಗೆ ಮಾಟ-ಮಂತ್ರ ಮಾಡಿಸಿ ಮಹಾದೇವಿ ಕರೆದುಕೊಂಡು ಹೋಗಿದ್ದಾಳೆ ಎಂದು ಪ್ರಿಯದರ್ಶಿನಿ ಪತಿ ನವೀನ್‍ಕುಮಾರ್ ಆರೋಪಿಸುತ್ತಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಪತ್ತೆಯಾಗಿರುವ ಮಹಾದೇವಿ ಮತ್ತು ಪ್ರಿಯದರ್ಶಿನಿಯ ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.