ಇಸ್ರೇಲ್, ಹಮಾಸ್ ಸಂಘರ್ಷ- ಭಾರತದ ಆರ್ಥಿಕ ಕಾರಿಡಾರ್ ಯೋಜನೆಗೆ ಯುದ್ಧದ ಕಾರ್ಮೋಡ

Public TV
1 Min Read
ISREAL INDIA

ನವದೆಹಲಿ: ಇಸ್ರೇಲ್ – ಹಮಾಸ್ (Isreal- Hamas) ಬಂಡುಕೋರರ ಮಧ್ಯೆ ಮಹಾ ಸಂಘರ್ಷವೇ ನಡೆಯುತ್ತಿದೆ. ಇದರಿಂದ ಭಾರತದ (India) ಮಹತ್ವಾಕಾಂಕ್ಷೆಯ ಯೋಜನೆಯ ಮೇಲೆ ಈಗ ಯುದ್ಧದ ಕಾರ್ಮೋಡ ಕವಿದಿದೆ.

ಡ್ರ್ಯಾಗನ್ ಚೀನಿಗೆ (China) ಸೆಡ್ಡು ಹೊಡೆದಿದ್ದ ಭಾರತದ ಡ್ರೀಮ್ ಪ್ರಾಜೆಕ್ಟ್ ಗೆ ಈಗ ಢವಢವ ಶುರುವಾಗಿದೆ. ಒಂದು ತಿಂಗಳ ಹಿಂದಷ್ಟೇ ದೆಹಲಿಯಲ್ಲಿ ಜಿ-20 ಶೃಂಗಸಭೆ ನಡೆಸಿದ್ದ ಭಾರತ, ತನ್ನ ಆರ್ಥಿಕ ಕಾರಿಡಾರ್ ಯೋಜನೆಯ ಘೋಷಣೆ ಮಾಡಿತ್ತು. ಭಾರತ ಜಾಗತಿಕವಾಗಿ ಪ್ರಬಲವಾಗೋದಕ್ಕೆ ಆರ್ಥಿಕ ಬಲ ತುಂಬೋದಕ್ಕೆ ಸಹಾಯ ಮಾಡುವ ಬಹುದೊಡ್ಡ ಕಾರಿಡಾರ್ ಯೋಜನೆ ಇದಾಗಿದೆ.

ಅಮೆರಿಕ (America), ಸೌದಿ ಅರೇಬಿಯಾ (Saudi Arabia), ಯುಎಇ, ಫ್ರಾನ್ಸ್, ಜರ್ಮನಿ, ಇಟಲಿ ಹಾಗೂ ಐರೋಪ್ಯ ಒಕ್ಕೂಟಗಳಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಚೀನಾದ ಬೆಲ್ಟ್ & ರೋಡ್ ಯೋಜನೆಗೆ ಟಾಂಗ್ ಕೊಡುವ ಉದ್ದೇಶದಿಂದಲೇ ಈ ಯೋಜನೆ ಮಾಡಲಾಗ್ತಿದೆ. ಆದರೆ ಈಗ ಯೋಜನೆಗೆ ಇಸ್ರೇಲ್ – ಹಮಾಸ್ ಸಂಘರ್ಷ ಅಡ್ಡಿಯಾಗುವ ಭೀತಿ ಎದುರಾಗಿದೆ. ರೈಲುಮಾರ್ಗ, ಹಡಗಿನಿಂದ ರೈಲು ಜಾಲಗಳು ಮತ್ತು ರಸ್ತೆ ಸಾರಿಗೆ ಮಾರ್ಗಗಳನ್ನು ಕಾರಿಡಾರ್ ಗಳಲ್ಲಿ ವಿಸ್ತರಿಸುವ ಯೋಜನೆ ಇದಾಗಿದೆ. ಇದನ್ನೂ ಓದಿ: 5ನೇ ದಿನಕ್ಕೆ ಇಸ್ರೇಲ್, ಪ್ಯಾಲೇಸ್ಟೈನ್‌ಗಳ ಸಮರ – ಹಮಾಸ್, ಹಿಜ್ಬುಲ್ಲಾದಿಂದ ಏಕಕಾಲಕ್ಕೆ ರಾಕೆಟ್ ದಾಳಿ

ಪೂರ್ವ ಭಾರತವನ್ನು ಅರೇಬಿಯನ್ ಗಲ್ಫ್ ಗೆ ಸಂಪರ್ಕಿಸುತ್ತದೆ ಮತ್ತು ಉತ್ತರ ಗಲ್ಫ್ ನಿಂದ ಯುರೋಪ್‍ಗೆ ಸಂಪರ್ಕಿಸುವ ಬಹುದೊಡ್ಡ ಯೋಜನೆ ಇದಾಗಿದೆ. ಇಸ್ರೇಲ್ ಮೂಲಕವೇ ಹಾದುಹೋಗಬೇಕಾಗಿರುವ ಕಾರಿಡಾರ್, ಆದರೆ ಇದೀಗ ಇಸ್ರೇಲ್ ಪರ ಭಾರತ ನಿಂತಿದ್ದು, ಸೌದಿ ಅರೇಬಿಯಾ ಏನಾದ್ರೂ ಇಸ್ರೇಲ್ ವಿರುದ್ಧ ನಿಲುವು ತೆಗೆದುಕೊಂಡರೆ ಆರ್ಥಿಕ ಕಾರಿಡಾರ್ ಯೋಜನೆಯ ಮೇಲೆ ಕರಿಛಾಯೆಯ ಭೀತಿ ಎದುರಾಗಲಿದೆ.

Web Stories

Share This Article