ನವದೆಹಲಿ: ಉಕ್ರೇನ್‌ನಲ್ಲಿನ (Ukraine) ಸಂಘರ್ಷ ಉಲ್ಬಣಗೊಳ್ಳುತ್ತಿರುವ ಬಗ್ಗೆ ಭಾರತ (India) ತೀವ್ರ ಕಳವಳ ವ್ಯಕ್ತಪಡಿಸಿದೆ. ಯುದ್ಧವನ್ನು (War) ತಕ್ಷಣವೇ ನಿಲ್ಲಿಸಲು, ರಾಜತಾಂತ್ರಿಕತೆ ಮತ್ತು ತುರ್ತಾಗಿ ಮಾತುಕತೆ ನಡೆಸಲು ಭಾರತ ಕರೆ ನೀಡಿದೆ.
ಸಂಘರ್ಷದ ಕುರಿತು ಭಾರತದ ನಿಲುವನ್ನು ಪುನರುಚ್ಚರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi), ಸಂಘರ್ಷವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯೂ ಅಲ್ಲ. ಪರಿಸ್ಥಿತಿಯನ್ನು ತಗ್ಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಟ್ವೀಟ್‌ನಲ್ಲಿ ಹೇಳಿದರು.
Advertisement
Advertisement
ಟ್ವೀಟ್‌ನಲ್ಲೇನಿದೆ?
ಉಕ್ರೇನ್‌ನಲ್ಲಿ ಮೂಲಭೂತ ಸೌಕರ್ಯಗಳು ಮತ್ತು ನಾಗರಿಕರ ಸಾವು ಸೇರಿದಂತೆ ಸಂಘರ್ಷದ ಉಲ್ಬಣಕ್ಕೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದನ್ನೂ ಓದಿ: ಸೇಡಿಗೆ ಸೇಡು – ಇರಾನ್ ಡ್ರೋನ್ ಬಳಸಿ ರಷ್ಯಾ, ಉಕ್ರೇನ್ ಮೇಲೆ ದಾಳಿ
Advertisement
Our response to media queries on escalation of conflict in Ukraine:https://t.co/LoELjRwDEm pic.twitter.com/jCNHw95UKw
— Arindam Bagchi (@MEAIndia) October 10, 2022
Advertisement
ಹಗೆತನವನ್ನು ಹೆಚ್ಚಿಸುವುದು ಯಾರ ಹಿತಾಸಕ್ತಿಯಲ್ಲ ಎಂಬುದನ್ನು ನಾವು ಪುನರುಚ್ಚರಿಸುತ್ತೇವೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಲು, ರಾಜತಾಂತ್ರಿಕತೆ ಮತ್ತು ಮಾತುಕತೆಯ ಹಾದಿಗೆ ತುರ್ತಾಗಿ ಮರಳಲು ನಾವು ಒತ್ತಾಯಿಸುತ್ತೇವೆ. ಯುದ್ಧವನ್ನು ನಿಲ್ಲಿಸುವ ಗುರಿಯನ್ನು ಹೊಂದಿರುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಸೋಮವಾರ ಉಕ್ರೇನ್‌ನ ಅನೇಕ ನಗರಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಡೌನ್‌ಟೌನ್, ಕೀವ್ ಸೇರಿದಂತೆ ಹಲವೆಡೆ ರಾಕೆಟ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ