ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಪತ್ನಿಯರಿಗೆ ತಾಳಿ ಕಳೆದುಕೊಳ್ಳುವ ಭಯ ಆರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಅವರೆ ರೆಸಾರ್ಟಿಗೆ ಹೋಗಬೇಡಿ ಅಂತ ಹೇಳ್ತಾರೆ. ಆ ಮಟ್ಟಿಗೆ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರು ಲಫಂಗ ರಾಜಕಾರಣ ಮಾಡುತ್ತಿದ್ದು, ಅವರ ಶಾಸಕರು ಹೊಡೆದಾಡಿದ್ದಾರೆ. ಈ ಕುರಿತು ರಾಜ್ಯ ಜನರ ಕ್ಷಮೆಯನ್ನು ಸಿದ್ದರಾಮಯ್ಯ ಅವರು ಕೇಳಿ ಸಮನ್ವಯ ಸಮಿತಿಗೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಪದೇ ಪದೇ ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಅವರು ಹೇಳ್ತಾರೆ. ಅವರೇನಾದರು ಕುಡಿದ್ದೀರಾ?, ಜೆಡಿಎಸ್‍ಗೆ ಟೋಪಿ ಹಾಕಿ ಕಾಂಗ್ರೆಸ್‍ಗೆ ಹೋದ್ರಿ, ಆಗ ಎಷ್ಟು ಹಣ ತೆಗೆದುಕೊಂಡು ಹೋಗಿದ್ದೀರಿ ಎಂದು ಸ್ಪಷ್ಟಪಡಿಸಿ. ಉಡಾಫೆ ಮಾತು ಹೇಳುವುದರಲ್ಲಿ, ಲಫಂಗ ರಾಜಕಾರಣ ಮಾಡುವುದರಲ್ಲಿ ಸಿದ್ದರಾಮಯ್ಯ ಅವರು ಮುಂದಿದ್ದಾರೆ. ಅವರು ಸುಳ್ಳಿನ ಸರದಾರರು ಎಂದು ವಾಗ್ದಾಳಿ ನಡೆಸಿದರು.
ರಾಜಕೀಯ ಸನ್ಯಾಸತ್ವ:
ಇದೇ ವೇಳೆ ನಾನು ಕೇವಲ ಕುರುಬ ಸಮಾಜದ ನಾಯಕ ಮಾತ್ರ ಅಲ್ಲ, ನಾನು ಹಿಂದೂ ನಾಯಕ ಅದರಲ್ಲಿ ಕುರುಬರು ಇದ್ದಾರೆ. ಬಿಎಸ್‍ವೈ ಸಿಎಂ ಆಗಿದ್ದ ಕಾಲದಲ್ಲಿ ಎಷ್ಟು ಹಣ ಕುರುಬ ಸಮುದಾಯಕ್ಕೆ ಬಿಡುಗಡೆ ಮಾಡಿದ್ದೇವೆ ಹಾಗೂ ನಿಮ್ಮ ಅಧಿಕಾರಾವಧಿಯಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿ. ನಮಗಿಂತ ಹೆಚ್ಚು ಕೊಟ್ಟಿದ್ದರೆ ನಾನು ರಾಜಕೀಯ ಸನ್ಯಾಸತ್ವ ಪಡೆಯುತ್ತೇನೆ ಎಂದು ಸವಾಲು ಎಸೆದರು.
ಇದೇ ವೇಳೆ ದೇಶಕ್ಕಾಗಿ ಆರ್ ಎಸ್‍ಎಸ್‍ನವರ ಮನೆಯ ಒಂದು ನಾಯಿ ಕೂಡ ಸತ್ತಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಟಾಂಗ್ ನೀಡಿದ ಅವರು, ನಾಯಿ, ಲಫಂಗ ಎಂದು ಪದ ಬಳಸುವವರು ಯಾರು? ಈಗ ನಾಯಿ ಜೊತೆಗೆ ಸಂಬಂಧ ಇಟ್ಟುಕೊಂಡರೋ ಎಂದು ತಿರುಗೇಟು ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv