ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ವಿವಾದ – ಪಬ್ಲಿಕ್ ಟಿವಿ ಫಟಾಫಟ್ ಇಂಪ್ಯಾಕ್ಟ್ : ಮುದ್ರಣ ದೋಷ ಎಂದ ತಂಗಡಗಿ

Public TV
1 Min Read
Error in copy minister Shivaraj Tangadagi clarifies Nada Geethe not compulsory in private schools order

ಬೆಂಗಳೂರು: ಮುದ್ರಣ ದೋಷದಿಂದಾಗಿ ನಾಡಗೀತೆ (Nada Geethe) ವಿಚಾರದಲ್ಲಿ ಗೊಂದಲವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಶಿವರಾಜ್‌ ತಂಗಡಗಿ (Shivaraj Tangadagi) ಸ್ಪಷ್ಟನೆ ನೀಡಿದ್ದಾರೆ.

ಖಾಸಗಿ ಶಾಲೆಗಳಲ್ಲಿ (Private School) ನಾಡಗೀತೆ ಕಡ್ಡಾಯವಲ್ಲ ಎಂಬ ವಿವಾದಾತ್ಮಕ ಆದೇಶ ಹೊರಡಿಸಿದ ಸುದ್ದಿಯನ್ನು ಪಬ್ಲಿಕ್‌ ಟಿವಿ ಪ್ರಸಾರ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು ಪ್ರಿಂಟ್ ಮಿಸ್ಟೇಕ್ ಆಗಿದೆ. ಆದೇಶ ಮಾಡುವಾಗ ಎಲ್ಲಾ ಶಾಲೆ ಎಂದು ಬದಲಾಗಲಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಕೆರಗೋಡು ಹನುಮಧ್ವಜ ವಿವಾದ – ಅಯೋಧ್ಯೆ ರಾಮ ಮಂದಿರ ಮುಂದೆ ಪಣ ತೊಟ್ಟ ಹಿಂದೂ ಕಾರ್ಯಕರ್ತರು

 

ಮನುಷ್ಯ ನಡೆಯುವಾಗ ಎಡವುತ್ತಾನೆ. ಹಾಗೆಯೇ ಇಲ್ಲಿ ಸಹಾ ಸಣ್ಣ ತಪ್ಪಾಗಿದೆ. ಅಧಿಕಾರಿಗಳು ಮನಸ್ಸೋ ಇಚ್ಛೆ ನಡೆದುಕೊಂಡಿಲ್ಲ. ಅಧಿಕಾರಿಗಳ ಮೇಲೆ ಸರ್ಕಾರದ ಲಂಗು ಲಗಾಮು ಎಲ್ಲಾ ಇದೆ. ಆದರೆ ಸಣ್ಣ ತಪ್ಪಿನಿಂದ ಈ ಗೊಂದಲ ಆಗಿದೆ. ಎಲ್ಲವನ್ನೂ ಸರಿಪಡಿಸಿ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.

ನಾಡಗೀತೆ ವಿವಾದ ಕೋರ್ಟ್‌ನಲ್ಲಿ ಇತ್ತು. ಸಿ ಅಶ್ವಥ್ ಅವರ ಧ್ವನಿಯಲ್ಲಿ ನಾಡಗೀತೆ ಪ್ರಸಾರವಾಗಬೇಕು. ಮೈಸೂರು ಅನಂತ ಸ್ವಾಮಿ ಅವರ ಧ್ವನಿಯಲ್ಲಿ ಅಲ್ಲ ಎಂದು ಕಿಕ್ಕೇರಿ ಕೃಷ್ಣ ಮೂರ್ತಿ ಅವರು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯಕ್ಕೆ ನಾವು ಮಾಹಿತಿ ನೀಡುವಾಗ ಈ ಆದೇಶ ಆಗಿದ್ದು ಅದರಲ್ಲಿ ಸಣ್ಣ ಮುದ್ರಣ ದೋಷವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ರಾಮನಗರ ವಕೀಲರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ – ಐಜೂರು ಠಾಣೆಯ ಪಿಎಸ್ಐ ಅಮಾನತು

 

ನಮ್ಮ ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ. ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿ ಇದ್ದೇವೆ. ಮಾಧ್ಯಮ ಮಿತ್ರರಿಗೆ ಇದರ ಬಗ್ಗೆ ತಿಳಿಸಲೆಂದೇ ಬಂದಿದ್ದೇನೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆಯಾಗಿದೆ ಎಂದರು.

Share This Article