ಅಂಕಾರ: ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ (Recep Tayyip Erdoğan) ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ್ದು, ಈ ಮೂಲಕ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಮೇ 14 ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೊಗನ್ ಮತ್ತು ಪ್ರತಿಸ್ಪರ್ಧಿ ಕೆಮಾಲ್ ಕಿಲಿಕ್‍ಡರೊಗ್ಲ (Kemal Kılıçdaroğlu) ಗೆಲುವಿಗೆ ಅಗತ್ಯವಿರುವ ಬಹುಮತ ಪಡೆಯಲಿಲ್ಲ. ಈ ಹಿನ್ನೆಲೆಯಲ್ಲಿ 2 ನೇ ಸುತ್ತಿನ ಮತದಾನ ಭಾನುವಾರ ನಡೆದಿದೆ. ಇದರಲ್ಲಿ ಎರ್ಡೋಗನ್ ಅವರು ವಿರೋಧ ಪಕ್ಷದ ನಾಯಕ ಕೆಮಲ್ ಕಿಲಿಕ್‍ಡರೊಗ್ಲು ಅವರನ್ನು ಸೋಲಿಸಿದರು.
Advertisement
Congratulations @RTErdogan on re-election as the President of Türkiye! I am confident that our bilateral ties and cooperation on global issues will continue to grow in the coming times.
— Narendra Modi (@narendramodi) May 29, 2023
Advertisement
ಭೀಕರ ಭೂಕಂಪ, ಹೆಚ್ಚಿದ ಹಣ ದುಬ್ಬರದ ಮಧ್ಯೆಯೂ ಎರ್ಡೊಗನ್ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 20 ವರ್ಷಗಳಿಂದ ಈ ಸ್ಥಾನದ ಮೇಲಿದ್ದ ಅವರ ಹಿಡಿತ ಮೂರನೇ ದಶಕಕ್ಕೂ ಮುಂದುವರಿದಂತಿದೆ. 2017ರಲ್ಲಿ ಏಪ್ರಿಲ್‍ನಲ್ಲಿ ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ನೂತನ ಸಂವಿಧಾನದ ಪ್ರಕಾರ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.
Advertisement
ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ವಾಡ್ಲಿಮಿರ್ ಪುಟಿನ್ ಸೇರಿದಂತೆ ಗಣ್ಯರು ಎರ್ಡೊಗನ್ ಅವರಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಮಣಿಪುರ ಮತ್ತೆ ಧಗ ಧಗ – ಅಮಿತ್ ಶಾ ಭೇಟಿಗೆ ಮುನ್ನ ಮತ್ತೊಂದು ಅಟ್ಯಾಕ್, ಐವರ ಸಾವು
Advertisement