10 ಲಕ್ಷ ನಿರಾಶ್ರಿತರು ಟರ್ಕಿಯಿಂದ ಸಿರಿಯಾಕ್ಕೆ ವಾಪಸ್ – ಎಡೋರ್ಗನ್

Public TV
1 Min Read
TURKEY PRESIDENT

ಅಂಕಾರ: ಟರ್ಕಿ ಸರ್ಕಾರವು 10 ಲಕ್ಷ ಸಿರಿಯನ್ ನಿರಾಶ್ರಿತರನ್ನು ಸ್ವಯಂಪ್ರೇರಿತವಾಗಿ ಹಿಂದಿರುಗಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಘೋಷಿಸಿದ್ದಾರೆ.

ಸುಮಾರು 5,00,000 ಸಿರಿಯನ್ನರು ಈಗಾಗಲೇ ಸಿರಿಯಾದಲ್ಲಿ ಸುರಕ್ಷಿತ ಪ್ರದೇಶಗಳಿಗೆ ಮರಳಿದ್ದಾರೆ. ಆದರೆ, ಯುನೈಟೆಡ್ ನೇಷನ್‌ನ ಅಂಕಿ-ಅಂಶವು 1,30,000 ಸಿರಿಯನ್ನರು ಮರಳಿದ್ದಾರೆ ಎಂದು ಹೇಳಿದೆ ಎನ್ನಲಾಗಿದೆ. ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜೀನಾಮೆ

TURKEYs
ಸಾಂದರ್ಭಿಕ ಚಿತ್ರ

ಟರ್ಕಿಯು ಪ್ರಸ್ತುತ ವಿಶ್ವದಲ್ಲೇ ಅತಿಹೆಚ್ಚು ನಿರಾಶ್ರಿತರಿಗೆ ಆತಿಥ್ಯ ನೀಡಿರುವ ದೇಶವಾಗಿದೆ. ಸಿರಿಯಾದಿಂದ ಸುಮಾರು 37 ಲಕ್ಷ ಜನ, ಅಫ್ಘಾನಿಸ್ಥಾನ, ಇರಾಕ್ ಮತ್ತು ಇತರ ದೇಶಗಳಿಂದ ಬಂದ 4 ಲಕ್ಷ ಜನ ನಿರಾತ್ರಿತರು ಟರ್ಕಿಯಲ್ಲಿ ತಾತ್ಕಾಲಿಕ ರಕ್ಷಣೆಯ ಸ್ಥಾನಮಾನಗಳೊಂದಿಗೆ ಉಳಿದುಕೊಂಡಿದ್ದಾರೆ. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

ಮುಂದಿನ ಕೆಲ ವರ್ಷಗಳಲ್ಲಿ ಹೆಚ್ಚಿನ ತೀವ್ರತೆ ಉಂಟಾಗಲಿದ್ದು, ಇದು ಸಮಾಜಕ್ಕೆ ಬಿಕ್ಕಟ್ಟು ಉಂಟುಮಾಡುತ್ತವೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಅಲ್ಲದೆ, ಕೆಲ ದೇಶಗಳು ನಿರಾತ್ರಿತರನ್ನು ತಮ್ಮ ದೇಶಕ್ಕೆ ಹಿಂದಿರುಗಿಸಬೇಕೆಂದು ಒತ್ತಾಯಿಸುತ್ತಿವೆ. ಆದ್ದರಿಂದ ಹಿಂದಿರುಗಿಸಲು ಕ್ರಮ ವಹಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

TURKEY
ಸಾಂದರ್ಭಿಕ ಚಿತ್ರ

ಎರ್ಡೊಗನ್ ತಮ್ಮ ನೀತಿಯಲ್ಲಿ ಶೇ.85 ಪ್ರತಿಶತದಷ್ಟು ಟರ್ಕಿಯ ಲಕ್ಷಾಂತರ ನಿರಾಶ್ರಿತರಿಗೆ ಆತಿಥ್ಯ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ಸಿರಿಯಾದ ಇಡ್ಲಿಬ್ ಪ್ರದೇಶದಲ್ಲಿ 57,000 ಬ್ರಿಕ್ವೆಟ್ ಮನೆಗಳನ್ನು ನಿರ್ಮಿಸಲು ಆದೇಶಿಸಿದ್ದು, ಈಗಾಗಲೇ 50,000 ಸಿರಿಯನ್ ನಿರಾಶ್ರಿತ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಟರ್ಕಿಯಲ್ಲಿ ಸುಮಾರು 80 ಲಕ್ಷ ಸಿರಿಯನ್ನರು ನೆಲೆಸಿದ್ದಾರೆ. ಆದರೆ, ಹೆಚ್ಚಿನವರು ಮನೆಗಳಿಗೆ ತೆರಳುತ್ತಿಲ್ಲ. ಜೊತೆಗೆ ಸಿರಿಯಾ ಮಹಿಳೆಯರ ಬೆಳವಣಿಗೆಯ ಪ್ರಮಾಣವು 5.3ರಷ್ಟು ಆಗಿದೆ. 2043ರ ವೇಳೆಗೆ 15 ಮಿಲಿಯನ್‌ಗೆ ಹೆಚ್ಚಾಗಲಿದೆ ಆದ್ದರಿಂದ ಟರ್ಕಿಯಿಂದ ನಿರಾಶ್ರಿತರನ್ನು ಸ್ಥಳಾಂತರಿಸಲಾಗುತ್ತಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *