ನವದೆಹಲಿ: ಅಮೂಲ್ (Amul) ಬಳಿಕ ಮದರ್ ಡೈರಿ (Mother Dairy) ಸಹ ಹಸು ಹಾಗೂ ಎಮ್ಮೆ ಹಾಲಿನ ಬೆಲೆಯನ್ನು (Milk Price) ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಅಕ್ಟೋಬರ್ 16ರಿಂದಲೇ ನಿಗದಿತ ಬೆಲೆ ಜಾರಿಗೆ ಬರಲಿದೆ ಎಂದು ಮದರ್ ಡೈರಿ ವಕ್ತಾರರು ತಿಳಿಸಿದ್ದಾರೆ.
ಅಮೂಲ್ ಸದ್ದಿಲ್ಲದೇ ಹಾಲಿನ ದರ ಹೆಚ್ಚಿಸಿದ ಕೆಲವೇ ಗಂಟೆಗಳಲ್ಲಿ ಮದರ್ ಡೈರಿ ಈ ನಿರ್ಧಾರ ತೆಗೆದುಕೊಂಡಿದೆ. ಇದು ವರ್ಷದಲ್ಲಿ 3ನೇ ಬಾರಿಗೆ ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ: ಹಾಡಹಗಲೇ ವ್ಯಕ್ತಿಯಿಂದ 7 ಲಕ್ಷ ರೂ. ದೋಚಿದ ಕಳ್ಳರು
Advertisement
Advertisement
ಅಮುಲ್ ಬ್ರಾಂಡ್ ಅಡಿಯಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಗುಜರಾತ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಅಮುಲ್ ಗೋಲ್ಡ್ ಮತ್ತು ಎಮ್ಮೆಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರಷ್ಟು ಹೆಚ್ಚಿಸಿತು. ನಂತರ ಮದರ್ ಡೈರಿ (MotherDairy) ಈ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಬಂದಿದ್ದ ಕೈ ನಾಯಕನಿಗೆ ಹೃದಯಾಘಾತ!
Advertisement
Advertisement
ಜಿಸಿಎಂಎಂಎಫ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಮಾತನಾಡಿ, `ಕೊಬ್ಬಿನ ಬೆಲೆ ಏರಿಕೆಯಿಂದಾಗಿ ಅಮುಲ್ ಗೋಲ್ಡ್ (Amul Gold) ಮತ್ತು ಎಮ್ಮೆ ಹಾಲಿನ ಬೆಲೆಯನ್ನು ಲೀಟರ್‌ಗೆ 2ರೂ. ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.