ಬೆಂಗಳೂರು: ಮಳೆ ಕೊರತೆ, ಅಂತರ್ಜಲ ಕುಸಿತದಿಂದಾಗಿ ಬೆಂಗಳೂರು ಮತ್ತೆ ರಾಜ್ಯದ ಜಿಲ್ಲೆಗಳಲ್ಲಿ ಬಿಸಿಲು ದಾಖಲೆ ಬರೆದಿದೆ. ಏಳು ವರ್ಷಗಳ ಬಳಿಕ ಬೆಂಗಳೂರಿನಲ್ಲಿ (Bengaluru Summer) ಬಿಸಿಲು 36% ದಾಟಿದೆ. ಉತ್ತರ ಒಳನಾಡು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೀಟ್ ಸ್ಟ್ರೋಕ್ ಜೋರಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ಝಳಕ್ಕೆ ಜನರು ತತ್ತರಿಸಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. ಏಳು ವರ್ಷಗಳ ಬಳಿಕ ನಿನ್ನೆ 37.9% ಸೆಲ್ಸಿಯಸ್ ದಾಖಲಾಗಿದೆ. ಇಂದು 36.56% ಸೆಲ್ಸಿಯಸ್ ದಾಖಲಾಗಿದೆ. ಸಾಮಾನ್ಯವಾಗಿ ಏಪ್ರಿಲ್ನಲ್ಲಿ ಈ ತಾಪಮಾನ ದಾಖಲಾಗುತ್ತಿತ್ತು. ಆದರೆ ಈಗ ಮಾರ್ಚ್ನಲ್ಲಿ ರೆಕಾರ್ಡ್ ಆಗಿದ್ದು, ಬಿಸಿಲಿನಿಂದ ತತ್ತರಿಸುವಂತೆ ಆಗಿದೆ. ಮಳೆ ಕೊರತೆ ಮತ್ತು ಅಂತರ್ಜಲ ಕುಸಿತದಿಂದ ಈ ರೀತಿ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: 300 ಅಡಿ ಕಣಿವೆಗೆ ಉರುಳಿದ ವಾಹನ – 10 ಮಂದಿ ದುರ್ಮರಣ
Advertisement
Advertisement
ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ 35 ರಿಂದ 40% ಸೆಲ್ಸಿಯಸ್ ತಾಪಮಾನ ಹೆಚ್ಚಾಗುತ್ತಿದೆ. ಮೇ ಅಂತ್ಯದ ವರೆಗೂ ಇರಲಿದೆ. ಮೇ ವರೆಗೂ ಇದೇ ರೀತಿಯ ಬಿಸಿಲು ಇರಲಿದ್ದು, ಏಪ್ರಿಲ್ ಎರಡನೇ ವಾರದಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Advertisement
Advertisement
ಯಾವ್ಯಾವ ಜಿಲ್ಲೆಯಲ್ಲಿ ಬಿಸಿಲ ಪ್ರಮಾಣ ಎಷ್ಟಿದೆ?
ಕಲಬುರಗಿ: 40.9% ಸೆ.
ಬಾಗಲಕೋಟೆ: 40.6% ಸೆ.
ರಾಯಚೂರು: 39.8% ಸೆ.
ಹಂಪಿ: 39.6% ಸೆ.
ವಿಜಯಪುರ: 39% ಸೆ.
ಗದಗ: 39% ಸೆ.
ಚಿತ್ರದುರ್ಗ: 37.6% ಸೆ.
ಧಾರವಾಡ: 37.4% ಸೆ.
ಬೆಳಗಾವಿ: 37.3% ಸೆ.
ಕೆಐಎಎಲ್ ಬೆಂಗಳೂರು: 36.1% ಸೆ.
ಮೈಸೂರು: 36% ಸೆ.
ಮಂಗಳೂರು: 34.6% ಸೆ.