ಕೋಲಾರ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಮಾದರಿಯಲ್ಲಿ ಕೋಲಾರದಲ್ಲಿ ಇ-ಜೋನ್ ಪ್ರೀಮಿಯರ್ ಲೀಗ್(ಇಪಿಎಲ್) ಕ್ರಿಕೆಟ್ ಬಿಡ್ಡಿಂಗ್ ಇಂದು ನಡೆಯಿತು.
ಜಿಲ್ಲೆಯ ಪತ್ರಕರ್ತರ ಭವನದಲ್ಲಿ 2ನೇ ಅವೃತ್ತಿಯ ಇಪಿಎಲ್ ಕ್ರಿಕೆಟ್ ಬಿಡ್ ಇಂದು ಹಮ್ಮಿಕೊಳ್ಳಲಾಗಿತ್ತು. ಈ ಬಿಡ್ ನಲ್ಲಿ ಬೆಂಗಳೂರು, ಕೋಲಾರ ಸೇರಿದಂತೆ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ 15 ಟೀಮ್ ಮಾಲೀಕರು ಭಾಗವಹಿಸಿದ್ದರು. ಹಾಗೆಯೇ ಈ ವೇಳೆ ವಿವಿಧ ರಾಜ್ಯಗಳ ಸುಮಾರು 275 ಕ್ರಿಕೆಟ್ ಪಟುಗಳು ಹರಾಜು ಪ್ರಕ್ರಿಯೆಗೆ ಒಳಪಟ್ಟರು. ಅದರಲ್ಲಿ ರಣಜಿ ಆಟಗಾರ ಕೌಶಿಕ್ ಅತಿ ಹೆಚ್ಚು ಅಂದರೆ 2.50 ಲಕ್ಷಕ್ಕೆ ಬೆಂಗಳೂರು ತಂಡಕ್ಕೆ ಮಾರಾಟವಾಗಿದ್ದಾರೆ. ಪ್ರತಿ ತಂಡ 5 ಲಕ್ಷ ರೂ. ವೆಚ್ಚ ಮಾಡಿ ಆಟಗಾರರನ್ನು ಖರೀದಿ ಮಾಡಲು ಇಲ್ಲಿ ಅವಕಾಶವಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಇಪಿಎಲ್ ಆಯೋಜಕರಾದ ಮಂಜುನಾಥ್, ಕೋಲಾರದಲ್ಲಿ ಎರಡನೇ ಬಾರಿಗೆ ಇಪಿಎಲ್ ಆಯೋಜನೆ ಮಾಡಲಾಗಿದೆ. ಬಿಡ್ ನಲ್ಲಿ ಆಯ್ಕೆಯಾದವರು ಮಾರ್ಚ್ ತಿಂಗಳಲ್ಲಿ ನಡೆಯುವ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಭಾಗವಹಿಸಲಿದ್ದಾರೆ. ಕೋಲಾರದಲ್ಲಿ ಕ್ರೀಡಾಪಟುಗಳಿದ್ದರೂ ಸಹ ಸ್ಥಳೀಯವಾಗಿ ಆಟಗಾರರಿಗೆ ಬೇಕಾದ ಸವಲತ್ತುಗಳು, ಸೌಲಭ್ಯಗಳು ಪ್ರೋತ್ಸಾಹ ಸಿಗುತ್ತಿಲ್ಲ, ಕ್ರಿಕೆಟ್ ಆಡಬೇಕಾದರೆ ಬೆಂಗಳೂರಿಗೆ ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಕೋಲಾರದಲ್ಲಿ ಕಳೆದ ಎರಡು ವರ್ಷಗಳಿಂದ ಇಪಿಎಲ್ ಕ್ರಿಕೆಟ್ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv