ಕೋಲಾರ: ಲೋಕಸಭಾ ಚುನಾವಣೆ 2ನೇ ಹಂತದ ಮತದಾನ ರಾಜ್ಯದ 14 ಕ್ಷೇತ್ರಗಳಲ್ಲಿ ಭರದಿಂದ ಸಾಗಿದ್ದು, ಕೋಲಾರ ಗ್ರಾಮವೊಂದರ ಜನರು ಮತ ಚಲಾಯಿಸಿದ ನಂತರ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ಕೋಲಾರ ತಾಲ್ಲೂಕು ಉರುಟ ಅಗ್ರಹಾತ ಗ್ರಾಮದಲ್ಲಿ ವಿಶಿಷ್ಟವಾಗಿ ಮತದಾನ ಮಾಡಲಾಗಿದ್ದು, ಮತದಾನ ಬಳಿಕ ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಪರಿಸರ ಪ್ರೇಮ ತೋರಿದರು. ಮತಹಾಕಿದ ವ್ಯಕ್ತಿ ತಮಗೆ ನೆರವಾಗದಿದ್ದರೂ, ಐದು ವರ್ಷಕ್ಕೆ ಗಿಡವೊಂದು ನೆರವಿಗೆ ಬರುತ್ತದೆ ಎಂಬ ವಿಶಿಷ್ಟ ನಂಬಿಕೆ ಅಡಿ ವಿಶಿಷ್ಟ ಕಾರ್ಯಕ್ರಮವನ್ನ ಗ್ರಾಮಸ್ಥರು ಕೈಗೊಂಡಿದ್ದರು.
Advertisement
Advertisement
ಶತಾಯುಷಿ ಮತದಾನ: ಇತ್ತ ಜಿಲ್ಲೆಯ ಮಾಲೂರು ತಾಲೂಕಿನ ಮುತ್ತುಗದಹಳ್ಳಿ ಗ್ರಾಮದ ಶತಾಯುಷಿ ಮುನಿಯಮ್ಮ (106) ಅವರು ಮತದಾನ ಮಾಡಿದರು. ಗ್ರಾಮದ 13ರ ಮತಗಟ್ಟೆಗೆ ಮೊಮ್ಮಗನ ಸಹಾಯದಿಂದ ಬಂದ ಅವರು ಮತದಾನ ಮಾಡಿದರು. ಆ ಮೂಲಕ ಶತಾಯುಷಿಯಾಗಿ ಈ ವಯಸ್ಸಿನಲ್ಲೂ ಉತ್ಸಾಹವನ್ನು ತೋರಿ ಬಹುಮಂದಿಗೆ ಪ್ರೇರಣೆ ಆದ್ರು.