– ದೆಹಲಿ ಮಾಲಿನ್ಯ ಹಿನ್ನೆಲೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಚಾಟಿ
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿನ (Delhi) ವಾಯು ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಕಳವಳ ವ್ಯಕ್ತಪಡಿಸಿದೆ. ಪರಿಣಾಮಕಾರಿಯಲ್ಲದ ಪರಿಸರ ಸಂರಕ್ಷಣಾ ಕಾಯಿದೆ (Environmental Protection Act) ಜಾರಿ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ನೆರೆ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿದೆ.
Advertisement
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪರಿಸರ ಸಂರಕ್ಷಣಾ ಕಾಯಿದೆ ಹಲ್ಲಿಲ್ಲದ ಹಾವಿನಂತಾಗಿದೆ. ಕಾಯಿದೆಯಲ್ಲಿ ತಪ್ಪಿತಸ್ಥರನ್ನು ಶಿಕ್ಷೆಯಿಂದ ಮುಕ್ತಗೊಳಿಸಿ, ದಂಡದ ಮೂಲಕ ಅದನ್ನು ಬದಲಾಯಿಸಿದ್ದೀರಿ. ಇಂತಹ ನಿಯಮಗಳಿಂದ ಮಾಲಿನ್ಯ ನಿಯಂತ್ರಣ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದೆ.ಇದನ್ನೂ ಓದಿ: ಕರ್ನಾಟಕ ಫ್ರಾಡ್‌ಗಳ ಸಂತೆಯಾಗಲು ಸಿದ್ದರಾಮಯ್ಯ ಕಾರಣ – ಹೆಚ್. ವಿಶ್ವನಾಥ್ ಲೇವಡಿ
Advertisement
Advertisement
ಪಂಜಾಬ್ ಮತ್ತು ಹರಿಯಾಣದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ ಕೋರ್ಟ್, ಹುಲ್ಲು ಸುಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಸರ್ಕಾರಗಳು ಹಾಗೂ ಕೇಂದ್ರ ಪರಿಸರವನ್ನು ರಕ್ಷಿಸಲು ಗಂಭೀರವಾಗಿ ಸಿದ್ಧರಿದ್ದರೆ, ಸೆಕ್ಷನ್ 15ನ್ನು ತಿದ್ದುಪಡಿ ಮಾಡುವ ಮೊದಲು ಎಲ್ಲವನ್ನೂ ಸರಿಪಡಿಸಲಾಗುತ್ತಿತ್ತು. ಇದೆಲ್ಲವೂ ರಾಜಕೀಯ ಬೇರೇನೂ ಅಲ್ಲ ಎಂದು ಹೇಳಿದೆ.
Advertisement
ಟ್ರ್ಯಾಕ್ಟರ್ ಮತ್ತು ರೈತರಿಗೆ ಡೀಸೆಲ್ ಹಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಪಂಜಾಬ್‌ನ ಅಡ್ವೊಕೇಟ್ ಜನರಲ್‌ಗೆ ಸುಳ್ಳು ಹೇಳಿಕೆಯನ್ನು ನೀಡಿತ್ತು. ಅದನ್ನು ಯಾಕೆ ನೀಡಿದ್ದೀರಿ ಎಂದು ನೀವು ಉತ್ತರಿಸಬೇಕು. ಇಲ್ಲಿಯವರೆಗೂ ಒಂದೇ ಒಂದು ಪ್ರಾಸಿಕ್ಯೂಷನ್ ಮಾಡಿಲ್ಲ, ಆದರೆ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ನಾವು ನಿಮ್ಮನ್ನು ಬಿಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.
ಇದಕ್ಕೆ ಪಂಜಾಬ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಸಿಂಘ್ವಿ, ನಾವು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕೇಂದ್ರ ಸರ್ಕಾರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಮುಂದಿನ 10 ದಿನಗಳಲ್ಲಿ ಪರಿಸರ ಸಂರಕ್ಷಣಾ ನಿಯಮಗಳನ್ನು ಬದಲಿಸಿ, ಅಂತಿಮಗೊಳಿಸಲಾಗುವುದು ಮತ್ತು ಕಾಯಿದೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಬಹುಮತದಿಂದ ಜಯಗಳಿಸುವುದು ನಿಶ್ಚಿತ: ಸಿದ್ದರಾಮಯ್ಯ