ಬೆಂಗಳೂರು: ಪರಿಸರ ದಿನಾಚರಣೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಲಕ್ಷ ಲಕ್ಷ ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಪರಿಸರ ದಿನಾಚರಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಜೂನ್ 5 ರಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಗಿತ್ತು.
ಸರಳವಾಗಿ ಆಚರಿಸಬೇಕಿದ್ದ ಪರಿಸರ ದಿನಾಚರಣೆಗೆ 20.45 ಲಕ್ಷ ರೂ. ಹಣ ಖರ್ಚಾಗಿದೆ. ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ.
ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ?
* ತಿಂಡಿ – 1,77,975 ರೂ.
* ಊಟ – 4,44,000 ರೂ.
* ಸೌಂಡ್ ಮಿಕ್ಸರ್ ವ್ಯವಸ್ಥೆ – 1,10,250 ರೂ.
* ತ್ಯಾಜ್ಯ ನಿರ್ವಹಣೆ ತಂಡ – 1,05,000 ರೂ.
* ಸ್ಟೇಜ್ – 1,01,250 ರೂ.
* ವೀಡಿಯೋಗ್ರಾಫರ್ – 94,920 ರೂ.
* ಫೋಟೋಗ್ರಾಫರ್ – 47,460 ರೂ.
* ಹೂಗುಚ್ಛ + ಹಣ್ಣಿನ ಬುಟ್ಟಿ – 94,500 ರೂ.
* ಪ್ರೆಸ್ ಕಿಟ್ – 20,000 ರೂ.
* ಫ್ಲವರ್ ಪಾಟ್ – 30,000 ರೂ.
* ಹಣ್ಣು + ಡ್ರೈ ಫ್ರೂಟ್ಸ್ – 15,750 ರೂ.
ಈ ರೀತಿಯಾ ಒಟ್ಟಾಗಿ 20.45 ಲಕ್ಷ ರೂ. ಹಣ ಖರ್ಚಾಗಿದೆ. ಇದರಿಂದ ಸಾರ್ವಜನಿಕರು ಸರಳವಾಗಿ ಮಾಡಬೇಕಿದ್ದ ಪರಿಸರ ದಿನಾಚರಣೆಯನ್ನು ಈ ರೀತಿಯಾಗಿ ಅದ್ಧೂರಿಯಾಗಿ ಮಾಡಿ ಸುಮ್ಮನೆ ಲಕ್ಷ ಲಕ್ಷ ಹಣವನ್ನು ದುಂದು ವೆಚ್ಚ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.