ನವದೆಹಲಿ: ನಮಾಜ್ (Namaz) ಮಾಡಲು ಮಸೀದಿಗಳಿಗೆ (Mosque) ಪ್ರವೇಶಿಸಲು ಮಹಿಳೆಯರಿಗೆ (Muslim Women) ಅನುಮತಿ ಇದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಸುಪ್ರೀಂ ಕೋರ್ಟ್ಗೆ (Supreme Court) ತಿಳಿಸಿದೆ.
ಮುಸ್ಲಿಂ ಮಹಿಳೆಯರು ಪ್ರಾರ್ಥನೆಗಾಗಿ ಮಸೀದಿಗೆ ಪ್ರವೇಶಿಸಲು ಮುಕ್ತರಾಗಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆಗೆ ಲಭ್ಯವಿರುವಂತಹ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ತನ್ನ ಹಕ್ಕನ್ನು ಚಲಾಯಿಸುವುದು ಅವರ ಆಯ್ಕೆಯಾಗಿದೆ ಎಂದು ಮಂಡಳಿ ಹೇಳಿದೆ. ಇದನ್ನೂ ಓದಿ: ಕಲಬುರಗಿ ಕ್ಷೇತ್ರದ ಅಭಿವೃದ್ಧಿ ಉದಾಹರಿಸಿ ಖರ್ಗೆಗೆ ಮೋದಿ ತಿರುಗೇಟು
Advertisement
Advertisement
ಈ ಸಂಬಂಧ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ಮುಸ್ಲಿಂ ಮಂಡಳಿ, ಎಐಎಂಪಿಎಲ್ಬಿಯು ಯಾವುದೇ ರಾಜ್ಯ ಅಧಿಕಾರಗಳಿಲ್ಲದ ತಜ್ಞರ ಸಂಸ್ಥೆಯಾಗಿದೆ. ಇಸ್ಲಾಮಿಕ್ ತತ್ವಗಳ ಆಧಾರದ ಮೇಲೆ ಸಲಹಾ ಅಭಿಪ್ರಾಯವನ್ನು ಮಾತ್ರ ನೀಡಬಹುದು ಎಂದು ಅಫಿಡವಿಟ್ ತಿಳಿಸಿದೆ.
Advertisement
ಧಾರ್ಮಿಕ ಗ್ರಂಥಗಳು, ಸಿದ್ಧಾಂತಗಳು ಮತ್ತು ಇಸ್ಲಾಂನ ಅನುಯಾಯಿಗಳ ಧಾರ್ಮಿಕ ನಂಬಿಕೆಗಳನ್ನು ಪರಿಗಣಿಸಿ, ಮಹಿಳೆಯರು ಮಸೀದಿಗಳಲ್ಲಿ ನಮಾಜ್ ಮಾಡಲು ಅನುಮತಿಸಲಾಗಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಮತಗಳಿಗೆ ಮಾತ್ರ ಸೀಮಿತವಾಗಿದ್ದೇವೆ, ನಮಗೂ ಅವಕಾಶ ಕೊಡಿ – BJPಗೆ ಒಬಿಸಿ ನಾಯಕರ ಮನವಿ
Advertisement
ಫರ್ಹಾ ಅನ್ವರ್ ಹುಸೇನ್ ಶೇಖ್ ಎಂಬಾತ 2020 ರಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಭಾರತದಲ್ಲಿ ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ ನಿಷೇಧಿಸುವ ಆಪಾದಿತ ಆಚರಣೆಗಳು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂಬ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಮಾರ್ಚ್ನಲ್ಲಿ ಸುಪ್ರೀಂ ಕೋರ್ಟ್ ಈ ವಿಚಾರಣೆ ನಡೆಸುವ ಸಾಧ್ಯತೆ ಇದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k