– ಕಾಂಗ್ರೆಸ್ ಹೈಕಮಾಂಡ್, ಕ್ಯಾಬಿನೆಟ್ ಸಚಿವರು ನನ್ನ ಪರ ಇದ್ದಾರೆ
– ರಾಜೀನಾಮೆ ಕೊಡುವ ತಪ್ಪು ಮಾಡಿಲ್ಲ
ಬೆಂಗಳೂರು: ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧ ನಡೆದಿರುವ ದೊಡ್ಡ ಷಡ್ಯಂತ್ರ ಇದು. ಕಾನೂನಿನ ಅಡಿಯಲ್ಲಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಾನು ಇದನ್ನ ನಿರೀಕ್ಷೆ ಮಾಡಿದ್ದೆ. ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಅದೆಲ್ಲ ಏನಾಯ್ತು. ನಾನು ನಿರೀಕ್ಷೆ ಮಾಡಿದ್ದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?
Advertisement
Advertisement
ರಾಜ್ಯಪಾಲರು ದೂರು ಬಂದ ದಿನವೇ ಶೋಕಾಸ್ ನೋಟಿಸ್ ಕೊಡಲು ತಯಾರಿ ಮಾಡ್ಕೊಂಡಿದ್ದರು. ಇದರ ಅರ್ಥ ಏನು? ನಿರಾಣಿ, ಜೊಲ್ಲೆ, ರೆಡ್ಡಿ, ಹೆಚ್ಡಿಕೆ ಮೇಲೆಯೂ ಪ್ರಾಸಿಕ್ಯೂಷನ್‌ಗೆ ಅನುಮತಿ ಬಾಕಿ ಇದೆ. ಅವರೆಲ್ಲರನ್ನೂ ಬಿಟ್ಟು ನನಗೆ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.
Advertisement
ಇದು ದೊಡ್ಡ ಷಡ್ಯಂತ್ರ. ನನಗೆ ಮೊದಲ ಶೋಕಸ್ ನೋಟಿಸ್ ನೀಡಿದಾಗಲೇ ಇದನ್ನ ನಿರೀಕ್ಷೆ ಮಾಡಿದ್ದೆ. ರಾಜ್ಯಪಾಲರನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಕಾನೂನಿನ ಅಡಿಯಲ್ಲಿ ಹೋರಾಟ ಮಾಡುತ್ತೇನೆ. ಅನೇಕ ರಾಜ್ಯಗಳಲ್ಲಿ ಸರ್ಕಾರ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಇಲ್ಲೂ ಹೀಗೇ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ರಾಜಕೀಯ, ವೈಯಕ್ತಿಕ ಸೇಡು: ಸುರ್ಜೇವಾಲ
ರಾಜ್ಯಪಾಲರ ನಿರ್ಧಾರ ಸಂವಿಧಾನಬಾಹಿರ ಕೋರ್ಟ್‌ನಲ್ಲಿ ರಾಜ್ಯಪಾಲರ ನಿರ್ಧಾರ ಪ್ರಶ್ನೆ ಮಾಡ್ತೇವೆ. ಎಲ್ಲರೂ ನನ್ನ ಪರ ಇದ್ದಾರೆ. ಹೈಕಮಾಂಡ್ ನನ್ನ ಪರ ಇದೆ. ರಾಜೀನಾಮೆ ಕೊಡೋ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ.