ಬರ್ಲಿನ್: ಬಾಕ್ಸಿಂಗ್ ರಿಂಗ್‍ನಲ್ಲಿ ಕೇವಲ ಎದುರಾಳಿಗಳು ಮಾತ್ರ ಹೊಡೆತ ತಿನ್ನುವುದಿಲ್ಲ, ಆಟಗಾರರ ಕೋಪಕ್ಕೆ ಕೆಲವೊಮ್ಮೆ ಅಂಪೈರ್ ಸಹ ತುತ್ತಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆಯಂತೆ ಆಸ್ಟ್ರೀಯಾ ಎಂಎಂಎ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬಾಕ್ಸರ್ ಒಬ್ಬ ಅಂಪೈರ್ ಅವರಿಗೆ ಕಿಕ್ ನೀಡಿದ್ದಾರೆ.
ಬಾಕ್ಸಿಂಗ್ ಮೈನ್ ಇವೆಂಟ್ ಪಂದ್ಯದಲ್ಲಿ ಜರ್ಮನಿಯ ನಿಹಾದ್ ನಾಸುಪೊವಿಕ್ ತನ್ನ ಎದುರಾಳಿ ವಿಲಿಯಂ ಓಟ್‍ನನ್ನು ತಮ್ಮ ಆಮೋಘ ನೆಕ್ ಚೋಕ್ ತಂತ್ರದ ಮೂಲಕ ಕೆಳಕ್ಕೆ ಉರುಳಿಸಿದ್ದರು. ಎದುರಾಳಿಯ ತಂತ್ರಕ್ಕೆ ಸಿಲುಕಿದ ವಿಲಿಯಂ ಟ್ಯಾಪ್ ಮಾಡುವ ಮೂಲಕ ತಮ್ಮ ಸೋಲನ್ನು ಒಪ್ಪಿಕೊಂಡರು. ಆದರೆ ಸರಿಯಾದ ಸಮಯಕ್ಕೆ ಮಧ್ಯ ಪ್ರವೇಶಿಸದ ಅಂಪೈರ್ ವಿರುದ್ಧ ಕೋಪಗೊಂಡ ವಿಲಿಯಂ ಮರುಕ್ಷಣದಲ್ಲಿ ಅಂಪೈರ್‍ಗೆ ಕಿಕ್ ನೀಡಿದ್ದಾರೆ.
Advertisement
ಈ ದೃಶ್ಯವಾಳಿಗಳನ್ನು ಬಾಕ್ಸಿಂಗ್ ಮ್ಯಾಚ್ ಸಂಸ್ಥೆಯ ಅಧಿಕೃತ ಪೇಜ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಯಾರು ಅನುಕರಿಸಬೇಡಿ’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
Advertisement
ಆಟಗಾರನ ವಿರುದ್ಧ ಹೆಚ್ಚಿನ ಕಮೆಂಟ್‍ಗಳು ವ್ಯಕ್ತವಾಗಿದ್ದು. ಆಟಗಾರನ ವಿರುದ್ಧ ಕೋಡ್ ಆಫ್ ಕಂಡಕ್ಟ್ ನಿಯಮದಡಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಲಾಗುತ್ತಿದೆ.