ಬೆಂಗಳೂರು: ರಾಜ್ಯಪಾಲರಿಗೆ ದೂರು ಕೊಟ್ಟ ಗುತ್ತಿಗೆದಾರರಿಗೆ ವಿಚಾರಣೆ (Enquiry) ಶಾಕ್ ಎದುರಾಗಿದ್ದು, ಪ್ರತಿಯೊಬ್ಬ ಗುತ್ತಿಗೆದಾರರಿಗೆ (Contractors) ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ಪ್ರತ್ಯೇಕ ವಿಚಾರಣೆ ನಡೆಸಿ ಪ್ರಶ್ನೆಗಳ ಸುರಿಮಳೆ ಸುರಿದಿದ್ದಾರೆ.
ಉಪಮುಖ್ಯಮಂತ್ರಿಯೂ ಆಗಿರುವ ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ (DK Shivakumar) ಅವರು ಬಾಕಿ ಬಿಲ್ ಬಿಡುಗಡೆಗೆ ಕಮಿಷನ್ ಕೇಳುತ್ತಿದ್ದಾರೆ ಎಂದು ಬಿಬಿಎಂಪಿ (BBMP) ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿದ್ದರು. ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿದ್ದರೂ ಉಪಮುಖ್ಯಮಂತ್ರಿಗಳು ತಡೆ ಹಿಡಿದಿದ್ದಾರೆ ಎಂದು ದೂರಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಮುಗಿಯದ ಶಿವಾಜಿ ಮೂರ್ತಿ ಗಲಾಟೆ – ಬಾಗಲಕೋಟೆ ಬಂದ್‌ಗೆ ಮುಂದಾದ ಬಿಜೆಪಿಗರು
Advertisement
Advertisement
ಇದನ್ನೇ ಅಸ್ತ್ರವಾಗಿಸಿಕೊಂಡಿದ್ದ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಡಿಕೆಶಿ ವಿರುದ್ಧ ಮುಗಿಬಿದ್ದಿದ್ದರು. ಇದರಿಂದಾಗಿ ಡಿಕೆಶಿ ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಇದರ ಬೆನ್ನಲ್ಲೇ ಕೆಲ ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿಲ್ಲ ಎಂದು ಆರೋಪ ಹಿಂಪಡೆದಿದ್ದರು. ಆದರೆ ಈಗ ರಾಜ್ಯಪಾಲರಿಗೆ ದೂರು ಕೊಟ್ಟ ಗುತ್ತಿಗೆದಾರರಿಗೇ ಶಾಕ್ ಆಗಿದೆ. ಸುಮ್ಮನೇ ಆರೋಪ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಬಿಬಿಎಂಪಿ ಹಣಕಾಸು ಅಪರ ಆಯುಕ್ತ ಮಹದೇವ್ ದೂರು ದಾಖಲಿಸಿದ್ದರು. ಇದನ್ನೂ ಓದಿ: ಎನ್‌ಇಪಿ ರದ್ದು ಮಾಡುವ ಸಿಎಂ ಹೇಳಿಕೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಕ್ಷೇಪ
Advertisement
Advertisement
ಅದರಂತೆ ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ಮುಂದೆ ಗುತ್ತಿಗೆದಾರರು ವಿಚಾರಣೆಗೆ ಹಾಜರಾಗಿ ದಾಖಲೆ ಸಮೇತ ಹೇಳಿಕೆ ದಾಖಲಿಸಿದ್ದಾರೆ. ಪ್ರತಿಯೊಬ್ಬ ಗುತ್ತಿಗೆದಾರರಿಗೆ ಪ್ರತ್ಯೇಕ ವಿಚಾರಣೆ ಮಾಡಿರುವ ಎಸಿಪಿ ಪ್ರಶ್ನೆಗಳ ಸುರಿಮಳೆ ಸುರಿದಿದ್ದು, 15 ಗುತ್ತಿಗೆದಾರರಿಂದ ಹೇಳಿಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಬಲಿಗರೇ ಬರುತ್ತೇವೆ ಎಂದ ಮೇಲೆ ಸೋಮಶೇಖರ್ ಕಾಂಗ್ರೆಸ್‌ನಲ್ಲಿರಲು ಸಾಧ್ಯವೇ : ಕೈ ಶಾಸಕ ಶ್ರೀನಿವಾಸ್
Web Stories