Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಯದಲ್ಲಿ ಬದುಕಿದ್ದು ಸಾಕು.. ಜನರು ಬದಲಾವಣೆ ಬಯಸಿದ್ದಾರೆ: ಬಂಗಾಳ ಜನತೆಗೆ ಮೋದಿ ಪತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಯದಲ್ಲಿ ಬದುಕಿದ್ದು ಸಾಕು.. ಜನರು ಬದಲಾವಣೆ ಬಯಸಿದ್ದಾರೆ: ಬಂಗಾಳ ಜನತೆಗೆ ಮೋದಿ ಪತ್ರ

Latest

ಭಯದಲ್ಲಿ ಬದುಕಿದ್ದು ಸಾಕು.. ಜನರು ಬದಲಾವಣೆ ಬಯಸಿದ್ದಾರೆ: ಬಂಗಾಳ ಜನತೆಗೆ ಮೋದಿ ಪತ್ರ

Public TV
Last updated: April 27, 2026 8:04 pm
Public TV
Share
2 Min Read
pm modi 5
SHARE

ಲಕ್ನೋ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರ ಮುಗಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಅಲ್ಲಿನ ಜನರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಹಲವು ವರ್ಷಗಳಿಂದ ಭಯದಲ್ಲಿ ಬದುಕುತ್ತಿದ್ದ ಮತದಾರರು ಬದಲಾವಣೆ ಮತ್ತು ಅಭಿವೃದ್ಧಿಯನ್ನು ಬಯಸಿದ್ದಾರೆ. ಪಶ್ಚಿಮ ಬಂಗಾಳದ ಮತದಾರರು, ವಿಶೇಷವಾಗಿ ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರು ಬದಲಾವಣೆ ಬಯಸಿದ್ದಾರೆ. ಜೊತೆಗೆ ಪ್ರಮುಖ ಬೇಡಿಕೆಗಳನ್ನು ಹೊಂದಿದ್ದಾರೆ. ಇದೆಲ್ಲವನ್ನೂ ನಾನು ಗ್ರಹಿಸಿದ್ದೇನೆ ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಂಗಾಳದ ತಾಯಿ ಕಣ್ಣೀರಿಡುತ್ತಿದ್ದಾಳೆ, ರಾಜ್ಯ ನುಸುಳುಕೋರರಿಂದ ತುಂಬಿದೆ, ಜನ ಭಯಭೀತರಾಗಿದ್ದಾರೆ: ಟಿಎಂಸಿ ವಿರುದ್ಧ ಮೋದಿ ವಾಗ್ದಾಳಿ

ತೃಣಮೂಲ ಕಾಂಗ್ರೆಸ್ ಅಡಿಯಲ್ಲಿ ಭಯದ ವಾತಾವರಣವಿದೆ ಅಂತ ಅದರಿಂದ ದೂರ ಸರಿದು ಜನರು ಉತ್ತಮ ಅವಕಾಶಗಳು, ಸುರಕ್ಷತೆ ಮತ್ತು ಅಭಿವೃದ್ಧಿಯನ್ನು ಹುಡುಕುತ್ತಿದ್ದಾರೆ. ಯುವಕರು ಮುಂದುವರಿಯಲು ಮುಕ್ತ ಅವಕಾಶಗಳನ್ನು ಬಯಸುತ್ತಾರೆ. ಹೆಣ್ಣುಮಕ್ಕಳು ಗೌರವ ಮತ್ತು ಸುರಕ್ಷತೆಯನ್ನು ಬಯಸುತ್ತಾರೆ. ಬಂಗಾಳದ ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಕುಟುಂಬವು ಬದಲಾವಣೆಯನ್ನು ಬಯಸುತ್ತದೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತದೆ. ಭಯದಲ್ಲಿ ಬದುಕುವುದು ಸಾಕು, ಈಗ ನಂಬಿಕೆ ಬೇಕು. ಈಗ ಬಂಗಾಳಕ್ಕೆ ಬಿಜೆಪಿ ಬೇಕು ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ.

ಬಿಜೆಪಿಯ ದೀರ್ಘಕಾಲದ ‘ಅಭಿವೃದ್ಧಿ ಹೊಂದಿದ ಬಂಗಾಳ’ ಪ್ರಚಾರ ಯೋಜನೆಯನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಗುಂಪುಗಳ ಜನರು ಬೆಳವಣಿಗೆಯ ಆಕಾಂಕ್ಷೆಗಳಲ್ಲಿ ಒಂದಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯುವ ಶಕ್ತಿಯಾಗಿರಲಿ ಅಥವಾ ಮಹಿಳಾ ಶಕ್ತಿಯಾಗಿರಲಿ, ನಮ್ಮ ರೈತ ಸಹೋದರ ಸಹೋದರಿಯರೇ, ಕಾರ್ಮಿಕರೇ ಅಥವಾ ಉದ್ಯಮಿಗಳೇ, ಎಲ್ಲರೂ ‘ಅಭಿವೃದ್ಧಿ ಹೊಂದಿದ ಬಂಗಾಳ’ಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಮ್ಮ ಪ್ರಚಾರದ ಹಾದಿ ಕೇವಲ ರಾಜಕೀಯವಾಗಿರದೇ, ಆಧ್ಯಾತ್ಮಿಕ ಪ್ರಯಾಣದಂತೆ ಭಾಸವಾಯಿತು. ಜನರ ವಾತ್ಸಲ್ಯ ಮತ್ತು ಮಾ ಕಾಳಿಯ ಆಶೀರ್ವಾದ ನಮ್ಮ ಮೇಲಿದೆ. ಬಿಸಿ ಬಿಸಿಲು, ನಿರಂತರ ರ‍್ಯಾಲಿಗಳು ಮತ್ತು ರೋಡ್ ಶೋಗಳ ಹೊರತಾಗಿಯೂ, ಬಂಗಾಳ ಚುನಾವಣೆಗೆ ಪ್ರಚಾರ ಮಾಡುವಾಗ ನಾನು ಎಂದಿಗೂ ದಣಿದಿಲ್ಲ. ಈ ಚುನಾವಣೆ ಕೇವಲ ಪ್ರಚಾರವಲ್ಲ, ಆಧ್ಯಾತ್ಮಿಕ ಪ್ರಯಾಣ ಎಂದು ನನಗೆ ಅನಿಸಿತು ಎಂದಿದ್ದಾರೆ. ಇದನ್ನೂ ಓದಿ: White House Dinner Shooting | ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ: ಮೋದಿ

TAGGED:PM ModiWest Bengalನರೇಂದ್ರ ಮೋದಿಪಶ್ಚಿಮ ಬಂಗಾಳ
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

4 Of Mumbai Family Die Of Suspected Food Poisoning After Eating Biryani Watermelon
Crime

ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

Public TV
By Public TV
10 minutes ago
Auto
Latest

ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಆದೇಶಕ್ಕೆ 6 ತಿಂಗಳ ಬ್ರೇಕ್ ಹಾಕಿದ `ಮಹಾ’ ಸರ್ಕಾರ

Public TV
By Public TV
13 minutes ago
H.S Shivashankar
Davanagere

ಶ್ರೀಗಳನ್ನು ಎಳೆದು ಹೊರಗೆ ಹಾಕ್ತಾರಂತೆ, ತಾಕತ್‌ ಇದ್ರೆ ಮುಟ್ಟಿ – ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಎಚ್ಚರಿಕೆ

Public TV
By Public TV
21 minutes ago
mangaluru cooker blast case auto driver
Dakshina Kannada

ಉಗ್ರ ಶಾರಿಕ್‌ಗೆ ಜೀವಾವಧಿ ಶಿಕ್ಷೆ ನೀಡಬೇಕಿತ್ತು: ಕುಕ್ಕರ್‌ ಬ್ಲಾಸ್ಟ್‌ನಿಂದ ಗಾಯಗೊಂಡಿದ್ದ ಆಟೋ ಚಾಲಕ ಮಾತು

Public TV
By Public TV
1 hour ago
E Khata
Bengaluru City

ಇನ್ಮುಂದೆ ಆನ್‌ಲೈನ್ ಮೂಲಕವೇ ಇ-ಖಾತಾ ಡೌನ್‌ಲೋಡ್‌ಗೆ ಅವಕಾಶ

Public TV
By Public TV
1 hour ago
Mangaluru Blast Case The Shariq cooker bomb capable of blowing up the bus FSL Investigation report 1
Bengaluru City

ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಕೇಸ್‌ – ಉಗ್ರ ಶಾರಿಕ್‌ಗೆ 10 ವರ್ಷ ಜೈಲು ಶಿಕ್ಷೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?