ಬೆಂಗಳೂರು: ಸೋ ಕಾಲ್ಡ್ ಫ್ರಿನ್ಸ್ ನಲಪಾಡ್‍ಗೆ ಪರಪ್ಪನ ಅಗ್ರಹಾರದಲ್ಲಿ ಜ್ಞಾನೋದಯವಾಗಿದೆ ಅಂತೆ. ಜೈಲಿಗೆ ಹೋದ ಮೊದಲ ಒಂದು ತಿಂಗಳು ನರಕ ಯಾತನೆ ಅನುಭವಿಸಿರೋ ನಲಪಾಡ್ ಜೀವನ ಏನು ಅನ್ನೋದರ ಬಗ್ಗೆ ಅರಿವಾಗಿದೆಯಂತೆ.
ಜೈಲಿನಲ್ಲಿ ಟೈಮ್‍ಪಾಸ್ ಮಾಡೋಕೆ ಆಗದ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಮತ್ತು ವಿವೇಕಾನಂದರ ಬುಕ್‍ಗಳನ್ನ ಓದಲು ಶುರು ಮಾಡಿದ್ದಾನೆ. ಯಾರೂ ಯಾವತ್ತೂ ಶಾಶ್ವತವಲ್ಲ, ನಾವು ಹೊರಗಡೆ ಹೇಗೆ ಬದುಕುತ್ತೇವೆ. ಒಳ್ಳೆ ಹೆಸರು ಮಾಡ್ತೀವಿ ಅನ್ನೋದಷ್ಟೆ ಮುಖ್ಯ ಅಂತಾ ಫಿಲಾಸಫಿ ಮಾತಾಡುತ್ತಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
ಕೋರ್ಟಿಗೆ ಪೊಲೀಸರು ಕರೆದುಕೊಂಡು ಹೋದಾಗಲೆಲ್ಲಾ ನಲಪಾಡ್..ನಲಪಾಡ್ ಅಂತಾರಂತೆ ಜನ. ಏರಿಯಾದಲ್ಲಿ ಜನ ನಲಪಾಡ್ ಅಂತಾ ಗುರುತು ಹಿಡಿದಾಗ ಖುಷಿಯಾಗ್ತಿದ್ದ ನಲಪಾಡ್‍ಗೆ ಹಿಂಸೆಯಾಗ್ತಿದ್ಯಂತೆ. ದೆಹಲಿ ನಾಯಕರ ಶೈಲಿಯಲ್ಲಿ ವೆಸ್ಟ್‍ಕೋಟ್ ಜುಬ್ಬಾ ಧರಿಸಿ ಸ್ಟೈಲಿಶ್ ಆಗಿ ಓಡಾಡ್ತಿದ್ದ ನಲಪಾಡ್‍ಗೆ ಇನ್ಮುಂದೆ ವೆಸ್ಟ್‍ಕೋಟ್ ಹಾಕಲ್ವಂತೆ. ವಿದ್ವತ್ ಮೇಲೆ ಹಲ್ಲೆ ನಡೆಸಿದಾಗ ಕೂಡ ನಲಪಾಡ್ ವೆಸ್ಟ್ ಕೋಟ್ ಡ್ರೆಸ್‍ನಲ್ಲೇ ಇದ್ದ. ಜೈಲಿಂದ ಹೊರಗಡೆ ಬಂದಮೇಲೆ ನನ್ನೆಸರು ಇನ್ನೆಂದೂ ಮೀಡಿಯಾಗಳಲ್ಲಿ ಬರದಂತೆ ಬದುಕ್ತೀನಿ ಅಂತಿದ್ದಾನೆ ಎಂಬುದಾಗಿ ಜೈಲಿನ ಮೂಲಗಳು ತಿಳಿಸಿವೆ.