ರಜಾ ದಿನ ಭಾನುವಾರ ಏನಾದ್ರೂ ಸ್ಪೆಷಲ್ ಮಾಡಬೇಕು ಅಂತ ತುಂಬಾ ಜನ ಅಂದುಕೊಳ್ತಾರೆ. ಆದರೆ ಕೆಲವೊಮ್ಮೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ, ಯೋಚನೆ ಮಾಡುವಷ್ಟರಲ್ಲಿಯೇ ಅರ್ಧ ದಿನ ಕಳೆದುಹೋಗಿರುತ್ತದೆ. ಇನ್ನೂ ಗೊತ್ತಾದಾಗ ಮಾಡುವ ವಿಧಾನವೂ ತುಂಬಾ ಕಷ್ಟಕರವಾಗಿರಬಹುದು. ಅಲ್ಲದೇ ಅದು ಎಲ್ಲರಿಗೂ ಇಷ್ಟವಾಗಬೇಕು ಅಂತೇನಿಲ್ಲ ಹೀಗಾಗಿ ಸುಲಭವಾಗಿ ಸರಳ ರೀತಿಯಲ್ಲಿ ಮಾಡಿ ಪನೀರ್ ಪಾವ್‌ಬಾಜಿ
ಬೇಕಾಗುವ ಪದಾರ್ಥಗಳು
ಬೇಯಿಸಿದ ಬಟಾಣಿ
ಬೇಯಿಸಿದ ಆಲೂಗಡ್ಡೆ
ಟೊಮೇಟೋ
ಈರುಳ್ಳಿ
ಕ್ಯಾರೆಟ್
ಕ್ಯಾಪ್ಸಿಕಂ
ಹಸಿಮೆಣಸು
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಪಾವ್ ಭಾಜಿ ಮಸಾಲಾ
ಮೆಣಸಿನ ಪುಡಿ
ಅರಿಶಿಣ
ಉಪ್ಪು
ಬೆಣ್ಣೆ
ಎಣ್ಣೆ
ಪನೀರ್
ಕೊತ್ತಂಬರಿ ಸೊಪ್ಪು
ನಿಂಬೆ
ಬನ್
ಮಾಡುವ ವಿಧಾನ
ಮೊದಲಿಗೆ ಎಲ್ಲಾ ತರಕಾರಿಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ 2-3 ವಿಸಿಲ್ ಬರುವವರೆಗೆ ಬೇಯಿಸಿ. ಬೇಯಿಸಿದ ನಂತರ ತರಕಾರಿಗಳನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ. ಇನ್ನೊಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ. ಈರುಳ್ಳಿ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಕೈಯಾಡಿಸಿಕೊಳ್ಳಿ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಹಾಕಿ 1 ನಿಮಿಷ ಫ್ರೈ ಮಾಡಿ. ಟೊಮೆಟೋ ಹಾಕಿ ಮೃದುವಾಗುವವರೆಗೆ ಬೇಯಿಸಿ. ಅದಕ್ಕೆ ಪಾವ್ ಭಾಜಿ ಮಸಾಲಾ, ಮೆಣಸಿನ ಪುಡಿ, ಅರಿಶಿಣ, ಉಪ್ಪು ಸೇರಿಸಿ. ಸ್ವಲ್ಪ ಸಮಯದ ಬಳಿಕ ಬೇಯಿಸಿದ ತರಕಾರಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ನೀರು ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ. ಕೊನೆಯಲ್ಲಿ ಪನೀರ್ ಚೂರುಗಳನ್ನು ಹಾಕಿ. ನಂತರ ಸ್ವಲ್ಪ ಬೆಣ್ಣೆ ಹಾಕಿ ಚೆನ್ನಾಗಿ ಕಲಸಿ.
ಇನ್ನೊಂದು ತವಾ ಮೇಲೆ ಬೆಣ್ಣೆ ಹಾಕಿ ಪಾವ್‌ನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಿ. ಬಳಿಕ ತಯಾರಾದ ಭಾಜಿಗೆ ಬೆಣ್ಣೆ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ