ಹಾಲಿನಿಂದ ಮಾಡಿದ ಯಾವುದೇ ರೆಸಿಪಿ ಎಲ್ಲ ವೆಜ್ ಮತ್ತು ನಾನ್‍ವೆಜ್ ಪ್ರಿಯರಿಗೂ ತುಂಬಾ ಇಷ್ಟ. ಹಾಲಿನಿಂದ ಮಾಡಿದ ಪ್ರತಿಯೊಂದು ಸಿಹಿ ಪದಾರ್ಥಾಗಳು ಸವಿಯಲು ಚೆನ್ನಾಗಿ ಇರುತ್ತೆ. ಅದಕ್ಕೆ ಇಂದು ನಿಮಗಾಗಿ ‘ಫ್ರೂಟ್ ಕಸ್ಟರ್ಡ್’ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಇದು ಆರೋಗ್ಯಕ್ಕೆ ತುಂಬ ಒಳ್ಳೆಯದು ಸವಿಯಲು ತುಂಬಾ ಚೆನ್ನಾಗಿರುತ್ತೆ.
Advertisement
ಬೇಕಾಗಿರುವ ಪದಾರ್ಥಗಳು:
* ಹಾಲು – ಅರ್ಧ ಲೀಟರ್
* ಕಸ್ಟರ್ಡ್ ಪೌಡರ್ – 2 ಟೀಸ್ಪೂನ್
* ಸಕ್ಕರೆ – 5 ಟೀಸ್ಪೂನ್
* ಕಟ್ ಮಾಡಿದ ಕಲ್ಲಂಗಡಿ ಹಣ್ಣು – ಅರ್ಧ ಕಪ್
Advertisement
* ಕಟ್ ಮಾಡಿದ ಪಪ್ಪಾಯ ಸ್ವಲ್ಪ – ಅರ್ಧ ಕಪ್
* ಕಟ್ ಮಾಡಿದ ಕಪ್ಪು ದ್ರಾಕ್ಷಿ – ಅರ್ಧ ಕಪ್
* ಸ್ವಲ್ಪ ದಾಳಿಂಬೆ – ಅರ್ಧ ಕಪ್
* ಕಟ್ ಮಾಡಿದ ಬಾಳೆಹಣ್ಣು – ಅರ್ಧ ಕಪ್
* ಕಟ್ ಮಾಡಿದ ಸೇಬು – ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* 1 ಕಪ್ ಹಾಲಿಗೆ ಎರಡು ಸ್ಪೂನ್ ಕಸ್ಟರ್ಡ್ ಪೌಡರ್ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಬೇಕು.
* ಉಳಿದ ಹಾಲನ್ನು ಕಾಯಿಸಿ, ಕಾದ ಹಾಲಿಗೆ 5 ಸ್ಪೂನ್ ಸಕ್ಕರೆ ಹಾಕಬೇಕು. ಕೆನೆ ಬರದಂತೆ ಕೈ ಆಡಿಸುತ್ತಲೇ ಇರಿ.
* ನಂತರ ತಯಾರಿಸಿಕೊಂಡ ಹಾಲು ಮತ್ತು ಕಸ್ಟರ್ಡ್ ಮಿಶ್ರಣವನ್ನು ಮಿಕ್ಸ್ ಮಾಡಿ ಉಕ್ಕಿದ ನಂತರ ಗ್ಯಾಸ್ ಆಫ್ ಮಾಡಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು.
* ತಣ್ಣಗಾದ ಮಿಶ್ರಣವನ್ನು ಬೇರೆ ಬೌಲ್‍ಗೆ ಸುರಿದು ಕಟ್ ಮಾಡಿದ ಕಲ್ಲಂಗಡಿ, ಬಾಳೆಹಣ್ಣು, ಸೇಬು, ಪಪ್ಪಾಯಿ ಹಾಗೂ ಕಪ್ಪು ದ್ರಾಕ್ಷಿ, ದಾಳಿಂಬೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 2 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ಟೇಸ್ಟ್ ನೋಡಿ.