ಇದೀಗ ಬೇಸಿಗೆಯ ಝಳಕ್ಕೆ ಕಂಗೆಟ್ಟಿರುವ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಎಳನೀರು, ಜ್ಯೂಸ್‌ಗಳಿಗೆ ಭಾರೀ ಡಿಮಾಂಡ್. ನಾವಿಂದು ಸಿಂಪಲ್ ಆಗಿ ಮನೆಯಲ್ಲಿಯೇ ಸ್ಟ್ರಾಬೆರಿ ಲೆಮನೇಡ್ ಮಾಡೋದು ಹೇಗೆಂದು ತಿಳಿಸಿಕೊಡುತ್ತೇವೆ. ಸುಡುವ ಬಿಸಿಲಿಗೆ ಈ ಪಾನೀಯ ನಿಮಗೆ ರಿಫ್ರೆಶಿಂಗ್ ಅನುಭವ ನೀಡುತ್ತದೆ. ಸ್ಟ್ರಾಬೆರಿ ಲೆಮನೇಡ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ತಾಜಾ ಸ್ಟ್ರಾಬೆರಿ – 2 ಕಪ್
ನೀರು – 7 ಕಪ್
ಸಕ್ಕರೆ – 1 ಕಪ್
ನಿಂಬೆ ಹಣ್ಣು – 2
ಅಲಂಕಾರಕ್ಕೆ – ಹೆಚ್ಚಿದ ಸ್ಟ್ರಾಬೆರಿ, ನಿಂಬೆ ಹಣ್ಣು, ಪುದೀನಾ ಚಿಗುರು ಬಳಸಬಹುದು ಇದನ್ನೂ ಓದಿ: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತೆ ಕೇರಳ ಸ್ಟೈಲ್ ಕುಲುಕ್ಕಿ ಶರ್ಬತ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸಕ್ಕರೆಯನ್ನು 2 ಕಪ್ ನೀರಿಗೆ ಹಾಕಿ, 2 ನಿಮಿಷ ಮೈಕ್ರೊವೇವ್ ಮಾಡಿಕೊಂಡು ಕರಗಿಸಿಕೊಳ್ಳಿ.
* ಈಗ ಸ್ಟ್ರಾಬೆರಿಗಳನ್ನು ಬ್ಲೆಂಡರ್‌ಗೆ ಹಾಕಿ, 1 ಕಪ್ ನೀರಿನೊಂದಿಗೆ ನಯವಾಗಿ ರುಬ್ಬಿಕೊಳ್ಳಿ.
* ಬಳಿಕ ಸ್ಟ್ರಾಬೆರಿ ಪ್ಯೂರಿಯನ್ನು ಸಕ್ಕರೆ ನೀರಿನ ಮಿಶ್ರಣಕ್ಕೆ ಹಾಕಿ, ನಿಂಬೆ ರಸ ಹಾಗೂ ಉಳಿದ 4 ಕಪ್ ನೀರನ್ನು ಬೆರೆಸಿಕೊಳ್ಳಿ.
* ಈಗ ಸ್ಟ್ರಾಬೆರಿ ಲೆಮನೇಡ್ ಅನ್ನು ಸಂಪೂರ್ಣ ತಣ್ಣಗಾಗಲು ಬಿಡಿ. ಬಳಿಕ ಬೇಕೆಂದರೆ ನೀವು ಫ್ರಿಜ್‌ನಲ್ಲಿ ಇಡಬಹುದು.
* ಬಳಿಕ ಕತ್ತರಿಸಿದ ಸ್ಟ್ರಾಬೆರಿ, ನಿಂಬೆ ಹಣ್ಣಿನ ತುಂಡುಗಳು, ಪುದೀನಾ ಚಿಗುರುಗಳೊಂದಿಗೆ ಅಲಂಕರಿಸಿ ಸ್ಟ್ರಾಬೆರಿ ಲೆಮನೇಡ್ ಅನ್ನು ಸವಿಯಿರಿ. ಇದನ್ನೂ ಓದಿ: ಸಮ್ಮರ್ ಸ್ಪೆಷಲ್ – ಅನನಾಸು, ತೆಂಗಿನಕಾಯಿಯ ಸ್ಮೂದಿ ಮಾಡಿ