ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಗುಜರಾತಿ ಭಾಷೆಯ ಕವನ ಸಂಕಲನ ಇಂಗ್ಲಿಷ್‍ಗೆ ಅನುವಾದಗೊಂಡಿದ್ದು ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬರಲಿದೆ.
Advertisement
2007ರಲ್ಲಿ ಪ್ರಕಟವಾಗಿದ್ದ ಮೂಲ ಕೃತಿ `ಆಂಖ್ ಕಾ ಧನ್ಯ ಛೇ’ ಕವನ ಸಂಕಲನ ಇದೀಗ ಇಂಗ್ಲಿಷ್‍ನಲ್ಲಿ `ಲೆಟರ್ಸ್ ಟು ಸೆಲ್ಫ್’ ಹೆಸರಿನಲ್ಲಿ ಪ್ರಕಟವಾಗುತ್ತಿದೆ. ಗುಜರಾತಿ ಭಾಷೆಯಲ್ಲಿ ಮೋದಿ ಈ ಕವನ ಸಂಕಲನವನ್ನು ಬರೆದಿದ್ದರು. ಇದೀಗ ಗುಜರಾತಿ ಭಾಷೆಯಿಂದ ಈ ಕವನಗಳನ್ನು ಪತ್ರಕರ್ತೆ ಹಾಗೂ ಇತಿಹಾಸ ತಜ್ಞೆ ಭಾವನಾ ಸೋಮಾಯಾ ಇಂಗ್ಲಿಷ್‍ಗೆ ಅನುವಾದಿಸಿದ್ದಾರೆ. ಇದನ್ನೂ ಓದಿ: Commonwealth Games 2022: ಭಾರತಕ್ಕೆ ನಾಲ್ಕನೇ ಪದಕ – ವೇಟ್‍ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಿಂದ್ಯಾರಾಣಿ ದೇವಿ
Advertisement
Advertisement
ಪ್ರಗತಿ, ಹತಾಶೆ, ಅನ್ವೇಷಣೆ, ಧೈರ್ಯ ಹಾಗೂ ಸಹಾನುಭೂತಿಯಂಥಹ ವಿಷಯಗಳು ಕವನದಲ್ಲಿವೆ. ಮೋದಿ ಅವರ ಭಾವನೆಗಳ ಮಂಥನವನ್ನು ಹಿಡಿದಿಡಲಾಗಿದೆ ಎಂದು ಅನುವಾದಕಿ ಭಾವನ ಹೇಳಿದ್ದಾರೆ. ಈ ಕೃತಿ ಕವನ ಪ್ರಿಯರಿಗೆ ಇಷ್ಟವಾಗುತ್ತವೆ. ಅನುವಾದವೂ ಅದ್ಭುತವಾಗಿದೆ ಎಂದು ಫಿಂಗರ್‌ಪ್ರಿಂಟ್ ಪಬ್ಲಿಷಿಂಗ್‍ನ ಕಾರ್ಯನಿರ್ವಾಹಕೆ ಪ್ರಕಾಶಕ ಶಂತನು ದತ್ತಗುಪ್ಪಾ ಹೇಳಿದ್ದಾರೆ. `ಲೆಟರ್ ಟು ಸೆಲ್ಫ್’ ಕವನದ ಇಂಗ್ಲಿಷ್ ಅನುವಾದವನ್ನು ಫಿಂಗರ್‌ಪ್ರಿಂಟ್ ಪಬ್ಲಿಷಿಂಗ್ ಸಂಸ್ಥೆ ಹೊರ ತರುತ್ತಿದೆ. ಇದನ್ನೂ ಓದಿ: ದಯವಿಟ್ಟು ರಾಜೀನಾಮೆ ವಾಪಸ್ ಪಡೆಯಿರಿ- ಬಿಜೆಪಿ ಕಾರ್ಯಕರ್ತರಲ್ಲಿ ರೇಣುಕಾಚಾರ್ಯ ಮನವಿ