ಬೆಂಗಳೂರು: ಕನ್ನಡ ಶಾಲೆಗಳ ವಿಲೀನ ಹಾಗೂ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸುವ ಸರ್ಕಾರದ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‍ಜಿ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇದು ಕನ್ನಡಕ್ಕೆ ಮಾರಕವಾಗುವ ಕೆಲ್ಸ, ಇದನ್ನು ಒಪ್ಪೋದಕ್ಕೆ ಸಾಧ್ಯವೇ ಇಲ್ಲ. ಶಾಲೆಯ ವಿಲೀನ ಮಾಡ್ತಾರೆ ಅಂದ್ರೆ ಅದು, ಸರ್ಕಾರಿ ಶಾಲೆಯನ್ನ ಮುಚ್ಚುವ ಪ್ರಕ್ರಿಯೆಯಾಗಿದೆ. ಸರ್ಕಾರದಿಂದಲೇ ಆಂಗ್ಲ ಮಾಧ್ಯಮ ಶಾಲೆ ತೆರೆಯುತ್ತಾರೆ ಅಂದ್ರೇ ಅದು ಕನ್ನಡಕ್ಕೆ ಕೊಡಲಿಯೇಟು. ಇದು ಆತಂಕಕಾರಿ ತೀರ್ಮಾನ. ಇದು ಸರ್ಕಾರದ ತಪ್ಪು ಹೆಜ್ಜೆ. ಈ ಬಗ್ಗೆ ಸಿಎಂಗೆ ಮನವರಿಕೆ ಮಾಡಿಕೊಡ್ತೇವೆ ಅಂತ ಹೇಳಿದ್ದಾರೆ.
Advertisement
ಶಿಕ್ಷಣದಲ್ಲಿ ಇದೀಗ ದಂಧೆ ಶುರುವಾಗಲು ಮಠಾಧೀಶರು ಕಾರಣ ಅಂತಾ ಆರೋಪಿಸಿದ್ದಾರೆ. ಕೆಲ ಮಠಾಧೀಶರು, ರಾಜಕೀಯ ನಾಯಕರು ಹಾಗೂ ಕೆಲ ಅಧಿಕಾರಿಗಳಿಂದ ಇಡೀ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಸರ್ಕಾರ ಇದನ್ನು ಮೊದಲು ಶುದ್ಧೀಕರಿಸಬೇಕು ಅಂತಾ ಆಗ್ರಹಿಸಿದ್ರು.
Advertisement
Advertisement