ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಭವ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಭರವಸೆ ಮೂಡಿಸಿರುವ ಪ್ರತಿಭಾವಂತ ನಟ ಪ್ರಮೋದ್. ಇತ್ತೀಚೆಗೆ ಅಮೇಜಾನ್ ಪ್ರೈಂ ನಲ್ಲಿ ಬಿಡುಗಡೆಗೊಂಡ ರತ್ನನ್ ಪ್ರಪಂಚ ಸಿನಿಮಾದಲ್ಲಿ ಉಡಾಳ್ ಬಾಬು ಆಗಿ ಇವರ ಅಭಿನಯ ಕಂಡು ಸಿನಿ ಪ್ರೇಕ್ಷಕರು ಕೊಂಡಾಡಿದ್ದರು. ನಟನೆ, ಡಾನ್ಸ್, ಆಕ್ಷನ್ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಪ್ರಮೋದ್ ಲಾಂಗ್ ಹಿಡಿದು ಮಾಸ್ ಅವತಾರ ಎತ್ತಿರುವ ಸಿನಿಮಾ ‘ಇಂಗ್ಲಿಷ್ ಮಂಜ’. ಇವರ ಮಾಸ್ ಅವತಾರಕ್ಕೆ ಸಾಥ್ ಸಿಕ್ಕಿರುವುದು ಸ್ಯಾಂಡಲ್‍ವುಡ್ ಸ್ಟಾರ್ ಡೈರೆಕ್ಟರ್ ಸುಕ್ಕಾ ಸೂರಿಯಿಂದ ಎನ್ನುವುದು ವಿಶೇಷ ಸಂಗತಿ.
Advertisement
‘ಇಂಗ್ಲಿಷ್ ಮಂಜ’ ಪಕ್ಕಾ ರೌಡಿಸಂ ಹಿನ್ನೆಲೆಯುಳ್ಳ ಸಿನಿಮಾ. 2020ರಲ್ಲಿ ಸೆಟ್ಟೇರಿದ್ದ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಇಂದು ಚಿತ್ರದ ನಾಯಕ ನಟ ಪ್ರಮೋದ್ ಹುಟ್ಟುಹಬ್ಬ. ಆದರಿಂದ ಚಿತ್ರತಂಡ ಚಿತ್ರದ ಟೀಸರ್ ಇಂದು ಬಿಡುಗಡೆ ಮಾಡಿದೆ. ಟೈಟಲ್ ಮೂಲಕವೇ ಒಂದು ಹಂತದ ಕ್ಯೂರಿಯಾಸಿಟಿಯನ್ನು ಪ್ರೇಕ್ಷಕರಲ್ಲಿ ಮೂಡಿಸಿದ್ದ ಚಿತ್ರ ಟೀಸರ್ ಬಿಡುಗಡೆಯಾದ ಮೇಲೆ ಆ ಕ್ಯೂರಿಯಾಸಿಟಿ ಲೆವೆಲ್ ಇನ್ನಷ್ಟು ಹೆಚ್ಚಿಸಿದೆ. ಮಾಸ್ ಟೀಸರ್ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿದೆ. ರೌಡಿಸಂ ಹಿನ್ನೆಲೆಯ ಸಿನಿಮಾ ನಿರ್ದೇಶನಕ್ಕೆ ಬ್ರ್ಯಾಂಡ್ ಅಂದರೆ ಅದು ಸ್ಟಾರ್ ಡೈರೆಕ್ಟರ್ ಸೂರಿ. ಆದರಿಂದಲೇ ಚಿತ್ರತಂಡ ಇಂಗ್ಲಿಷ್ ಮಂಜ ಟೀಸರ್ ಬಿಡುಗಡೆಯನ್ನು ಅವರಿಂದಲೇ ಮಾಡಿಸಿದೆ. ಟೀಸರ್ ಝಲಕ್ ಹಾಗೂ ಟೈಟಲ್ ನೋಡಿ ಸಖತ್ ಇಂಪ್ರೆಸ್ ಆಗಿರುವ ಸೂರಿ ಚಿತ್ರತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR
Advertisement
Advertisement
ಕೋಲಾರ ಸಿನಿಮಾ ನಿರ್ದೇಶಿಸಿದ್ದ ಆರ್ಯ ಎಂ.ಮಹೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದು. ರೌಡಿಸಂ ಹಿನ್ನೆಲೆಯ ಕಥೆಗೆ ಬೇಕಾದ ಎಲ್ಲಾ ಕಮರ್ಶಿಯಲ್ ಎಳೆಯೂ ಸಿನಿಮಾದಲ್ಲಿದ್ದು ಅದರೊಂದಿಗೆ ಸುಂದರ ಪ್ರೇಮ್ ಕಹಾನಿಯೂ ಚಿತ್ರದಲ್ಲಿದೆ. ಚಿತ್ರದಲ್ಲಿ ಲಾಂಗ್ ಹಿಡಿದು ರಗಡ್ ಲುಕ್‍ನಲ್ಲಿ ಅಬ್ಬರಿಸಿರುವ ಪ್ರಮೋದ್ ಲವರ್ ಬಾಯ್ ಆಗಿಯೂ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ತೇಜಸ್ವಿನಿ ಶರ್ಮಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸುನೀಲ್ ಪುರಾಣಿಕ್, ವಿ.ನಾಗೇಂದ್ರ ಪ್ರಸಾದ್, ವಿಕ್ಟರಿ ವಾಸು, ನಾಗೇಂದ್ರ ಅರಸ್ ಒಳಗೊಂಡ ಅನುಭವಿ ಕಲಾವಿದರ ಬಳಗ ಚಿತ್ರದಲ್ಲಿದೆ. ಇದನ್ನೂ ಓದಿ: ಪುಷ್ಪ-2’ಗೆ ಶೇ.50 ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ!
Advertisement
2020ರಲ್ಲಿ ಸೆಟ್ಟೇರಿದ್ದ ಈ ಚಿತ್ರ ಬಿಡುಗಡೆಯ ಅಂಚಿಗೆ ಬಂದು ನಿಂತಿದ್ದು, ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಆರಂಭ ನೀಡಿದೆ ಚಿತ್ರತಂಡ. ಚಿತ್ರಕ್ಕೆ ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಡೇವಿಡ್ ಆರ್ ಬಂಡವಾಳ ಹೂಡಿದ್ದು, ಬಿ.ಆರ್.ಹೇಮಂತ್ ಸಂಗೀತ ಸಂಯೋಜನೆ, ರಂಗಸ್ವಾಮಿ ಕ್ಯಾಮೆರಾ ವರ್ಕ್, ಕೆ.ಗಿರೀಶ್ ಕುಮಾರ್ ಸಂಕಲನ ಚಿತ್ರಕ್ಕಿದೆ.