ರೋಮ್: ಇನ್ನು ಮುಂದೆ ಸರ್ಕಾರಿ ಸಂವಹನ ಇಟಲಿ ಭಾಷೆಯಲ್ಲಿ (Italy language) ನಡೆಯಬೇಕು. ಒಂದು ವೇಳೆ ಇಂಗ್ಲಿಷ್ (English) ಅಥವಾ ಬೇರೆ ಯಾವುದೇ ವಿದೇಶಿ ಭಾಷೆಯಲ್ಲಿ ನಡೆದರೆ ದಂಡವನ್ನು ವಿಧಿಸುವ ಪ್ರಸ್ತಾಪ ಇರುವ ಚರ್ಚೆಗೆ ಗ್ರಾಸವಾಗುವ ಮಸೂದೆಯೊಂದನ್ನು ಮಂಡನೆ ಮಾಡಲು ಇಟಲಿ ಸರ್ಕಾರ ಮುಂದಾಗಿದೆ.
ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಯ (Giorgia Meloni) ಅವರ ಬ್ರದರ್ಸ್ ಆಫ್ ಇಟಲಿ (Brothers of Italy) ಪಕ್ಷ ಕರಡು ಮಸೂದೆಯನ್ನು ಸಿದ್ದಪಡಿಸಿದೆ. ಇದರ ಪ್ರಕಾರ ದೇಶದಲ್ಲಿ ಅಧಿಕೃತ ಸಂವಹನಕ್ಕೆ ಇಟಲಿ ಭಾಷೆಯಲ್ಲಿ ನಡೆಯಬೇಕು. ಯಾವುದೇ ವಿದೇಶಿ ಭಾಷೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಮಾಡುವಂತಿಲ್ಲ ಎಂಬ ನಿಯಮವನ್ನು ಒಳಗೊಂಡಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 100,000 ಯುರೋ (ಸುಮಾರು 90 ಲಕ್ಷ ರೂ.) ವರೆಗೆ ದಂಡವನ್ನು ವಿಧಿಸಲಾಗುವ ಪ್ರಸ್ತಾಪವನ್ನು ಒಳಗೊಂಡಿದೆ.
Advertisement
Advertisement
ಈ ಮಸೂದೆ ಈಗ ಸಂಸತ್ತಿನ ಚರ್ಚೆಯ ಹಾದಿಯಲ್ಲಿದೆ. ಇಟಾಲಿಯನ್ ಭಾಷೆಯನ್ನೇ ಲಿಖಿತ ಹಾಗೂ ಮೌಖಿಕವಾಗಿ ಬಳಸಲು ಹಾಗೂ ಸಾರ್ವಜನಿಕರಿಗೆ ಈ ಭಾಷೆಯ ಜ್ಞಾನ ಹಾಗೂ ಪಾಂಡಿತ್ಯವನ್ನು ಹೆಚ್ಚಿಸಲು ಈ ನಿರ್ಧಾರ ಮಾಡಲಾಗಿದೆ. ಇದೀಗ ವಿದೇಶಿ ಭಾಷೆಗಳ ಬ್ಯಾನ್ ಇಟಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಅಧಿಕೃತ ದಾಖಲೆಗಳಲ್ಲಿರುವ ಇಂಗ್ಲಿಷ್ ಬಳಕೆಯನ್ನು ನಿಷೇಧಿಸುತ್ತದೆ. ಇದನ್ನೂ ಓದಿ: ಚೀನಾದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲವ್ ಮಾಡಲು ಒಂದು ವಾರ ರಜೆ
Advertisement
ಇಷ್ಟು ಮಾತ್ರವಲ್ಲದೇ ದೇಶದಲ್ಲಿ ಸಾರ್ವಜನಿಕ ಸರಕು ಹಾಗೂ ಸೇವೆಗಳ ಪ್ರಚಾರ ಮತ್ತು ಬಳಕೆಗೆ ಈ ನಿಯಮ ಕಡ್ಡಾಯವಾಗಿದೆ. ಒಂದು ವೇಳೆ ಉಲ್ಲಂಘನೆಯಾದರೆ 5,000 ಯುರೋದಿಂದ 100,000 ಯುರೋ ವರೆಗೆ ದಂಡ ವಿಧಿಸುವ ಪ್ರಸ್ತಾಪವನ್ನು ಒಳಗೊಂಡಿದೆ.
Advertisement
ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಯುವ ಜನತೆ ಬೀಳುತ್ತಿದ್ದರೆ. ಇದರಿಂದಾಗಿ ಇಟಲಿಯ ಸಂಸ್ಕೃತಿ ಮತ್ತು ಆರ್ಥಿಕತೆಗೆ ಸಮಸ್ಯೆಯಾಗುತ್ತದೆ. ಈ ಕಾರಣಕ್ಕೆ ಈ ಇಂಗ್ಲಿಷ್ ಬಳಕೆಯ ಮೇಲೆ ನಿರ್ಬಂಧ ಹೇರುವ ಮಸೂದೆ ಮಂಡನೆ ಮಂಡಲಾಗಿದೆ ಎಂದು ಬ್ರದರ್ಸ್ ಆಫ್ ಇಟಲಿ ಪಕ್ಷ ಸಮರ್ಥನೆ ಮಾಡಿಕೊಂಡಿದೆ. ಇದನ್ನೂ ಓದಿ: ಭಾರತದಿಂದ 85 ದೇಶಗಳಿಗೆ ರಕ್ಷಣಾ ಸಾಮಾಗ್ರಿ ರಫ್ತು – 1,5920 ಕೋಟಿ ದಾಖಲೆ