ಬೆಂಗಳೂರು: ಐಪಿಎಲ್ 10ನೇ ಆವೃತ್ತಿಗಾಗಿ ರಿಟ್ಜ್ ಕಾರ್ಲಟನ್ ಹೋಟೆಲ್‍ನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಇಂಗ್ಲೆಂಡಿನ ವೇಗಿ ಟೈಮಲ್ ಮಿಲ್ಸ್ ಅವರನ್ನು 12 ಕೋಟಿ ರೂ. ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ.
ಬಿಡ್‍ನಲ್ಲಿ ಟೈಮಲ್ ಮಿಲ್ಸ್ ಅವರಿಗೆ 50 ಲಕ್ಷ ರೂ. ಮೂಲ ಬೆಲೆ ನಿಗದಿಯಾಗಿತ್ತು. ಆದರೆ ಇವರ ಹೆಸರು ಬಂದಾಗ ಪಂಜಾಬ್, ಮುಂಬೈ, ದೆಹಲಿ ತಂಡಗಳು ಖರೀದಿಸಲು ಆಸಕ್ತಿ ತೋರಿಸಿತ್ತು. ಕೋಲ್ಕತ್ತಾ ತಂಡ 10 ಕೋಟಿ ರೂ. ಬಿಡ್ ಮಾಡಿತ್ತು. ಕೊನೆಗೆ ಆರ್‍ಸಿಬಿ 12 ಕೋಟಿ ರೂ. ನೀಡಿ ಖರೀದಿ ಮಾಡಿದೆ.
Advertisement
ಆಸ್ಟ್ರೇಲಿಯಾದ ಮೈಕಲ್ ಸ್ಟಾರ್ಕ್ ಈ ಬಾರಿ ಐಪಿಎಲ್‍ನಿಂದ ಹೊರಗೆ ಉಳಿಯಲು ನಿರ್ಧರಿಸಿದ್ದರು. ಭಾನುವಾರ ಈ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಆರ್‍ಸಿಬಿ ವೇಗದ ಬೌಲರ್ ಕೊರತೆ ನೀಗಿಸಲು ಮಿಲ್ಸ್ ಅವರನ್ನು ಖರೀದಿಸಿದೆ. ಆರ್‍ಸಿಬಿ ಸ್ಟಾರ್ಕ್ ಅವರನ್ನು 5 ಕೋಟಿ ರೂ. ಬಿಡ್ ಮಾಡಿ ಖರೀದಿತ್ತು.
Advertisement
ಟೈಮಲ್ ಮಿಲ್ಸ್ ಖರೀದಿಸಿದ್ದು ಯಾಕೆ?
1992ರ ಆಗಸ್ಟ್ 12ರಂದು ಜನಿಸಿದ ಮಿಲ್ಸ್ 2016 ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಪಂದ್ಯವನ್ನು ಆಡಿದ್ದಾರೆ. ಎಡಗೈ ಬೌಲರ್, ಬಲಗೈ ಬ್ಯಾಟ್ಸ್ ಮನ್ ಆಗಿರುವ ಮಿಲ್ಸ್ ಇದೂವರೆಗೆ ಒಟ್ಟು 4 ಟಿ20 ಪಂದ್ಯ ಆಡಿದ್ದು, 3 ವಿಕೆಟ್ ಪಡೆದಿದ್ದಾರೆ. 32 ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 36.55 ಸರಾಸರಿಯಲ್ಲಿ 55 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಗಂಟೆಗೆ 145 ಕಿ.ಮೀ ವೇಗದಲ್ಲಿ ಮಿಲ್ಸ್ ಬೌಲಿಂಗ್ ಮಾಡುತ್ತಿರುವ ಕಾರಣ ಆರ್‍ಸಿಬಿ ದುಬಾರಿ ಮೊತ್ತವನ್ನು ನೀಡಿ ಖರೀದಿಸಿದೆ.
Advertisement
A canny left arm pacer with a lot of change ups and guile, let's welcome Tymal Mills to #RCB! #PlayBold #IPLAuction pic.twitter.com/JtncyqjJFs
— Royal Challengers (@RCBTweets) February 20, 2017
Advertisement
.@RCBTweets chairman Amrit Thomas speaks about @tmills15's selection #IPLauction pic.twitter.com/9ldggj9DHM
— IndianPremierLeague (@IPL) February 20, 2017
Fair to say @tmills15 just got a hell of a lot better looking!! So pleased for him. What a contract. Very happy at breakfast here???????????????????????????? pic.twitter.com/Q3OCDt16XI
— Luke Wright (@lukewright204) February 20, 2017