6 ಎಸೆತಗಳಲ್ಲಿ 6 ಸಿಕ್ಸ್ ಚಚ್ಚಿದ ಇಂಗ್ಲೆಂಡ್ ಬ್ಯಾಟ್ಸ್ ಮನ್

Public TV
1 Min Read
ross whiteley

ಲಂಡನ್: ಟಿ20 ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ಒಂದೇ ಓವರ್ ನಲ್ಲಿ ಆರ್ ಸಿಕ್ಸರ್ ಬಾರಿಸಿದ್ದು ನಿಮಗೆ ಗೊತ್ತೆ ಇದೆ. ಈಗ ಇಂಗ್ಲೆಂಡ್ ಬ್ಯಾಟ್ಸ್ ಮನ್ ಒಬ್ಬರು ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಸುದ್ದಿಯಾಗಿದ್ದಾರೆ.

ನ್ಯಾಟ್‍ವೆಸ್ಟ್ ಟಿ 20 ಬ್ಲಾಸ್ಟ್ ನಲ್ಲಿ ವೆರ್ಸೆಸ್ಟ್ ರ್ಶೈರ್ ಬ್ಯಾಟ್ಸ್ ಮನ್ ರಾಸ್ ವೈಟ್ಲಿ 6 ಸಿಕ್ಸ್ ಸಿಡಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಯಾರ್ಕ್ ಶೈರ್ 6 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತ್ತು. ಈ ರನ್ ಗುರಿಯನ್ನು ಬೆನ್ನಟ್ಟುವ ವೇಳೆ ರಾಸ್ ವೈಟ್ಲಿ ಈ ಸಾಧನೆ ಮಾಡಿದ್ದಾರೆ.

ಎಡಗೈ ಸ್ಪಿನ್ನರ್ ಕಾರ್ಲ್ ಕಾವರ್ ಅವರ ಎಲ್ಲ ಎಸೆತವನ್ನು ವೈಟ್ಲಿ ಸಿಕ್ಸರ್‍ಗೆ ಅಟ್ಟಿದ್ದರು. ವೈಟ್ಲಿ 26 ಎಸೆತಗಳಲ್ಲಿ 56 ರನ್ ಸಿಡಿಸಿದರೂ ವೆರ್ಸೆಸ್ಟ್ ರ್ಶೈರ್ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ 37 ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡಿದೆ.

ಪ್ರಥಮ ದರ್ಜೆ ಕ್ರಿಕಟ್ ನಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್‍ನ ಗ್ಯಾರಿ ಸೋಬರ್ಸ್ 6 ಸಿಕ್ಸ್ ಸಿಡಿಸಿದ್ದಾರೆ. 1968ರಲ್ಲಿ ನಾಟಿಂಗ್ ಹ್ಯಾಮ್ ಶೈರ್ ಪರ ಆಡುತ್ತಿದ್ದಾಗ ಕೌಂಟಿ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದರು.

1985ರಲ್ಲಿ ರವಿಶಾಸ್ತ್ರಿ ರಣಜಿ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಟಿ-20 ಕ್ರಿಕೆಟ್ ನಲ್ಲಿ ಯುವರಾಜ್ ಸಿಂಗ್ 6 ಸಿಕ್ಸ್ ಸಿಡಿಸಿದ್ದರು.

 

https://twitter.com/Cob_Adder/status/889379066180235264

 

https://youtu.be/wSwSaF2z124

Share This Article
Leave a Comment

Leave a Reply

Your email address will not be published. Required fields are marked *