ಲಂಡನ್: ಕಳೆದ ವರ್ಷ ನಡೆದ ಟಿ20 ವಿಶ್ವಕಪ್ (T20 WorldCup) ಟೂರ್ನಿಯ ಪ್ಲೇ ಆಫ್ ಸುತ್ತಿನಲ್ಲಿ ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಅಲೆಕ್ಸ್ ಹೇಲ್ಸ್ (Alex Hales)ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
156 Matches????
5066 Runs ????
578 Fours ????
123 Sixes ????
T20 World Cup Winner ????
Thank you, Alex ????
Alex Hales has announced his retirement from international cricket. pic.twitter.com/xXOUmFjide
— England Cricket (@englandcricket) August 4, 2023
34 ವರ್ಷದ ಕ್ರಿಕೆಟಿಗ ಅಲೆಕ್ಸ್ ಹೇಲ್ಸ್ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ (England) ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ 156 ಪಂದ್ಯಗಳನ್ನಾಡಿರುವ ಹೇಲ್ಸ್ 5,066 ರನ್‌ಗಳನ್ನ ಪೂರೈಸಿದ್ದಾರೆ. ಇದರಲ್ಲಿ 7 ಶತಕಗಳು, 578 ಬೌಂಡರಿ ಹಾಗೂ 123 ಸಿಕ್ಸರ್ ಒಳಗೊಂಡಿದೆ. ಏಕದಿನ ಕ್ರಿಕೆಟ್‌ನಲ್ಲಿ 37.79 ಸರಾಸರಿಯಲ್ಲಿ 2,419 ರನ್, ಟಿ20 ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸಿದ್ದಾರೆ. ಇದನ್ನೂ ಓದಿ: ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್
Advertisement
Advertisement
2014ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್ ಎನಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನವೇ ನಿವೃತ್ತಿ ಘೋಷಣೆ ಮಾಡಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
Advertisement
Advertisement
2015-16ರ ಅವಧಿಯಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿರುವ ಹೇಲ್ಸ್ 27.28 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ 5 ಅರ್ಧಶತಕ ಗಳಿಸಿದ್ದರು. 2016-17ರಿಂದ ರೆಡ್‌ಬಾಲ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು.
ಕಳೆದ ವರ್ಷ ಟಿ20 ವಿಶ್ವಕಪ್ ಪ್ಲೇ ಆಫ್ ಸುತ್ತಿನಲ್ಲಿ ಟೀಂ ಇಂಡಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಜೋಸ್ ಬಟ್ಲರ್ ಜೊತೆಗೂಡಿದ ಅಲೆಕ್ಸ್ ಹೇಲ್ಸ್ 86 ರನ್ (47 ಎಸೆತ, 4 ಬೌಂಡರಿ, 7 ಸಿಕ್ಸರ್) ಚಚ್ಚಿ ಇಂಗ್ಲೆಂಡ್‌ಗೆ 10 ವಿಕೆಟ್‌ಗಳ ಜಯವನ್ನು ತಂದುಕೊಟ್ಟಿದ್ದರು. ಇದನ್ನೂ ಓದಿ: IND vs WI T20: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಹಾರ್ದಿಕ್ ಪಡೆ – ವಿಂಡೀಸ್ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದೆಲ್ಲಿ?
Web Stories