Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಗಿಲ್‌ ದ್ವಿಶತಕಕ್ಕೆ ದಾಖಲೆಗಳು ಛಿದ್ರ – 510 ರನ್‌ ಹಿನ್ನಡೆಯಲ್ಲಿ ಇಂಗ್ಲೆಂಡ್‌

Public TV
Last updated: July 3, 2025 11:48 pm
Public TV
Share
3 Min Read
Shubman Gil
SHARE

ಎಜ್ಬಾಸ್ಟನ್‌: ನಾಯಕ ಶುಭಮನ್‌ ಗಿಲ್‌ (Shubman Gill) ಅವರ ದಾಖಲೆಯ ದ್ವಿಶತಕದ ನೆರವಿನಿಂದ ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯ ಎರಡನೇ ದಿನ ಭಾರತ (Team India) ಮೇಲುಗೈ ಸಾಧಿಸಿದೆ. ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 77 ರನ್‌ ಗಳಿಸಿದ್ದು 510 ರನ್‌ಗಳ ಹಿನ್ನಡೆಯಲ್ಲಿದೆ.

ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ ಬೆನ್ ಡಕೆಟ್‌ ಮತ್ತು ಓಲಿ ಪೋಪ್ ಶೂನ್ಯಕ್ಕೆ ಔಟಾದರು. ಆಕಾಶ್‌ ದೀಪ್‌ ಅವರು ಸತತ ಎರಡು ಎಸೆತಗಳಲ್ಲಿ ಇಬ್ಬರನ್ನು ಔಟ್‌ ಮಾಡಿದರು.

19 ರನ್‌ ಗಳಿಸಿದ್ದ ಜ್ಯಾಕ್ ಕ್ರಾಲಿ ಔಟಾದಾಗ ಇಂಗ್ಲೆಂಡ್‌ 3 ವಿಕೆಟ್‌ ನಷ್ಟಕ್ಕೆ 25 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಜೊತೆಯಾದ ಜೋ ರೂಟ್‌ ಮತ್ತು ಹ್ಯಾರಿ ಬ್ರೂಕ್‌ ಮುರಿಯದ 4ನೇ ವಿಕೆಟಿಗೆ 81 ಎಸೆತಗಳಲ್ಲಿ 52 ರನ್‌ ಜೊತೆಯಾಟವಾಡಿ ತಂಡವನ್ನು ಮೇಲಕ್ಕೆ ಎತ್ತಿದರು. ಜೋ ರೂಟ್‌ ಔಟಾಗದೇ 18 ರನ್‌, ಹ್ಯಾರಿ ಬ್ರೂಕ್‌ ಔಟಾಗದೇ 30 ರನ್‌ ಹೊಡೆದು ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Team India Test Cricket

ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ಭಾರತ ಇಂದು ನಿನ್ನೆಯ ಮೊತ್ತಕ್ಕೆ 277 ರನ್‌ ಸೇರಿಸಿ ಅಂತಿಮವಾಗಿ 151 ಓವರ್‌ಗಳಲ್ಲಿ  587 ರನ್‌ಗಳಿಗೆ ಸರ್ವಪತನ ಕಂಡಿತು. 114 ರನ್‌ ಗಳಿಸಿದ್ದ ಶುಭಮನ್‌ ಗಿಲ್‌ ಇಂದು 269 ರನ್‌(387 ಎಸೆತ, 30 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದರೆ 41 ರನ್‌ ಗಳಿಸಿದ್ದ ರವೀಂದ್ರ ಜಡೇಜಾ 89 ರನ್‌(137 ಎಸೆತ, 10 ಬೌಂಡರಿ, 1 ಸಿಕ್ಸ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇವರಿಬ್ಬರು 6ನೇ ವಿಕೆಟಿಗೆ 279 ಎಸೆತಗಳಲ್ಲಿ 203 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 400 ರನ್‌ಗಳ ಗಡಿ ದಾಟಿಸಿದರು. ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್‌ ಗಿಲ್‌ ಚೊಚ್ಚಲ ದ್ವಿಶತಕ – ಗವಾಸ್ಕರ್‌, ಕೊಹ್ಲಿ ಸೇರಿ ಹಲವು ದಿಗ್ಗಜರ ದಾಖಲೆ ಪುಡಿ ಪುಡಿ

ನಂತರ ವಾಷಿಂಗ್ಟನ್‌ ಸುಂದರ್‌ 42 ರನ್‌(103 ಎಸೆತ, 3 ಬೌಂಡರಿ, 1 ಸಿಕ್ಸ್‌) ಬಾರಿಸಿ ವಿಕೆಟ್‌ ಒಪ್ಪಿಸಿದರು. ಗಿಲ್‌ ಮತ್ತು ಸುಂದರ್‌ 189 ಎಸೆತಗಳಲ್ಲಿ 144 ರನ್‌ ಜೊತೆಯಾಟವಾಡಿದರು. ಅಂತಿಮವಾಗಿ ಗಿಲ್‌ ತಂಡದ ಮೊತ್ತ 574 ರನ್‌ ಗಳಿಸಿದ್ದಾಗ 8ನೇಯವರಾಗಿ ವಿಕೆಟ್‌ ಒಪ್ಪಿಸಿದರು. ಇಂಗ್ಲೆಂಡ್‌ ಪರ ಶೋಯೆಬ್‌ ಬಷೀರ್‌ 3 ವಿಕೆಟ್‌ ಕಿತ್ತರೆ ಕ್ರಿಸ್‌ ವೋಕ್ಸ್‌ ಮತ್ತು ಜೋಶ್‌ ಟಂಗ್‌ ತಲಾ 2 ವಿಕೆಟ್‌ ಕಿತ್ತರು.

Top Performer: Shubman Gill 👑
A scintillating 269 that had class, composure & captaincy written all over it! 💯🔥
Leading from the front? He redefined it at Edgbaston. 🇮🇳#ENGvIND 👉 2nd TEST, Day 2 | LIVE NOW on JioHotstar pic.twitter.com/SyVCthEsC0

— Star Sports (@StarSportsIndia) July 3, 2025

ಗಿಲ್‌ ದಾಖಲೆಗಳು
ಶುಭಮನ್ ಗಿಲ್ ಗಳಿಸಿದ 269 ರನ್‌ ಭಾರತೀಯ ನಾಯಕನೊಬ್ಬ ಟೆಸ್ಟ್‌ನಲ್ಲಿ ಗಳಿಸಿದ ಅತ್ಯಧಿಕ ರನ್‌ ಆಗಿದೆ. 2019 ರಲ್ಲಿ ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಗಳಿಸಿದ ಅಜೇಯ 254 ರನ್‌ ಇಲ್ಲಿಯವರೆಗೆ ನಾಯಕನೊಬ್ಬ ಅತ್ಯದಿಕ ರನ್‌ ಆಗಿತ್ತು.

ಏಷ್ಯಾದ ಹೊರಗೆ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ರನ್‌ಗಳಾಗಿವೆ. ಈ ಹಿಂದೆ 2004 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್‌ ತೆಂಡೂಲ್ಕರ್‌ ಅಜೇಯ 241 ರನ್‌ ಹೊಡೆದಿದ್ದರು.

KING did it in 2018, PRINCE repeated it in 2025! 👑

Things we love to see… 💙#ENGvIND 👉 2nd TEST, Day 2 | LIVE NOW on JioHotstar ➡ https://t.co/hiGDPrqT1p pic.twitter.com/5gqY1HDW0N

— Star Sports (@StarSportsIndia) July 3, 2025

ಇಂಗ್ಲೆಂಡ್‌ನಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಧಿಕ ಟೆಸ್ಟ್ ಸ್ಕೋರ್.

2004 ರಲ್ಲಿ ಪಾಕಿಸ್ತಾನ ಪ್ರವಾಸದಲ್ಲಿ ವೀರೇಂದ್ರ ಸೆಹ್ವಾಗ್ ಅವರ 309 ಮತ್ತು ರಾವಲ್ಪಿಂಡಿಯಲ್ಲಿ ರಾಹುಲ್ ದ್ರಾವಿಡ್ ಅವರ 270 ರನ್‌ಗಳ ನಂತರ ವಿದೇಶಿ ನೆಲದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಮೂರನೇ ಅತ್ಯಧಿಕ ಸ್ಕೋರ್ ಆಗಿದೆ.

ಗಿಲ್ ಅವರ 269 ರನ್‌ ಟೆಸ್ಟ್‌ನಲ್ಲಿ ಭಾರತದ ಏಳನೇ ಅತ್ಯಧಿಕ ಸ್ಕೋರ್ ಆಗಿದೆ.

TAGGED:cricketenglandShubman GillsportsTeam indiaಇಂಗ್ಲೆಂಡ್ಟೀಂ ಇಂಡಿಯಾಭಾರತಶುಭಮನ್ ಗಿಲ್
Share This Article
Facebook Whatsapp Whatsapp Telegram

You Might Also Like

Neeraj Chopra 1
Bengaluru City

ಬೆಂಗಳೂರು | `ಎನ್‌ಸಿ ಕ್ಲಾಸಿಕ್‌’ನಲ್ಲಿ ನೀರಜ್‌ ಚೋಪ್ರಾಗೆ ಪ್ರಥಮ ಸ್ಥಾನ

Public TV
By Public TV
12 minutes ago
Shivamogga
Bengaluru City

ಶಿವಮೊಗ್ಗ | ರಾಗಿಗುಡ್ಡದಲ್ಲಿ ಅನ್ಯಕೋಮಿನ ಯುವಕರ ದುಷ್ಕೃತ್ಯ – ಗಣಪತಿ ವಿಗ್ರಹ, ನಾಗರ ಕಲ್ಲಿಗೆ ಅಪಮಾನ ಆರೋಪ

Public TV
By Public TV
34 minutes ago
Ramesh Jarkiholi
Belgaum

ಜಾತ್ರೆಯಲ್ಲಿ ಗುಂಡು ಹಾರಿಸಿದ ಪ್ರಕರಣ – ರಮೇಶ್‌ ಜಾರಕಿಹೊಳಿ ಪುತ್ರನ ವಿರುದ್ಧ ಎಫ್‌ಐಆರ್‌

Public TV
By Public TV
1 hour ago
Anekal Marriage
Bengaluru Rural

ಬೆಂಗಳೂರು | ಅಪ್ರಾಪ್ತೆಯನ್ನು ಕರೆದೊಯ್ದು ಮದುವೆಗೆ ಯತ್ನ – ಆರೋಪಿ ಅರೆಸ್ಟ್

Public TV
By Public TV
1 hour ago
Eshwar Khandre 2
Districts

ರಾಜ್ಯದಾದ್ಯಂತ 3 ಕೋಟಿ ಸಸಿ ನೆಡಲಾಗುವುದು: ಈಶ್ವರ್‌ ಖಂಡ್ರೆ

Public TV
By Public TV
2 hours ago
Team India
Cricket

ಗಿಲ್‌ ಅಮೋಘ ಶತಕ, ಪಂತ್‌, ಜಡ್ಡು ಫಿಫ್ಟಿ – ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್‌ ಗುರಿ ನೀಡಿದ ʻಯುವ ಭಾರತʼ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?