ಎಜ್ಬಾಸ್ಟನ್: ಆಕಾಶ್ ದೀಪ್ (Akash Deep) ಅವರ ಮಾರಕ ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ (Team India) 336 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡತಾಗಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 608 ರನ್‌ಗಳ ಗುರಿಯನ್ನು ಪಡೆದ ಇಂಗ್ಲೆಂಡ್ (England) 5ನೇ ದಿನದಾಟದಲ್ಲಿ ಒಟ್ಟು 68.1 ಓವರ್‌ಗಳಲ್ಲಿ 271 ರನ್‌ಗಳಿಸಿ ಸರ್ವಪತನ ಕಂಡಿತು. 336 ರನ್‌ಗಳ ಜಯ ಭಾರತದ ಹೊರಗಡೆ ಟೀಂ ಇಂಡಿಯಾಗೆ ಸಿಕ್ಕಿದ ದೊಡ್ಡ ಜಯವಾಗಿದ್ದು ಶುಭಮನ್ ನಾಯಕತ್ವದ ಎರಡನೇ ಪಂದ್ಯದಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಇದನ್ನೂ ಓದಿ: ಡಿಕ್ಲೇರ್ ವೇಳೆ ಎಡವಟ್ಟು – ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗ್ತಾರಾ ಗಿಲ್?
One wicket leads to another! 🙌🏻
Akash Deep is on 🔥 as he traps #HarryBrook in front & half of the English side is back in the hut! 👊🏻
1-1 on the cards? 𝙮𝙚𝙝 𝙨𝙚𝙚𝙠𝙝𝙣𝙚 𝙣𝙖𝙝𝙞 𝙨𝙚𝙚𝙠𝙝𝙖𝙣𝙚 𝙖𝙖𝙮𝙚 𝙝𝙖𝙞! 👊🏻😎#ENGvIND 👉 2nd TEST, Day 5 | LIVE NOW on #JioHotstar… pic.twitter.com/FdMUwYxChf
— Star Sports (@StarSportsIndia) July 6, 2025
4ನೇ ದಿನದ ಅಂತ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 72 ರನ್‌ಗಳಿಸಿದ್ದ ಇಂಗ್ಲೆಂಡ್ ಇಂದು 7 ವಿಕೆಟ್ ಸಹಾಯದಿಂದ ಒಟ್ಟು 199 ರನ್ ಗಳಿಸಿತು. ಇಂದು ಬೆನ್ ಸ್ಟೋಕ್ ಮತ್ತು ಜೇಮಿ ಸ್ಮಿತ್ 115 ಎಸೆತಗಳಲ್ಲಿ 70 ರನ್ ಜೊತೆಯಾಟವಾಡಿದರು.
ಬೆನ್‌ಸ್ಟೋಕ್ 33 ರನ್ ಗಳಿಸಿ ಔಟಾದರೆ ಸ್ಮಿತ್ 88 ರನ್(99 ಎಸೆತ, 9 ಬೌಂಡರಿ, 4 ಸಿಕ್ಸ್) ಹೊಡೆದು ಔಟಾದರು. ಹ್ಯಾರಿ ಬ್ರೂಕ್ 23 ರನ್, ಕ್ರಿಸ್ ವೋಕ್ಸ್ 7 ರನ್, ಜೋಶ್ ಟಂಗ್ 2 ರನ್
ಭಾರತದ ಪರ ಆಕಾಶ್ ದೀಪ್ ಮೊದಲ ಬಾರಿಗೆ 6 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.
𝙅𝘼𝘿𝙀𝙅𝘼 𝙎𝙋𝙀𝘾𝙄𝘼𝙇 🤩#Jadeja traps #Tongue with a clever delivery, and #Siraj’s athletic catch seals the deal 💪#ENGvIND 👉 2nd TEST, Day 5 | LIVE NOW on #JioHotstar ➡ https://t.co/pmTofIWkZ9 pic.twitter.com/VqAVU0ZIb0
— Star Sports (@StarSportsIndia) July 6, 2025
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ -587/10
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ -407/10
ಭಾರತ ಎರಡನೇ ಇನ್ನಿಂಗ್ಸ್ – 427/6 ಡಿಕ್ಲೇರ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ – 271/10