England vs India 1st Test – ಭಾರತಕ್ಕೆ 2 ಬಾರಿ 5 ರನ್‌!

yashasvi jaiswal

ಲೀಡ್ಸ್‌: ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ (Team India) ಎರಡು ಬಾರಿ 5 ರನ್‌ (Penalty Runs) ಬಂದಿದೆ.

ಬ್ರೈಡನ್ ಕಾರ್ಸೆ ಅವರು ಎಸೆದ ಇನ್ನಿಂಗ್ಸ್‌ 27ನೇ ಓವರಿನ 4 ಎಸೆತದಲ್ಲಿ ಸ್ರೈಕ್‌ನಲ್ಲಿ ಗಿಲ್‌ (Shubman Gill ) ಇದ್ದರು. 1 ರನ್‌ ಓಡುವಾಗ ಓವರ್‌ ಥ್ರೋನಿಂದ ಬಾಲ್‌ ಬೌಂಡರಿಗೆ ಹೋದ ಕಾರಣ ಭಾರತ ತಂಡಕ್ಕೆ ಒಟ್ಟು 5 ರನ್‌ ಬಂದಿತ್ತು.

ಬೆನ್‌ ಸ್ಟೋಕ್ಸ್‌ ಎಸೆದ 51ನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್‌ (Yashasvi Jaiswal) ಸ್ಟ್ರೈಕ್‌ನಲ್ಲಿ ಇದ್ದರು. ಸ್ಟೋಕ್ಸ್‌ ಎಸೆದ ಚೆಂಡು ವಿಕೆಟ್‌ ಕೀಪರ್‌ ಹಿಂದೆ ಇದ್ದ ಹೆಲ್ಮೆಟ್‌ಗೆ ಬಡಿಯಿತು. ಹೆಲ್ಮೆಟ್‌ (Helmet) ಬಡಿದ ಕಾರಣ ಮತ್ತೆ ಭಾರತಕ್ಕೆ 5 ರನ್‌ ಪೆನಾಲ್ಟಿಯಾಗಿ ಸಿಕ್ಕಿತು. ಇದನ್ನೂ ಓದಿ: ಆರ್‌ಸಿಬಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದೆ – ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಬಾಂಬ್

Shubman Gill

ಐಸಿಸಿ ನಿಯಮ ಏನು ಹೇಳುತ್ತದೆ?
ಫೀಲ್ಡರ್‌ಗಳು ತಮ್ಮ ಹೆಲ್ಮೆಟ್‌ಗಳನ್ನು ಧರಿಸದಿದ್ದಾಗ, ಅವರು ಅವುಗಳನ್ನು ವಿಕೆಟ್ ಕೀಪರ್‌ನ ಹಿಂದೆ ಮತ್ತು ಎರಡೂ ತುದಿಗಳಲ್ಲಿರುವ ಸ್ಟಂಪ್‌ಗಳಿಗೆ ಅನುಗುಣವಾಗಿ ಮಾತ್ರ ನೆಲದ ಮೇಲೆ ಇಡಬಹುದು. ಅವುಗಳನ್ನು ಮೈದಾನದ ಬೇರೆ ಕಡೆ ಇಡಲು ಅನುಮತಿ ಇಲ್ಲ.

ಹೆಲ್ಮೆಟಿಗೆ ಚೆಂಡು ಬಡಿದ ತಕ್ಷಣವೇ ಅದು ಡೆಡ್‌ ಆಗುತ್ತದೆ. ಒಂದು ವೇಳೆ ಅದು ಅದು ನೋ ಬಾಲ್ ಅಥವಾ ವೈಡ್ ಆಗಿದ್ದರೆ ಅಂಪೈರ್ ಎಂದಿನಂತೆ ಘೋಷಿಸುತ್ತಾರೆ ಜೊತೆಗೆ ಬ್ಯಾಟಿಂಗ್ ತಂಡಕ್ಕೆ 5 ಪೆನಾಲ್ಟಿ ರನ್‌ಗಳನ್ನು ಸಹ ನೀಡಲಾಗುತ್ತದೆ.