ಲಂಡನ್: ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಟಕ್ಕೆ ಮಂಕಾದ ಆಂಗ್ಲರು ಮೊದಲ ಟಿ20 ಪಂದ್ಯದಲ್ಲಿ ತವರಿನಲ್ಲಿ ಸೋಲು ಕಂಡಿದ್ದಾರೆ. ಇತ್ತ ಟೀಂ ಇಂಡಿಯಾ 50 ರನ್‍ಗಳ ಅಂತರದ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಕಂಡಿದೆ.
Advertisement
ಟೀಂ ಇಂಡಿಯಾ ಪರ ಪಾಂಡ್ಯ ಬ್ಯಾಟಿಂಗ್‍ನಲ್ಲಿ 51 ರನ್ (33 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಬೌಲಿಂಗ್‍ನಲ್ಲಿ 4 ಓವರ್ ಎಸೆದು 33 ರನ್ ನೀಡಿ 4 ವಿಕೆಟ್ ಕಿತ್ತು ಆಂಗ್ಲರ ಹೆಡೆಮುರಿ ಕಟ್ಟಿದರು. ಭಾರತ ನೀಡಿದ 199 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿ 148 ರನ್‍ಗಳಿಗೆ ಸರ್ವಪತನ ಕಂಡು ಸೋಲುಂಡಿತು. ಇತ್ತ ನಂಬರ್ ಗೇಮ್‍ನಲ್ಲಿ ಮಿಂಚಿದ ಪಾಂಡ್ಯ 51 ರನ್ ಸಿಡಿಸಿದರೆ, ಭಾರತಕ್ಕೆ 50 ರನ್‍ಗಳ ಜಯ ತಂದುಕೊಟ್ಟರು. ಇದನ್ನೂ ಓದಿ: ಇನ್ನಷ್ಟು ಕಾಲ ಕ್ರಿಕೆಟ್ ಆಡಿ ಎಂದು ಧೋನಿಗೆ ಮನವಿ ಮಾಡಿಕೊಂಡ ಪಾಕ್ ಕ್ರಿಕೆಟರ್
Advertisement
Advertisement
ಈ ಮೂಲಕ ಪಾಂಡ್ಯ ಟಿ20 ಕ್ರಿಕೆಟ್‍ನಲ್ಲಿ 50+ ರನ್ ಮತ್ತು 4 ವಿಕೆಟ್ ಪಡೆದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಗ್ಲೆಂಡ್ ವಿರುದ್ಧ 3 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಪಡೆದುಕೊಂಡಿದೆ.
Advertisement
199 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‍ಗೆ ಪಾಂಡ್ಯ ಆರಂಭದಿಂದಲೇ ಕಾಡತೊಡಗಿದರು. ಆರಂಭಿಕ ಆಟಗಾರ ಜೇಸನ್ ರಾಯ್ 4 ರನ್ (16 ಎಸೆತ) ಗಳಿಸಿ ಪಾಂಡ್ಯಗೆ ಮೊದಲ ವಿಕೆಟ್ ರೂಪದಲ್ಲಿ ಹೊರ ನಡೆದರೆ, ನಾಯಕ ಜೋಸ್ ಬಟ್ಲರ್ ಶೂನ್ಯ ಸುತ್ತಿ ಹೊರನಡೆದರು. ಡೇವಿಡ್ ಮಲಾನ್ 21 ರನ್ (14 ಎಸೆತ, 4 ಬೌಂಡರಿ) ಸಿಡಿಸಿ ಸಿಡಿಯುವ ಸೂಚನೆ ನೀಡಿದಾಗ ಮತ್ತೆ ದಾಳಿಗಿಳಿದ ಪಾಂಡ್ಯ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಬ್ರೂಕ್ 28 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್), ಮೊಯಿನ್ ಅಲಿ 36 ರನ್ (4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಇಂಗ್ಲೆಂಡ್ ಸೋಲು ಖಚಿತಗೊಂಡಿತು. ಅಂತಿಮವಾಗಿ ಕ್ರಿಸ್ ಜೋರ್ಡಾನ್ ಅಜೇಯ 26 ರನ್ (17 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡದ ಸೋಲಿನ ಅಂತರವನ್ನು ಕುಗ್ಗಿಸಿದರು. ಅಂತಿಮವಾಗಿ 19. 3 ಓವರ್‌ಗಳಲ್ಲಿ ಇಂಗ್ಲೆಂಡ್ 148 ರನ್‍ಗಳಿಗೆ ಆಲೌಟ್ ಆಯಿತು. ಭಾರತ ಪರ ಪಾಂಡ್ಯ 4 ವಿಕೆಟ್, ಚಹಲ್ ಮತ್ತು ಹರ್ಷದೀಪ್ ಸಿಂಗ್ ತಲಾ 2 ವಿಕೆಟ್ ಹಂಚಿಕೊಂಡರೆ, ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಓಂ ಹೆಲಿಕಾಪ್ಟರಾಯ ನಮಃ ಎಂದು ಧೋನಿಗೆ ವಿಶ್ ಮಾಡಿದ ಸೆಹ್ವಾಗ್
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಪರ ರೋಹಿತ್ ಶರ್ಮಾ 24 ರನ್ (14 ಎಸೆತ, 5 ಬೌಂಡರಿ) ಸಿಡಿಸಿ ಉತ್ತಮ ಆರಂಭ ನೀಡಿದರು. ಬಳಿಕ ದೀಪಕ್ ಹೂಡಾ 33 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 39 ರನ್ (19 ಎಸೆತ, 4 ಬೌಂಡರಿ, 2 ಸಿಕ್ಸ್) ಚಚ್ಚಿ ಮಧ್ಯಮಕ್ರಮಾಂಕದಲ್ಲಿ ರನ್ ಹೆಚ್ಚಿಸಿದರು. ಈ ಜೋಡಿ 43 ರನ್ (23 ಎಸೆತ) ಗಳ ಜೊತೆಯಾಟವಾಡಿ ಬೇರ್ಪಟ್ಟ ಬಳಿಕ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಆರಂಭಿಸಿದರು. ಇಂಗ್ಲೆಂಡ್ ಬೌಲರ್‌ಗಳಿಗೆ ಬೌಂಡರಿ ರುಚಿ ತೋರಿಸುತ್ತ ಸಾಗಿದ ಪಾಂಡ್ಯ 51 ರನ್ (33 ಎಸೆತ, 6 ಬೌಂಡರಿ, 1 ಸಿಕ್ಸ್) ಚಚ್ಚಿ ತಂಡದ ಮೊತ್ತವನ್ನು 180ರ ಗಡಿದಾಟಿಸಿ ಔಟ್ ಆದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.