– 5 ವಿಕೆಟ್ ಕಬಳಿಸಿದ ಓಲ್ಲಿ ರಾಬಿನ್ಸನ್
ಲೀಡ್ಸ್: ಭಾರತದ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 76 ರನ್ ಗಳಿಂದ ಇಂಗ್ಲೆಂಡ್ ಜಯಗಳಿಸಿದೆ. ಇನ್ನು ಒಂದು ದಿನ ಬಾಕಿ ಇರುವಾಗಲೇ ಇಂಗ್ಲೆಂಡ್ ಗೆಲುವಿನ ನಗೆ ಬೀರಿದೆ.
Advertisement
ಟೀಂ ಇಂಡಿಯಾ ನಾಲ್ಕನೇ ದಿನ ಎರಡು ವಿಕೆಟ್ ಕಳೆದುಕೊಂಡು 215 ರನ್ ಗಳಿಂದ ಆಟ ಆರಂಭಿಸಿತ್ತು. 278 ರನ್ ಕಲೆ ಹಾಕುವ ವೇಳೆಗೆ ಟೀಂ ಇಂಡಿಯಾ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಗಿ ಹೀನಾಯ ಸೋಲು ಕಂಡಿತು.
Advertisement
Advertisement
ಇಂದು ಉಳಿದ 8 ವಿಕೆಟ್ ಗಳ ಸಹಾಯದಿಂದ ಭಾರತ ಗಳಿಸಿದ್ದು ಕೇವಲ 63 ರನ್. ಭಾರತದ ಪರವಾಗಿ ಪೂಜಾರ ನಿನ್ನೆಯ ಮೊತ್ತವಾದ 91 ರನ್ ಗಳಿಗೆ ಔಟ್ ಆದರೆ ವಿರಾಟ್ ಕೊಹ್ಲಿ 55 ರನ್, ರವೀಂದ್ರ ಜಡೇಜಾ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ನಿಮ್ಮ ಅಹಂಕಾರವನ್ನು ಮೊದಲು ಹದ್ದುಬಸ್ತಿನಲ್ಲಿಡಿ ಕೊಹ್ಲಿ ವಿರುದ್ಧ ಮನಿಂದರ್ ಸಿಂಗ್ ಕಿಡಿ
Advertisement
A second five-wicket haul in only his fourth Test – how good is Ollie Robinson! ????#WTC23 | #ENGvIND | https://t.co/qmnhRc14r1 pic.twitter.com/GlO1ekUBVl
— ICC (@ICC) August 28, 2021
ಇಂಗ್ಲೆಂಡ್ ಆಟಗಾರ ಓಲ್ಲಿ ರಾಬಿನ್ಸನ್ ಐದು ವಿಕೆಟ್ ಪಡೆದು ಟೀಂ ಇಂಡಿಯಾ ಆಟಗಾರರನ್ನು ಕಟ್ಟಿಹಾಕಿದರು. ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಇಶಾಂತ್ ಶರ್ಮಾ ವಿಕೆಟ್ ಪಡೆದು ಭಾರತಕ್ಕೆ ಆಘಾತ ನೀಡಿದರು. ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!
The winning moment ????#WTC23 | #ENGvIND | https://t.co/qmnhRc14r1 pic.twitter.com/t3aeyihDjT
— ICC (@ICC) August 28, 2021
ಕ್ರೇಗ್ ಓವರ್ಟನ್ 3 ಮತ್ತು ಜೇಮ್ಸ್ ಆಂಡರ್ಸನ್ ಹಾಗೂ ಮೊಯಿನ್ ಅಲಿ ತಲಾ ಒಂದು ವಿಕೆಟ್ ಪಡೆದರು. ಮೊದಲ ಪಂದ್ಯ ಡ್ರಾ ಆಗಿದ್ದರೆ ಎರಡನೇ ಪಂದ್ಯವನ್ನು ಭಾರತ 151 ರನ್ ಗಳಿಂದ ಗೆದ್ದುಕೊಂಡಿತ್ತು. ನಾಲ್ಕನೆಯ ಪಂದ್ಯ ಸೆ.2 ರಿಂದ ಅರಂಭಗೊಳ್ಳಲಿದೆ. ಇದನ್ನೂ ಓದಿ: ಶತಕ ಸಿಡಿಸದೇ 50 ಇನ್ನಿಂಗ್ಸ್ ಕಳೆದ ವಿರಾಟ್ ಬ್ಯಾಟ್
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 78/10
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 432/10
ಭಾರತ ಎರಡನೇ ಇನ್ನಿಂಗ್ಸ್ 278/20