ಚಿಕ್ಕಮಗಳೂರು: ಇಂಗ್ಲೆಂಡ್‍ನಿಂದ (England) ಸೈಕಲ್‍ನಲ್ಲೇ 25 ದೇಶಗಳನ್ನು ಸುತ್ತಿ ಇದೀಗ ಭಾರತಕ್ಕೆ ಬಂದಿರುವ ಪ್ರವಾಸಿಗ ಹೆರಾಲ್ಡ್ ಎಂಬವರಿಗೆ ಮಲೆನಾಡಿಗರು ಅಯೋಧ್ಯೆ (Ayodhya) ರಾಮಂದಿರದ (Ram Mandir) ಮಂತ್ರಾಕ್ಷತೆಯನ್ನು ನೀಡಿದ್ದಾರೆ.
ಕೈಯಲ್ಲಿ ಓಂ ಎಂದು ಹಚ್ಚೆ ಹಾಕಿಸಿಕೊಂಡಿರುವ ಹೆರಾಲ್ಡ್, ಹಿಂದೂ ಧರ್ಮದ ಬಗ್ಗೆ ಅಪಾರ ಗೌರವ ಹಾಗೂ ಅಭಿಮಾನ ಹೊಂದಿದ್ದಾರೆ. ಅವರಿಗೆ ಗ್ರಾಮದ ವಾಸೇಗೌಡ ಹಾಗೂ ಸಂಪತ್ ಎಂಬವರು ಮಂತ್ರಾಕ್ಷತೆ ನೀಡಿದ್ದಾರೆ. ಬಳಿಕ ಹಿಂದೂ ಧರ್ಮ, ಭಗವದ್ಗೀತೆ, ಅಯೋಧ್ಯೆ ಹಾಗೂ ಶ್ರೀರಾಮನ ಬಗ್ಗೆ ಹೆರಾಲ್ಡ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೆರಾಲ್ಡ್‍ಗೆ ಆತಿಥ್ಯ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ
Advertisement
Advertisement
ಮಂತ್ರಾಕ್ಷತೆಯನ್ನು ಪಡೆದ ಹೆರಾಲ್ಡ್, ಅದನ್ನು ಗೌರವದಿಂದ ಇಂಗ್ಲೆಂಡ್‍ಗೆ ಕೊಂಡೊಯ್ಯುತ್ತೇನೆ ಎಂದು ಹೇಳಿದ್ದಾರೆ.
Advertisement
Advertisement
ಭಾರತಕ್ಕೆ 9ನೇ ಬಾರಿ ಭೇಟಿ ನೀಡಿರುವ ಹೆರಾಲ್ಡ್, ಕೊಪ್ಪ ತಾಲೂಕಿನ ಮೆಣಸಿನಹಾಡ್ಯದಲ್ಲಿ ಕ್ಯಾಂಪ್ ಹಾಕಿ ಉಳಿದುಕೊಂಡಿದ್ದಾರೆ. ಇದನ್ನೂ ಓದಿ: 8 ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ