ಟೀಕೆಗಳಿಗೆ ತಕ್ಕ ಉತ್ತರ – 1,338 ದಿನಗಳ ಬಳಿಕ ತವರಿನಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಪಾಕ್‌

Public TV
3 Min Read
Pakistan 1

ಮುಲ್ತಾನ್‌: ಕಳಪೆ ಬೌಲಿಂಗ್‌, ಫೀಲ್ಡಿಂಗ್‌ ಪ್ರದರ್ಶನದಿಂದಾಗಿ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ (England) ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ಕ್ರಿಕೆಟ್‌ ತಂಡ (Pakistan Cricket Team) 2ನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದೆ. ಇಂಗ್ಲೆಂಡ್‌ ವಿರುದ್ಧ 152 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ತನ್ನ ವಿರುದ್ಧ ಟೀಕಾಕಾರರಿಗೆ ತಿರುಗೇಟು ನೀಡಿದೆ.

ಈ ಮೂಲಕ ಇಂಗ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡುತ್ತಿರುವ (Test Series) ಪಾಕ್‌ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಜೊತೆಗೆ 1,338 ದಿನಗಳ ಸುದೀರ್ಘ ಕಾಯುವಿಕೆಯ ಬಳಿಕ ತವರಿನಲ್ಲಿ ಟೆಸ್ಟ್‌ ಗೆಲುವಿನ ಬರ ನೀಗಿಸಿಕೊಂಡಿದೆ. ಅನುಭವಿ ಆಟಗಾರರನ್ನು ಏಕಾಏಕಿ ತಂಡದಿಂದ ಹೊರಗಿಟ್ಟಿರುವುದು ತಂಡದ ಮೇಲೆ ಮಾತ್ರವಲ್ಲದೇ ಪಾಕಿಸ್ತಾನದ ಕ್ರಿಕೆಟ್ ಮೇಲೆ ಪರಿಣಾಮ ಬೀರಲಿದೆ ಎಂದು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಆದರೆ ಯಾವುದಕ್ಕೂ ಸೊಪ್ಪು ಹಾಕದ ಪಿಸಿಬಿ ಹೊಸ ಆಟಗಾರರ ಮೇಲೆ ಭರವಸೆ ಇಟ್ಟಿತ್ತು. ಅದರಂತೆ ಹೊಸದಾಗಿ ಆಯ್ಕೆಯಾದ ಆಟಗಾರರು ಮಂಡಳಿಯ ನಿರ್ಧಾರವನ್ನು ಎತ್ತಿ ಹಿಡಿದಿದ್ದಾರೆ.

ಸ್ಪಿನ್ನರ್ ಗಳ ಕೈಚಳಕ
ಪಾಕ್‌ ತಂಡದ ಸ್ಪಿನ್ನರ್‌ಗಳಾದ ಸಾಜಿದ್ ಖಾನ್ ಮತ್ತು ನೂಮನ್ ಅಲಿ ಅವರ ಕೈಚಳಕದಿಂದಾಗಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಪಂದ್ಯ ಗೆದ್ದು ಬೀಗಿದೆ. ಇದು ತಂಡದಲ್ಲಿ ಹೊಸ ಹುರುಪಿಗೆ ಕಾರಣವಾಗಿದೆ. ಇದನ್ನೂ ಓದಿ: ರಚಿನ್‌ ಅಮೋಘ ಶತಕ, ಇತಿಹಾಸ ನಿರ್ಮಿಸಿದ ಕಿವೀಸ್‌; ಭಾರತದ ವಿರುದ್ಧ 356 ರನ್‌ಗಳ ಭರ್ಜರಿ ಮುನ್ನಡೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕಮ್ರಾನ್ ಘುಲಾಮ್ ಅವರ ಅಮೋಘ ಶತಕದ (118 ರನ್‌, 224 ಎಸೆತ, 11 ಬೌಂಡರಿ, 1 ಸಿಕ್ಸರ್) ನೆರವಿನಿಂದ 366 ರನ್‌ ಕಲೆಹಾಕಿತ್ತು. ಬಾಬರ್‌ ಆಜಂ ಬದಲಿಗೆ ಕಣಕ್ಕಿಳಿದಿದ್ದ ಘುಲಾಮ್‌ ಚೊಚ್ಚಲ ಪ್ರಯತ್ನದಲ್ಲೇ ಶತಕ ಸಿಡಿಸಿ ಸೈ ಎನಿಸಿಕೊಂಡರು. ಇದರೊಂದಿಗೆ ಸೈಯಮ್ ಅಯೂಬ್ ಅಯೂಬ್ ಅರ್ಧಶತಕ ತಂಡಕ್ಕೆ ಮತ್ತಷ್ಟು ಬಲ ನೀಡಿತ್ತು. ಇನ್ನುಳಿದಂತೆ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್‌ ಪರ ಮೊಹಮ್ಮದ್ ರಿಜ್ವಾನ್‌ 41 ರನ್‌, ಸಲ್ಮಾಮ್ ಆಘಾ 41‌ ರನ್ , ಅಮೀರ್ ಜಮಾಲ್ 37 ರನ್‌ಗಳ ಕೊಡುಗೆ ನೀಡಿದರು.

Pakistan 2 1

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಪರ ಜಾಕ್‌ ಲೀಚ್‌ 4 ವಿಕೆಟ್‌ ಪಡೆದರೆ, ಬ್ರೈಡನ್ ಕಾರ್ಸ್ 3 ವಿಕೆಟ್‌, ಮ್ಯಾಥೀವ್‌ ಪಾಟ್ಸ್‌ 2 ವಿಕೆಟ್‌ ಹಾಗೂ ಶೋಯೆಬ್‌ ಬಶೀರ್‌ 1 ವಿಕೆಟ್‌ ಪಡೆದರು. ಇದನ್ನೂ ಓದಿ: ಟ್ರೋಫಿ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್‌ – ನೂತನ ಮುಖ್ಯಕೋಚ್‌ ಆಗಿ ಹೇಮಂಗ್‌ ಬದಾನಿ ನೇಮಕ

ಇನ್ನೂ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್‌ಗೆ ಪ್ರತ್ಯುತ್ತರವಾಗಿ ಬ್ಯಾಟ್‌ ಬೀಸಿದ ಇಂಗ್ಲೆಂಡ್‌ ಬೆನ್‌ ಡಕೆಟ್‌ ಶತಕದೊಂದಿಗೆ (114 ರನ್‌, 129 ಎಸೆತ, 16 ಬೌಂಡರಿ) 291 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಇನ್ನೂ 2ನೇ ಇನ್ನಿಂಗ್ಸ್‌ನಲ್ಲಿ 221 ರನ್‌ಗಳಿಗೆ ಆಲೌಟ್‌ ಆಯಿತು. ಪರಿಣಾಮ ಗೆಲ್ಲಲು 297 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ತಂಡ ಸ್ಪಿನ್ನರ್‌ಗಳ ದಾಳಿ ಎದುರಿಸಲಾಗದೇ ಕೇವಲ 144 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಬೆನ್ ಸ್ಟೋಕ್ಸ್ 37 ರನ್‌ ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳು ಬಹುಬೇಗನೆ ಪೆವಿಲಿಯನ್‌ ಪರೇಡ್‌ ನಡೆಸಿದರು.

ಮಿಂಚಿನ ನೂಮನ್‌:
ಇಂಗ್ಲೆಂಡ್‌ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ ಪಡೆದು ಮಿಂಚಿದ್ದ ನೂಮನ್‌ 2ನೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 8 ವಿಕೆಟ್‌ ಉಡೀಸ್‌ ಮಾಡಿದರು. ಇನ್ನೂ ಸಾಜಿದ್‌ ಖಾನ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಸೇರಿ ಒಟ್ಟು 9 ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 8 ಕ್ಯಾಚ್‌ ಬಿಟ್ಟ ಪಾಕ್‌ – ಚರ್ಚೆ ಹುಟ್ಟುಹಾಕಿದ ಕಳಪೆ ಫೀಲ್ಡಿಂಗ್‌ 

Share This Article