ಲಂಡನ್: ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಜನಕರಿಗೆ ವಿಶ್ವಕಪ್ ಕಿರೀಟ ಒಲಿದಿದೆ. ಆದರೆ ಫೈನಲ್‍ನಲ್ಲಿ ಇಂಗ್ಲೆಂಡ್‍ಗೆ ಗೆಲುವು ನೀಡಿದ ಐಸಿಸಿ ನಿಯಮದ ವಿರುದ್ಧ ವಿಶ್ವದಾದ್ಯಂತ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂದ್ಯ ಟೈ ಆದರು ಇಂಗ್ಲೆಂಡ್‍ಗೆ ಹೆಚ್ಚು ಬೌಂಡರಿಗಳ ಆಧಾರ ಮೇಲೆ ಗೆಲುವು ನೀಡಿದ ಐಸಿಸಿ ಈ ನಿಯಮವನ್ನು ಕಟುವಾಗಿ ಟೀಕಿಸಿರುವ ನೆಟ್ಟಿಗರು, ಪಂದ್ಯದಲ್ಲಿ ಬೌಂಡರಿಗಳ ಸಂಖ್ಯೆಯೂ ಒಂದೇ ಆಗಿದ್ದರೆ ಆಟಗಾರರ 10 ಮತ್ತು 12 ನೇ ತರಗತಿಯ ಅಂಕ ನೋಡಿ ವಿಶ್ವಕಪ್ ವಿನ್ನರ್ ತೀರ್ಮಾನ ಮಾಡುತ್ತಿದ್ದರು ಎಂದು ಐಸಿಸಿಯನ್ನು ಕಾಲೆಳದಿದ್ದಾರೆ.
Advertisement
Agar Boundary ka count bhi same aata to 10th/12th k marks se decide hota world Cup winner.#ICCRules #CWC19Final #ENGvsNZ
— Praveen Sharma (@un_root) July 15, 2019
Advertisement
ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಾಲಿವುಡ್ ನಟ ಪರೇಶ್ ರಾವಲ್ ಐಸಿಸಿ ವಿರುದ್ಧ ಕಿಡಿಕಾರಿದ್ದು, ಧೋನಿ ಅವರ ಸೇನಾ ಚಿಹ್ನೆ ಇರುವ ಗ್ಲೋವ್ಸ್ ಬದಲಿಸಲು ಆಸಕ್ತಿ ತೋರಿಸುವ ಐಸಿಸಿ ತನ್ನ ಮೂರ್ಖ ಸೂಪರ್ ಓವರ್ ನಿಯಮಗಳನ್ನು ಬದಲಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
Advertisement
Instead of changing @msdhoni gloves , the stupid @ICC should have changed their super over rules !!!!
— Paresh Rawal (@SirPareshRawal) July 15, 2019
Advertisement
ಇಂಗ್ಲೆಂಡ್‍ನಲ್ಲಿ ವಿಶ್ವಕಪ್ ನಡೆಯುತ್ತಿರುವ ಕಾರಣ ಐಸಿಸಿ ನಿಯಮಗಳು ಇಂಗ್ಲೆಂಡ್ ಪರವಾಗಿ ಇದೆ. ಈ ನಿಯಮದ ಪ್ರಕಾರ ಇಂಗ್ಲೆಂಡ್ ವಿನ್ ಆಗಿದೆ. ಆದರೆ ಇಂಗ್ಲೆಂಡ್ ವಿಶ್ವಕಪ್ ನಲ್ಲಿ ಜಯಗಳಿಸಿದ ರೀತಿಯಲ್ಲಿ ಹೊರದೇಶದಲ್ಲಿ ಜಯಸಾಧಿಸಲು ಸಾಧ್ಯವಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಹಲವಾರು ನೆಟ್ಟಿಗರು ನಿಜವಾದ ವಿನ್ನರ್ ನ್ಯೂಜಿಲೆಂಡ್ ಎಂದು ಟ್ವೀಟ್ ಮಾಡಿದ್ದಾರೆ.
Gully cricket rules are much better than this shit #ICCRules
It's time to say @ICC ???????? pic.twitter.com/2GuOyr9Nlz
— Mahesh (@maheshkhiste79) July 15, 2019
ಇಬ್ಬರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಮಾನ ಅಂಕ ಬಂದಿದ್ದರೂ ಓರ್ವ ವಿದ್ಯಾರ್ಥಿ ಪ್ರಥಮ ಎಂದು ಘೋಷಿಸಲಾಯಿತು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ನಾಲ್ಕು ಅಂಕದ ಪ್ರಶ್ನೆಗೆ ಜಾಸ್ತಿ ಉತ್ತರ ಬರೆದಿದ್ದರೆ ಇನ್ನೊಬ್ಬ ಎರಡು ಅಂಕದ ಪ್ರಶ್ನೆಗೆ ಉತ್ತರ ಬರೆದಿದ್ದ. ಈ ರೀತಿಯಾಗಿ ಇಂಗ್ಲೆಂಡ್ ಈ ಬಾರಿ ಟ್ರೋಫಿ ಗೆದ್ದುಕೊಂಡಿದೆ ಎಂದು ಜನ ಕಾಲೆಳೆಯುತ್ತಿದ್ದಾರೆ.
Teacher: England is first
NZ: but I had the same marks.
Teacher: But see he answered a 4-mark question, and u answered two 2-mark questions. So, he's the winner.
NZ: What the… #ICCRules
— Chetan Bhagat (@chetan_bhagat) July 15, 2019
ವಿಶ್ವಕಪ್ ರೀತಿಯ ದೊಡ್ಡ ಪಂದ್ಯಗಳಲ್ಲಿ ಈ ರೀತಿಯ ನಿಯಮವನ್ನು ಐಸಿಸಿ ಅಳವಡಿಸಿರುವುದು ಸರಿಯಲ್ಲ. ಇನ್ನೂ ಮುಂದೆ ಎದುರಾಳಿ ನೀಡಿದ ಮೊತ್ತವನ್ನು ಬೆನ್ನಟ್ಟಿದರೂ ಹೆಚ್ಚು ಬೌಂಡರಿ ಹೊಡೆದಿಲ್ಲ ಎಂದು ಹೇಳಿ ಎದುರಾಳಿ ತಂಡಕ್ಕೆ ಜಯವನ್ನು ನೀಡುವ ನಿಯಮ ಬಂದರೂ ಬರಬಹುದು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
World cup in ENGLAND
RULES as per ENGLAND
WINNER ENGLAND
OK
ENGLAND PLAY OVER SEA
LET SEE YOU PLAY LIKE YOU DID IN THE WORLD CUP. pic.twitter.com/TuAHvnAvIi
— J.R.Smith (@JRSmith23201631) July 15, 2019
46 ದಿನಗಳಲ್ಲಿ 48 ಪಂದ್ಯಗಳನ್ನು ಆಡಿಸಿ ವಿಶ್ವಕಪ್‍ನಂತಹ ಟೂರ್ನಿಗಳಲ್ಲಿ ಫೈನಲ್ ವಿಜೇತರನ್ನು ಬೌಂಡರಿಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದರೆ ಸೆನ್ಸ್ ಲೆಸ್ ನಿಯಮಗಳನ್ನು ಐಸಿಸಿ ಹೊಂದಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
48 matches, 46 days, and the winner is decided by number of boundaries ???????? Senseless. . #ICCrules.. ????
— Syed Arsalan (@SyedArs33364238) July 14, 2019
ಇನ್ನೂ ಕೆಲವರು ಇಂಗ್ಲೆಂಡ್‍ನ್ನು ಟೀಕಿಸಿ ವಿಡಿಯೋ ಪೋಸ್ಟ್ ಮಾಡಿದ್ದು, ಗಲ್ಲಿ ಕ್ರಿಕೆಟ್ ನಿಯಮಗಳು ಐಸಿಸಿ ಕ್ರಿಕೆಟ್ ನಿಯಮಗಳಿಗಿಂತ ಉತ್ತಮವಾಗಿವೆ ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲ ಇಂಡಿಯಾದ ಅಭಿಮಾನಿಗಳು ಸೆಮಿಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ಅವರನ್ನು ಗುಡ್ ಥ್ರೋ ಮೂಲಕ ಔಟ್ ಮಾಡಿದ್ದ ಗುಪ್ಟಿಲ್ ಅವರನ್ನು ತಮ್ಮದೇ ಶೈಲಿಯಲ್ಲಿ ಟ್ರೋಲ್ ಮಾಡಿದ್ದಾರೆ.
Let's see the Final… ????#ENGvNZ #CWC19Final pic.twitter.com/4XDjtJoSLJ
— Pakistan Cricket ???????? (@PakistanCric10) July 14, 2019
ಭಾನುವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್ ಗಳಲ್ಲಿ ಇಂಗ್ಲೆಂಡ್‍ಗೆ 241 ರನ್‍ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಈ ಗುರಿಯನ್ನು ಬೆನ್ನಟ್ಟಲಾಗದೆ ಕೊನೆಯಲ್ಲಿ ಬೆನ್ ಸ್ಟೋಕ್ಸ್ ಅವರ ಸೂಪರ್ ಬ್ಯಾಟಿಂಗ್‍ಯಿಂದ ಪಂದ್ಯದಲ್ಲಿ ಟೈ ಸಾಧಿಸಿತು.
India and Dhoni Fans after Woakes took Guptill's wicket pic.twitter.com/bMe03ON91Q
— Chandler Bing (@SarcasmChamp) July 14, 2019
ಪಂದ್ಯ ಟೈ ಆದ ಕಾರಣ ಐಸಿಸಿ ನಿಯಮದಂತೆ ಸೂಪರ್ ಓವರ್ ಆಡಿಸಲು ತೀರ್ಮಾನ ಮಾಡಲಾಯಿತು. ಸೂಪರ್ ಓವರ್ ನಲ್ಲಿ ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಬಟ್ಲರ್ ಮತ್ತು ಸ್ಟೋಕ್ಸ್ ಅವರು ತಲಾ ಒಂದೊಂದು ಬೌಡರಿ ಸಿಡಿಸಿ ನ್ಯೂಜಿಲೆಂಡ್ ತಂಡಕ್ಕೆ 15 ರನ್‍ಗಳ ಗುರಿ ನೀಡಿದರು. ಇದನ್ನು ಬೆನ್ನಟ್ಟಿದ ಕೀವೀಸ್ ಆಟಗಾರರಾದ ಜಿಮ್ಮಿ ನೀಶಮ್ ಮತ್ತು ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಅವರ ಬೌಲಿಂಗ್ ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು ನೀಶಮ್ ಅವರು ಒಂದು ಸಿಕ್ಸರ್ ಸಿಡಿಸಿ ಗೆಲ್ಲುವ ಭರವಸೆ ಮೂಡಿಸಿದರು.
https://twitter.com/sagarcasm/status/1150461607383719938
ಆದರೆ ಕೊನೆಯ ಎಸೆತದಲ್ಲಿ ಗೆಲ್ಲಲು ನ್ಯೂಜಿಲೆಂಡ್‍ಗೆ 2 ರನ್ ಬೇಕಿತ್ತು. ಆಗ ಸ್ಟ್ರೈಕ್‍ನಲ್ಲಿ ಇದ್ದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಎಸೆದ ಕೊನೆಯ ಎಸೆತದಲ್ಲಿ 2 ರನ್ ಕದಿಯಲು ವಿಫಲರಾದರು. ಜೋಫ್ರಾ ಅವರ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ತಳ್ಳಿದ ಗುಪ್ಟಿಲ್ ಎರಡು ರನ್ ಕದಿಯುವಲ್ಲಿ ಯಶಸ್ವಿಯಾಗಲಿಲ್ಲ. ರಾಯ್ ಅವರು ಎಸೆದ ಉತ್ತಮ ಥ್ರೋವನ್ನು ಬಟ್ಲರ್ ಹಿಡಿದು ರನ್ ಔಟ್ ಮಾಡಿದರು. ಈ ಮೂಲಕ ಸೂಪರ್ ಓವರ್ ಕೂಡ ಟೈ ಆಯ್ತು.
ಫೈನಲ್‍ನಲ್ಲಿ ಸೂಪರ್ ಓವರ್ ಕೂಡ ಟೈ ಆದ ಕಾರಣ ಐಸಿಸಿ ನಿಯಮದಂತೆ ಹೆಚ್ಚು ಬೌಂಡರಿ ಸಿಡಿಸಿದ ತಂಡಕ್ಕೆ ಗೆಲುವು ಎಂದು ಘೋಷಣೆ ಮಾಡಲಾಯಿತು. ಪಂದ್ಯದಲ್ಲಿ ಹೆಚ್ಚು ಬೌಂಡರಿ ಹೊಡೆದಿದ್ದ ಇಂಗ್ಲೆಂಡ್ ಗೆಲುವು ಸಾಧಿಸಿತು. ಈ ಮೂಲಕ ಮೊದಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಮುತ್ತುಕ್ಕಿತು. ಸತತ ಎರಡನೇ ಬಾರಿ ಫೈನಲ್‍ನಲ್ಲಿ ಸೋತ ನ್ಯೂಜಿಲೆಂಡ್ ದ್ವಿತೀಯಸ್ಥಾನಿಯಾಗಿ ನಿರ್ಗಮಿಸಿತು.