– ನಾಯಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಮಹಿಳೆ
ಲಂಡನ್: ಬೆಲ್ಜಿಯಂ ಶೆಫರ್ಡ್ ನಾಯಿಯೊಂದಕ್ಕೆ ಪಾಪಿಗಳು 60 ಕೆಜಿ ಕಲ್ಲು ಕಟ್ಟಿ ನದಿಗೆ ಎಸೆದ ಅಮಾನವೀಯ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.
ಪಾಪಿಗಳು ಇಂಗ್ಲೆಂಡ್‍ನ ಮೂರನೇ ಅತಿದೊಡ್ಡ ನದಿ ಟ್ರೆಂಟ್‍ಗೆ ನಾಯಿಯನ್ನು ಎಸೆದಿದ್ದರು. ಸಾವು ಬದುಕಿನ ಮಧ್ಯೆ ನಾಯಿ ಹೋರಾಟ ನಡೆಸಿತ್ತು. ಇದನ್ನು ನೋಡಿದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಹಾಗೂ ಆಕೆಯ ಪತಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
Advertisement
Advertisement
ನಾಯಿಯ ಕಾಲಿಗೆ ಪಾಪಿಗಳು 50ರಿಂದ 60 ಕೆಜಿ ತೂಕದ ಕಲ್ಲು ಕಟ್ಟಿದ್ದರು. ಹೀಗಾಗಿ ನಾಯಿಗೆ ನದಿಯಲ್ಲಿ ಈಜಿ ದಡ ಸೇರಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ನಾಯಿಯನ್ನು ರಕ್ಷಣೆ ಮಾಡಿದ ಜೇನ್ ಹಾರ್ಪರ್ ನೀಡಿದ ಪ್ರಕಾರ, ಅವರು ಸೋಮವಾರ ಬೆಳಗ್ಗೆ 8.45ಕ್ಕೆ ನಾಂಟಿಗ್‍ಹ್ಯಾಮ್‍ಶೈರ್ ನಲ್ಲಿ ವಾಕ್ ಮಾಡುತ್ತಿದ್ದರು. ಆಗ ವಿಚಿತ್ರ ಶಬ್ದ ಕೇಳಿಸಿಕೊಂಡ ಜೇನ್ ಸ್ನೇಹಿತ ಯಾರೋ ನದಿಯ ನೀರಿನಲ್ಲಿ ಮುಳುಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದರು. ತಕ್ಷಣವೇ ಜೇನ್ ನದಿಯ ಬಳಿ ಹೋಗಿ ನೋಡಿದಾಗ ನಾಯಿ ಎಂದು ಗೊತ್ತಾಯಿತು. ನೀರಿನಿಂದ ಹೊರಗೆ ತೆಗೆಯದಿದ್ದರೆ ಅದು ಸಾಯುತ್ತದೆ ಎಂದು ಅರಿತ ಜೇನ್ ಸ್ನೇಹಿತ ನೀರಿಗೆ ಹಾರಿ ನಾಯಿಯನ್ನು ಹೊರಗೆ ತರಲು ಪ್ರಯತ್ನಿಸಿದರು. ನಾಯಿಯನ್ನು ದಡಕ್ಕೆ ಎಳೆದ ಜೀನ್, ಅದರ ಕಾಲಿಗೆ ಕಟ್ಟಿದ ಕಲ್ಲನ್ನು ನೋಡಿದರು ಎಂದು ವರದಿಯಾಗಿದೆ.
Advertisement
ರಕ್ಷಣೆ ಮಾಡಿದ ನಾಯಿಯನ್ನು ತಕ್ಷಣವೇ ಪಶುವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ನಾಯಿ ಚೇತರಿಸಿಕೊಳ್ಳುತ್ತಿದೆ. ಇತ್ತ ಪೊಲೀಸರು ನಾಯಿಯನ್ನು ನೀರಿಗೆ ಎಸೆದ ಪಾಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಂಟಿಗ್‍ಹ್ಯಾಮ್‍ಶೈರ್ ಪೊಲೀಸ್ ಅಧಿಕಾರಿ ಪಿಸಿ ಆಡಮ್ ಪೇಸ್, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಾಯಿಯನ್ನು ಸ್ನೇಹಿತರಿಬ್ಬರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ನಾಯಿಯ ಸ್ಥಿತಿ ಗಂಭೀರವಾಗಿದೆ. ಆದಾಗ್ಯೂ ಅದು ಸ್ವಲ್ಪ ಆಹಾರವನ್ನು ತಿನ್ನುವ ಮೂಲಕ ಬದುಕುತ್ತದೆ ಎನ್ನುವ ವಿಶ್ವಾಸವನ್ನು ತೋರಿಸಿದೆ ಎಂದು ತಿಳಿಸಿದ್ದಾರೆ.
A brave member of the public rescued a dog that was tied to a heavy rock and was drowning in the River Trent this morning.
Officers are appealing for information from anyone who saw the incident involving the Belgian Shepherd, near Long Lane, Farndon, at around 8.45am today. pic.twitter.com/T5VvOUiMxC
— Notts Police (@nottspolice) January 6, 2020