ಲಂಡನ್: ವಿಶ್ವವ್ಯಾಪಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾವನ್ನು ಓಡಿಸಲು ವೈದ್ಯರು ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ಈ ಹೋರಾಟದಲ್ಲಿ ಭಾಗಿಯಾಗಲು ಮಿಸ್ ಇಂಗ್ಲೆಂಡ್-2019 ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಮಿಸ್ ಇಂಗ್ಲೆಂಡ್-2019 ಭಾಷಾ ಮುಖರ್ಜಿ ವೈದ್ಯರಾಗಿ ತಮ್ಮ ವೃತ್ತಿ ಜೀವನವನ್ನು ಪುನರಾರಂಭಿಸಿದ್ದಾರೆ. ಪ್ರವಾಸದ ಸಲುವಾಗಿ ಭಾರತದಲ್ಲಿದ್ದ ಮುಖರ್ಜಿ, ಕೊರೊನಾ ವೈರಸ್ ಪ್ರಕರಣಗಳು ಜಗತ್ತಿನಾದ್ಯಂತ ಹೆಚ್ಚಾಗುತ್ತಿದ್ದಂತೆ ವೈದ್ಯರಾಗಿ ತಮ್ಮ ಕೆಲಸವನ್ನು ಮುಂದುವರಿಸಲು ಯುಕೆಗೆ ಮರಳಿದ್ದಾರೆ.
Advertisement
https://www.instagram.com/p/B-Hr4eXnaOZ/
Advertisement
ಕೋಲ್ಕತ್ತಾದಲ್ಲಿ ಜನಿಸಿದ ಭಾಷಾ ಮುಖರ್ಜಿ ಮೂಲತಃ ವೈದ್ಯರು. ಕಳೆದ ವರ್ಷ ಆಗಸ್ಟ್ನಲ್ಲಿ ನಡೆದ ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಮಿಸ್ ಇಂಗ್ಲೆಂಡ್-2019 ಕಿರೀಟವನ್ನು ಮೂಡಿಗೇರಿಸಿಕೊಂಡಿದ್ದರು. ಇದಾದ ನಂತರ ತನ್ನ ವೈದ್ಯಕೀಯ ವೃತ್ತಿ ಜೀವನದಿಂದ ವಿರಾಮ ತೆಗೆದುಕೊಂಡು ನಂತರ ಚಾರಿಟಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದರು. ಆದರೆ ಈಗ ಕೊರೊನಾದಿಂದ ದೇಶ ಸಂಕಷ್ಟದಲ್ಲಿ ಸಲುಕಿದೆ ಎಂದು ಮತ್ತೆ ತನ್ನ ವೈದ್ಯಕೀಯ ವೃತ್ತಿಗೆ ಬಂದಿದ್ದಾರೆ.
Advertisement
https://www.instagram.com/p/B9jAzMZHDpD/
Advertisement
ಈ ವಿಚಾರವಾಗಿ ಮಾತನಾಡಿರುವ ಮುಖರ್ಜಿ, ಇದು ನನಗೆ ಕಠಿಣ ನಿರ್ಧಾರ ಎಂದು ಎನಿಸುತ್ತಿಲ್ಲ. ನಾನು ಸದ್ಯ ಆಫ್ರಿಕಾ ಮತ್ತು ಟರ್ಕಿ ಪ್ರವಾಸ ಮುಗಿಸಿದ್ದೇನೆ. ಏಷ್ಯಾ ದೇಶಗಳ ಪೈಕಿ ಮೊದಲು ನಾನು ಭಾರತಕ್ಕೆ ಪ್ರವಾಸ ಕೈಗೊಂಡಿದ್ದೆ. ಭಾರತದ ನಂತರ ನಾನು ಇನ್ನೂ ಹಲವಾರು ದೇಶಗಳಿಗೆ ಪ್ರವಾಸಕ್ಕೆ ಹೋಗಬೇಕಿತ್ತು. ಆದರೆ ಕೊರೊನಾ ವೈರಸ್ನಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಮತ್ತೆ ವೈದ್ಯಕೀಯ ವೃತ್ತಿಗೆ ಮರಳಿ ಜನಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಎಂ.ಎಸ್. ಮುಖರ್ಜಿ ಮಾರ್ಚ್ ಆರಂಭದ ವಾರಗಳಲ್ಲಿ ಭಾರತದಲ್ಲಿದ್ದರು. ಈ ನಡುವೆ ಯುಕೆಯಲ್ಲಿ ಕೊರೊನಾ ವೈರಸ್ ನಿಂದ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಈ ಬಗ್ಗೆ ಪೂರ್ವ ಇಂಗ್ಲೆಂಡ್ನ ಬೋಸ್ಟನ್ ನಲ್ಲಿರುವ ಪಿಲ್ಗ್ರಿಮ್ ಆಸ್ಪತ್ರೆಯಲ್ಲಿರುವ ಅವರ ಮಾಜಿ ಸಹೋದ್ಯೋಗಿಗಳು ದೇಶದಲ್ಲಿ ಪರಿಸ್ಥಿತಿ ಬಹಳ ಭೀಕರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕಾರಣದಿಂದ ಮುಖರ್ಜಿ ಮತ್ತೆ ವೈದ್ಯ ವೃತ್ತಿಗೆ ಮರಳಲು ತೀರ್ಮಾನಿಸಿದ್ದಾರೆ.
ನಾನು ಕೊರೊನಾ ವೈರಸ್ ಬಗ್ಗೆ ನನ್ನ ಸಹೋದ್ಯೋಗಿಗಳಿಂದ ಕೇಳಿ ತಿಳಿದುಕೊಂಡೆ. ಅವರು ಅಲ್ಲಿ ತುಂಬಾ ಕಷ್ಟಪಡುತ್ತಿದ್ದರು. ಆಗ ನನಗೆ ಅವರ ಕಷ್ಟದಲ್ಲಿ ಭಾಗಿಯಾಗಬೇಕು ಮತ್ತು ವೈದ್ಯಕೀಯ ವೃತ್ತಿಗೆ ಮರಳಬೇಕು ಅನಿಸಿತು. ಅದಕ್ಕಾಗಿ ಭಾರತದಿಂದ ನನ್ನ ದೇಶಕ್ಕೆ ಬಂದೆ. ಅಲ್ಲಿಂದ ಬಂದ ನಂತರ ಎರಡು ವಾರ ಸ್ವಯಂ ನಿರ್ಬಂಧದಲ್ಲಿ ಇದ್ದೆ. ಇದಾದ ನಂತರ ಮಂಗಳವಾರದಿಂದ ಪಿಲ್ಗ್ರಿಮ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಮುಖರ್ಜಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
https://www.instagram.com/p/B8_g9kNHEab/
ಇಂಗ್ಲೆಂಡ್ ನಲ್ಲೂ ಕೂಡ ಕೊರೊನಾ ಮಹಾಮಾರಿ ರುದ್ರನರ್ತನ ಮಾಡುತ್ತಿದೆ. ಇಲ್ಲಿಯವರೆಗೂ ಯುಕೆಯಲ್ಲಿ ಸುಮಾರು 786 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 50 ಸಾವಿರಕ್ಕೂ ಹೆಚ್ಚು ಜನ ಕೊರೊನಾ ಸೋಂಕಿತರು ಇದ್ದಾರೆ.