ನವದೆಹಲಿ: ತಮ್ಮ ಟ್ವಿಟ್ಟರ್ ಮೂಲಕವೇ ಭವಿಷ್ಯದ ಘಟನೆಗಳ ಕುರಿತು ಸುಳಿವು ನೀಡುತ್ತಿರುವ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಪ್ರಧಾನಿ ಮೋದಿ ಅವರು ಇಂದು ನೀಡಿದ ವಿಡಿಯೋ ಸಂದೇಶದ ಬಳಿಕ ಆರ್ಚರ್ ಅವರ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಅನೇಕ ಬಾರಿ ಭವಿಷ್ಯದ ಘಟನೆಗಳ ಬಗ್ಗೆ ಸುಳಿವು ನೀಡುವ ಮೂಲಕ ಅತೀಂದ್ರಿಯ ಶಕ್ತಿಯನ್ನು ಪ್ರದರ್ಶಿಸಿರುವ ಇಂಗ್ಲೆಡ್ ವೇಗದ ಬೌಲರ್ ಜೋಫ್ರಾ ಆರ್ಚರ್, ಮಗದೊಮ್ಮೆ ಸುದ್ದಿಯಲ್ಲಿದ್ದಾರೆ.
Advertisement
Advertisement
ಮಾರ್ಚ್ 23ರಂದು ದೇಶದ ಜನರಲ್ಲಿ ಮನವಿ ಮಾಡಿದ್ದ ಪ್ರಧಾನಿ ಮೋದಿ ಮೂವರು ವಾರಗಳ ಲಾಕ್‍ಡೌನ್ ಮಾಹಿತಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಇತ್ತ 2017ರ ಅಕ್ಟೋಬರ್ ನಲ್ಲಿ ಟ್ವೀಟ್ ಮಾಡಿದ್ದ ಆರ್ಚರ್ ‘ಮನೆಯಲ್ಲೇ ಮೂರು ವಾರಗಳ ಉಳಿವುಯುವುದು ಸಾಕಾಗುವುದಿಲ್ಲ’ ಎಂದು ಬರೆದುಕೊಂಡಿದ್ದರು.
Advertisement
ಲಾಕ್‍ಡೌನ್ ಆದೇಶದ ಬಳಿಕ ಮತ್ತೆ ಶುಕ್ರವಾರ ವಿಡಿಯೋ ಸಂದೇಶ ರವಾನೆ ಮಾಡಿರೋ ಮೋದಿ ಅವರು, ಏಪ್ರಿಲ್ 5ರ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡಿ ದೀಪ ಬೆಳಗಿ ಎಂದು ಮನವಿ ಮಾಡಿ ಎಲ್ಲರೂ ಒಟ್ಟಾಗೋಣ ಎಂದು ಮನವಿ ಮಾಡಿದ್ದರು. ಸದ್ಯ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳಲ್ಲಿ ಮೋದಿ ಅವರ ಮನವಿಯಂತೆ 9 ಫಾರ್ಮ್ 9 ಲೈಟ್ ಅಫ್ ಮಾಡಿ ಟಾರ್ಚ್ ಹಾಕಿ ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ವೈರಲ್ ಆಗುತ್ತಿದೆ.
Advertisement
ಆರ್ಚರ್ ಅವರು ಸುಮಾರು ಆರು ವರ್ಷಗಳ ಹಿಂದೆಯೇ ಭವಿಷ್ಯತ್ ಪರಿಣಾಮದ ಬಗ್ಗೆ ಟ್ವೀಟ್ ಮಾಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಆರ್ಚರ್ ಅವರ ಟ್ವೀಟ್ ಭಾರೀ ವೈರಲ್ ಆಗಿತ್ತು. ‘ಓಡಲು ಜಾಗವಿಲ್ಲದ ಆ ದಿನಗಳು ಬರಲಿದೆ’ ಎಂದು ಜೋಫ್ರಾ ಆರ್ಚರ್ 2014ರ ಆಗಸ್ಟ್ 20ರಂದು ಟ್ವೀಟ್ ಮಾಡಿದ್ದರು. ಅಕ್ಷರಶ: ಜೋಫ್ರಾ ಆರ್ಚರ್ ನುಡಿದ ಭವಿಷ್ಯ ನಿಜವಾಗಿದೆ. ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆಟಗಾರರೆಲ್ಲ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಕ್ರಿಕೆಟಿಗರ ಅಭ್ಯಾಸ ಸಂಪೂರ್ಣವಾಗಿ ರದ್ದುಗೊಂಡಿದೆ. ಮೈದಾನಕ್ಕಿಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವೈರಲ್ ಟ್ವೀಟ್ ಗಮನಿಸಿರುವ ನೆಟ್ಟಿಗರು ಆರ್ಚರ್ ಅವರನ್ನು ಗಾಡ್ (ದೇವರು) ಎಂದು ಸಂಬೋಧಿಸುತ್ತಾರೆ. ಜೋಫ್ರಾ ಆರ್ಚರ್ ಅವರ ಟ್ವೀಟ್‍ಗಳು ಸಾಕಷ್ಟು ಅಚ್ಚರಿಯನ್ನು ಮೂಡಿಸಿದೆ.
ಕಳೆದ ಏಕದಿನ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಜೋಫ್ರಾ ಆರ್ಚರ್, ಬಳಿಕ ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್ ಸರಣಿ ವೇಳೆ ಟೆಸ್ಟ್ ಕ್ರಿಕೆಟ್‍ಗೂ ಡೆಬ್ಯು ಮಾಡಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಹೊರಗುಳಿಯುವಂತಾಗಿದೆ.